ಪುರುಷರ ದಬ್ಬಾಳಿಕೆ ಸಹಿಸೋಕಾಗಲ್ಲವೆಂದು ಪೊಲೀಸ್ ಹುದ್ದೆ ಬಿಟ್ಟು ಅಡಲ್ಟ್ ಸ್ಟಾರ್ ಆದ ಯುವತಿ; ಕೋಟ್ಯಂತರ ರೂಪಾಯಿಗೆ ಒಡತಿ
Only Fans ಎಂಬುದು ಒಂದು ಅಶ್ಲೀಲ ಚಿತ್ರ, ವಿಡಿಯೋಗಳ ಪೇಜ್. ಅಲ್ಲಿ ರೋಸ್ ಕೂಡ ಅಕೌಂಟ್ ಹೊಂದಿದ್ದು, ತಮ್ಮ ಮಾದಕ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಇವರ ಫೋಟೋಗಳನ್ನು ನೋಡಲಿಚ್ಛಿಸುವವರು ಹಣಕೊಟ್ಟು ಸಬ್ಸ್ಕ್ರೈಬ್ (ನೋಂದಣಿ) ಮಾಡಿಕೊಳ್ಳಬೇಕು.
ಕೆಲಸದ ಜಾಗದಲ್ಲಿ ಪುರುಷ ಅಧಿಕಾರಿಗಳು ತುಂಬ ಪ್ರಾಬಲ್ಯ ಸಾಧಿಸುತ್ತಾರೆ. ಅವರ ಅಡಿಯಲ್ಲಿ ಕರ್ತವ್ಯ ನಿರ್ವಹಣೆ ಸಾಧ್ಯವೇ ಇಲ್ಲ ಎಂದು ಪೊಲೀಸ್ ಹುದ್ದೆಯನ್ನು ಬಿಟ್ಟು, ಅಡಲ್ಟ್ ಸ್ಟಾರ್ ತಾರೆಯಾದ ಯುವತಿ, ಇದೀಗ ಲಕ್ಷಲಕ್ಷ ದುಡಿಯುತ್ತಿದ್ದಾರೆ. ಅಷ್ಟಲ್ಲದೆ, 2,65,000 ಪೌಂಡ್ (1 ಕೋಟಿ ರೂಪಾಯಿಗೂ ಹೆಚ್ಚು) ಮೌಲ್ಯದ ಲ್ಯಾಂಬೋರ್ಗಿನಿ ಐಷಾರಾಮಿ ಕಾರನ್ನೂ ಖರೀದಿಸಿದ್ದಾರೆ. ಇಲ್ಲಿ ಅಡಲ್ಟ್ ಸ್ಟಾರ್ ಎಂದರೆ ಆಕೆ ನೀಲಿಚಿತ್ರಗಳಲ್ಲಿ ನಟಿಸುವುದಿಲ್ಲ. ಬದಲಿಗೆ ತಮ್ಮ ಅಶ್ಲೀಲ, ಮಾದಕ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಪೋಸ್ಟ್ ಮಾಡುವ ಮೂಲಕ ಹಣ ಗಳಿಸುತ್ತಿದ್ದಾರೆ.
ಯುವತಿಯ ಹೆಸರು ಷಾರ್ಲೆಟ್ ರೋಸ್. ಲಂಡನ್ನ ಎಸ್ಸೆಕ್ಸ್ನವರು. ಪೊಲೀಸ್ ಹುದ್ದೆಗೆ ಸೇರಿದ್ದ ರೋಸ್ಗೆ ಅಲ್ಲಿನ ಪುರುಷ ಪ್ರಧಾನ ವಾತಾವಾರಣ ಇಷ್ಟವಾಗಲಿಲ್ಲ. ಹಾಗಾಗಿ 2014ರಲ್ಲಿ ಆ ಹುದ್ದೆಯನ್ನು ತ್ಯಜಿಸಿದರು. ಪೊಲೀಸ್ ಆಗುವುದು ನನ್ನ ಕನಸಾಗಿತ್ತು. ಇದಕ್ಕಾಗಿ 10 ವರ್ಷ ಕಷ್ಟಪಟ್ಟಿದ್ದೆ. ನಂತರ ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣಳಾಗಿದ್ದೆ. ಉದ್ಯೋಗಕ್ಕೂ ಸೇರಿದೆ. ಆದರೆ ಅಲ್ಲಿ ತುಂಬ ದಿನ ಇರಲು ನನಗೆ ಸಾಧ್ಯವಾಗಲಿಲ್ಲ. ಪುರುಷ ಅಧಿಕಾರಿಗಳ ಡಾಮಿನೇಟ್ ಮನಸ್ಥಿತಿಯ ಬಗ್ಗೆ ಹೇಸಿಗೆ ಹುಟ್ಟಿತು. ಹಾಗಾಗಿ ಉದ್ಯೋಗ ಬಿಟ್ಟೆ ಎಂದು ರೋಸ್ ತಿಳಿಸಿದ್ದಾರೆ. ಪೊಲೀಸ್ ಹುದ್ದೆ ಬಿಟ್ಟ ಮೇಲೆ ಆಯ್ಕೆ ಮಾಡಿಕೊಂಡ ಹಾದಿ, ನೋಡುಗರಿಗೆ ಅಶ್ಲೀಲ ಎನ್ನಿಸಿದರೂ, ನಾನು ನನ್ನ ಲಿಮಿಟ್ ಎಂದೂ ಮೀರಿಲ್ಲ. ನನಗೆ ಕಂಫರ್ಟ್ ಎನ್ನಿಸುವಷ್ಟು ಮಾತ್ರ ಎಕ್ಸ್ಪೋಸ್ ಮಾಡಬಲ್ಲೆ ಎಂದೂ ಅವರು ತಿಳಿಸಿದ್ದಾರೆ.
