ಮಗನ ಬಲವಾದ ಏಟಿಗೆ ತತ್ತರಿಸಿ ಬಿದ್ದು ಮೃತಪಟ್ಟ ವೃದ್ಧ ತಾಯಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಮನಕಲಕುವ ದೃಶ್ಯ
ದೆಹಲಿ: ಹೆತ್ತ ತಾಯಿಯೊಂದಿಗೆ ಜಗಳ ಮಾಡಿದ ಮಗ, ಆಕೆಗೆ ಬಲವಾಗಿ ಒಂದು ಏಟು ಕೊಟ್ಟಿದ್ದಾನೆ. ಇದರ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ವೃದ್ಧೆ (76)ಯ ಜೀವ ಹೋಗಿದೆ. ಈ ಕೆಟ್ಟ ಘಟನೆ ರಾಷ್ಟ್ರ ರಾಜಧಾನಿಯ ದ್ವಾರಕಾದ ಬಿಂದಾಪುರ್ದಲ್ಲಿ ನಡೆದಿದೆ. ಇವರ ಗಲಾಟೆ, ಹೊಡೆದಾಟ.. ನಂತರ ಮಹಿಳೆ ರಸ್ತೆ ಮೇಲೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಸೋಮವಾರವೇ ನಡೆದ ಘಟನೆಯಾಗಿದ್ದು, ಇಂದು ಬೆಳಕಿಗೆ ಬಂದಿದೆ. ಮಹಿಳೆಯ ಪುತ್ರ ರಣವೀರ್ ಮತ್ತು ಆತನ ಪತ್ನಿ ಸೋಮವಾರ ವೃದ್ಧೆಯೊಂದಿಗೆ ರಸ್ತೆ […]
ದೆಹಲಿ: ಹೆತ್ತ ತಾಯಿಯೊಂದಿಗೆ ಜಗಳ ಮಾಡಿದ ಮಗ, ಆಕೆಗೆ ಬಲವಾಗಿ ಒಂದು ಏಟು ಕೊಟ್ಟಿದ್ದಾನೆ. ಇದರ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ವೃದ್ಧೆ (76)ಯ ಜೀವ ಹೋಗಿದೆ. ಈ ಕೆಟ್ಟ ಘಟನೆ ರಾಷ್ಟ್ರ ರಾಜಧಾನಿಯ ದ್ವಾರಕಾದ ಬಿಂದಾಪುರ್ದಲ್ಲಿ ನಡೆದಿದೆ. ಇವರ ಗಲಾಟೆ, ಹೊಡೆದಾಟ.. ನಂತರ ಮಹಿಳೆ ರಸ್ತೆ ಮೇಲೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಸೋಮವಾರವೇ ನಡೆದ ಘಟನೆಯಾಗಿದ್ದು, ಇಂದು ಬೆಳಕಿಗೆ ಬಂದಿದೆ.
ಮಹಿಳೆಯ ಪುತ್ರ ರಣವೀರ್ ಮತ್ತು ಆತನ ಪತ್ನಿ ಸೋಮವಾರ ವೃದ್ಧೆಯೊಂದಿಗೆ ರಸ್ತೆ ಮೇಲೆಯೇ ನಿಂತು ಜಗಳವಾಡಿದ್ದಾರೆ. ಅದಾದ ಬಳಿಕ ರಣವೀರ್ ತನ್ನ ತಾಯಿಗೆ ಬಲವಾಗಿ ಹೊಡೆದಿದ್ದಾನೆ. ಈ ಜಗಳ ಶುರುವಾಗಿದ್ದು ಪಾರ್ಕಿಂಗ್ ವಿಚಾರಕ್ಕೆ. ಮೂವರೂ ತುಂಬ ಹೊತ್ತು ಕೂಗಾಡಿಕೊಂಡಿದ್ದಾರೆ. ನಂತರ ಮಗನ ಹೊಡೆತ ತಾಳಲಾಗದೆ ಕೆಳಗೆ ಬಿದ್ದ ಮಹಿಳೆಯನ್ನು ಮೊದಲು ಆತನ ಪತ್ನಿ ಮೇಲೆತ್ತಲು ಪ್ರಯತ್ನಿಸಿದ್ದಾರೆ. ಆದರೆ ವೃದ್ಧೆ ಏಳಲಿಲ್ಲ. ಆಗಲೇ ಎಚ್ಚರ ತಪ್ಪಿದ್ದರು. ಕುಟುಂಬದವರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ವೈದ್ಯರು ಮಹಿಳೆ ಮೃತಪಟ್ಟಿದ್ದಾಗಿ ಘೋಷಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವೃದ್ಧೆಯ ದೇಹವನ್ನು ಪೋಸ್ಟ್ಮಾರ್ಟಮ್ ಮಾಡಲಾಗಿದ್ದು ಇನ್ನೂ ವರದಿ ಬಂದಿಲ್ಲ. ಸಾವಿಗೆ ನಿಜವಾದ ಕಾರಣ ಇನ್ನೂ ಗೊತ್ತಾಗಿಲ್ಲ. ರಿಪೋರ್ಟ್ ಬಂದ ಕೂಡಲೇ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದೂ ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ದೆಹಲಿಯಲ್ಲಿ 22 ವರ್ಷದ ಯುವತಿಯೊಬ್ಬಳು ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಳು. ಆಕೆ ಬೀಳುತ್ತಿದ್ದಂತೆ ವ್ಯಕ್ತಿಯೊಬ್ಬ ಬಂದು ಆ ದೇಹವನ್ನು ಎತ್ತಿದ್ದ. ಅದಾದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು. ಯುವತಿ ಬಿದ್ದು ಮೃತಪಟ್ಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ನೆರಮನೆಯಾತ ಪೊಲೀಸರಿಗೆ ದೂರು ನೀಡಿದ್ದ.
Horrible. A man in Delhi slaps his old mother, she dies. pic.twitter.com/NsAO8PZb7b
— Sandeep Singh (@PunYaab) March 16, 2021
ಇದನ್ನೂ ಓದಿ: ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಅಪರಾಧಿಗೆ 8 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