ರೋಸ್ ತಮ್ಮ ಮಾದಕ, ಸೆಕ್ಸೀ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಪೋಸ್ಟ್ ಮಾಡುವ ಮೂಲಕ ಸುಮಾರು 2.3 ಮಿಲಿಯನ್ (ಸುಮಾರು 16 ಕೋಟಿ ರೂಪಾಯಿ) ಅಮೆರಿಕನ್ ಡಾಲರ್ ಸಂಪಾದನೆ ಮಾಡಿದ್ದಾರೆ. 2014ರಲ್ಲಿ ಪೊಲೀಸ್ ಉದ್ಯೋಗ ಬಿಟ್ಟೆ. ಅದಾದ ಬಳಿಕ ಏನು ಮಾಡಬೇಕು ಎಂಬ ಗೊಂದಲದಲ್ಲಿ ಇದ್ದೆ. ಆಗ ನನ್ನ ಸ್ನೇಹಿತೆಯೊಬ್ಬಳು ಈ ಸಲಹೆ ಕೊಟ್ಟರು. ಹಾಗೇ ನಾನು ಸುಂದರ ಕಾರುಗಳ ಜತೆ ಗ್ಲಾಮರಸ್ ಫೋಟೋಗಳನ್ನು ತೆಗೆಸಿ ಪೋಸ್ಟ್ ಮಾಡತೊಡಗಿದೆ. ಒಳ ಉಡುಪಗಳ ಆ್ಯಡ್ಗೆ ರೂಪದರ್ಶಿಯಾದೆ. ನಂತರ 2016ರಲ್ಲಿ Only Fans ಎಂಬ ಅಡಲ್ಟ್ ಪೇಜ್ಗೆ ಜಾಯಿನ್ ಆದೆ. ಅಲ್ಲಿ ನನ್ನ ಮಾದಕ ಫೋಟೋಗಳನ್ನು ಪೋಸ್ಟ್ ಮಾಡಿ ಹಣಗಳಿಸಲು ಶುರು ಮಾಡಿದೆ. ತಿಂಗಳಿಗೆ 115,000 -1,50,000 ಬ್ರಿಟಿಷ್ ಪೌಂಡ್ಗಳಷ್ಟು ಸಂಪಾದನೆ ಆಗುತ್ತಿತ್ತು ಎಂದು ರೋಸ್ ತಿಳಿಸಿದ್ದಾರೆ. ಇನ್ನು ನನಗೆ ದೊಡ್ಡ ಅಭಿಮಾನಿಗಳ ಬಳಗ ಸೃಷ್ಟಿಯಾಗಿದೆ. ಅವರೊಂದಿಗೆ ಸಂವಹನವನ್ನೂ ನಡೆಸುತ್ತೇನೆ. ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡುತ್ತೇನೆ ಎಂದಾಕ್ಷಣ ಎಲ್ಲವನ್ನೂ ಮಾಡುತ್ತೇನೆ ಎಂದಲ್ಲ. ನನಗೆ ನನ್ನದೇ ಆತ ಇತಿಮಿತಿಗಳಿವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
Only Fans ಎಂಬುದು ಒಂದು ಅಶ್ಲೀಲ ಚಿತ್ರ, ವಿಡಿಯೋಗಳ ಪೇಜ್. ಅಲ್ಲಿ ರೋಸ್ ಕೂಡ ಅಕೌಂಟ್ ಹೊಂದಿದ್ದು, ತಮ್ಮ ಮಾದಕ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಇವರ ಫೋಟೋಗಳನ್ನು ನೋಡಲಿಚ್ಛಿಸುವವರು ಹಣಕೊಟ್ಟು ಸಬ್ಸ್ಕ್ರೈಬ್ (ನೋಂದಣಿ) ಮಾಡಿಕೊಳ್ಳಬೇಕು. ಇದೇ ಸದ್ಯ ಅವರ ಸಂಪಾದನೆಯ ಮೂಲವಾಗಿದೆ.
View this post on Instagram
View this post on Instagram
ಇದನ್ನೂ ಓದಿ: PhonePe Primary Account: ಫೋನ್ಪೇ ಪ್ರಾಥಮಿಕ ಬ್ಯಾಂಕ್ ಖಾತೆ ಬದಲಾವಣೆ 6 ಹಂತಗಳಲ್ಲಿ ಮಾಡುವುದು ಹೇಗೆ ತಿಳಿಯಿರಿ