PhonePe Primary Account: ಫೋನ್​ಪೇ ಪ್ರಾಥಮಿಕ ಬ್ಯಾಂಕ್ ಖಾತೆ ಬದಲಾವಣೆ 6 ಹಂತಗಳಲ್ಲಿ ಮಾಡುವುದು ಹೇಗೆ ತಿಳಿಯಿರಿ

ಫೋನ್​ಪೇದಲ್ಲಿ ಪ್ರಾಥಮಿಕ (ಪ್ರೈಮರಿ) ಖಾತೆಯನ್ನು ಬದಲಿಸುವುದು ಹೇಗೆ ಎಂಬುದನ್ನು ಆರು ಹಂತಗಳಲ್ಲಿ ವಿವರಿಸಲಾಗಿದೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್​ಗಳು ಫೋನ್​ಪೇಗೆ ಜೋಡಣೆ ಆಗಿದ್ದಲ್ಲಿ ಪ್ರೈಮರಿ ಖಾತೆ ಬಹಳ ಮುಖ್ಯ ಎಂಬುದು ನೆನಪಿನಲ್ಲಿರಲಿ.

PhonePe Primary Account: ಫೋನ್​ಪೇ ಪ್ರಾಥಮಿಕ ಬ್ಯಾಂಕ್ ಖಾತೆ ಬದಲಾವಣೆ 6 ಹಂತಗಳಲ್ಲಿ ಮಾಡುವುದು ಹೇಗೆ ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Mar 17, 2021 | 12:01 PM

ಫೋನ್​ಪೇ ಅಪ್ಲಿಕೇಷನ್ ಅನ್ನು ನೀವು ಬಳಸುತ್ತಿದ್ದಲ್ಲಿ ಅದೆಂಥ ಆ್ಯಪ್ ಅಂತ ಈಗಾಗಲೇ ಗೊತ್ತಾಗಿರುತ್ತದೆ. ಯಾರಿಗೆ ಗೊತ್ತಿಲ್ಲವೋ ಅಂಥವರಿಗೆ ಕಿರು ಪರಿಚಯ ಮಾಡಿಕೊಟ್ಟು, ಈ ಲೇಖನದ ಉದ್ದೇಶವನ್ನು ತಿಳಿಸಿಕೊಡ್ತೇವೆ. ಫೋನ್​ಪೇ ಎಂಬುದು ಯುಪಿಐ ಆಧಾರಿತ ಪ್ಲಾಟ್​ಫಾರ್ಮ್. ಎನ್​ಕ್ರಿಪ್ಟ್ ಆದ ಸಾಫ್ಟ್​ವೇರ್ ಮೂಲಕ ತುಂಬ ಸುರಕ್ಷಿತವಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಸ್ಮಾರ್ಟ್​​ಫೋನ್​ಗೆ ಜೋಡಣೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಆ ನಂತರ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಯಾರಿಗಾದರೂ ವರ್ಗಾವಣೆ ಮಾಡಬಹುದಾಗಿರುತ್ತದೆ. ಫೋನ್​ಪೇದಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ಜೋಡಣೆ ಮಾಡಬಹುದಾದರೂ ಒಂದು ಬ್ಯಾಂಕ್ ಖಾತೆಯನ್ನು ಪ್ರಾಥಮಿಕ ಖಾತೆ (ಪ್ರೈಮರಿ ಅಕೌಂಟ್) ಎಂದು ಆರಿಸಬೇಕಾಗುತ್ತದೆ.

ಹಾಗೆ ಪ್ರಾಥಮಿಕ ಖಾತೆ ಎಂದು ಆರಿಸಿಕೊಂಡಿದ್ದರಿಂದಲೇ ಫೋನ್​ಪೇದಿಂದ ಹಣವು ತಾನಾಗಿಯೇ ವರ್ಗಾವಣೆ ಹಾಗೂ ಸ್ವೀಕಾರ ಆಗುತ್ತದೆ. ಒಂದು ವೇಳೆ ಫೋನ್​ಪೇ ಜತೆ ಒಂದೇ ಖಾತೆ ಜೋಡಣೆ ಆಗಿದ್ದಲ್ಲಿ ಅದೇ ಪ್ರಾಥಮಿಕ ಖಾತೆ ಎಂದಾಗುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ಖಾತೆ ಜೋಡಣೆ ಮಾಡಿದ್ದಲ್ಲಿ ಯಾವುದು ಪ್ರಾಥಮಿಕ ಖಾತೆ ಎಂದು ಆಯ್ಕೆ ಮಾಡಬೇಕಾಗುತ್ತದೆ. ಒಂದು ಸಂಗತಿ ನೆನಪಿನಲ್ಲಿರಬೇಕು, ಫೋನ್​ಪೇದಲ್ಲಿ ಯಾವುದು ಪ್ರಾಥಮಿಕ ಖಾತೆ ಆಗಿರುತ್ತದೋ BHIM UPI ID ಜತೆ ಸೇರಿಕೊಂಡಿರುವ ಬ್ಯಾಂಕ್ ಖಾತೆ ಅದೇ ಆಗಿರುತ್ತದೆ.

ಈಗ ಈ ಲೇಖನದ ಮುಖ್ಯ ವಿಷಯಕ್ಕೆ ಬರುವುದಾದರೆ, ಫೋನ್​ಪೇದಲ್ಲಿ ಪ್ರಾಥಮಿಕ ಖಾತೆ ಬದಲಾವಣೆ ಮಾಡುವುದು ಹೇಗೆ ಎಂದು ಹಂತಹಂತವಾಗಿ ತಿಳಿಸಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಫೋನ್​ಪೇನಲ್ಲಿ My Money> Bank Accounts ಮೂಲಕವಾಗಿ ಪೇಮೆಂಟ್ ವಿಧಾನದ ವಿಭಾಗದಲ್ಲಿ ನಿಮ್ಮ ಪ್ರಾಥಮಿಕ ಖಾತೆ ಯಾವುದು ಎಂದು ತಿಳಿದುಕೊಳ್ಳಬಹುದು. ನಿಮ್ಮ ಪ್ರಾಥಮಿಕ ಬ್ಯಾಂಕ್ ಖಾತೆ ಮುಂಭಾಗದಲ್ಲಿ ಹಸಿರು ಬಣ್ಣದ ಟಿಕ್ ಇರುತ್ತದೆ. ನಿಮ್ಮದು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಫೋನ್​ಪೇದಲ್ಲಿ ಜೋಡಣೆ ಆಗಿದ್ದಲ್ಲಿ ಈಗಿರುವ ಬ್ಯಾಂಕ್​ನಿಂದ ಪ್ರಾಥಮಿಕ ಖಾತೆಯನ್ನು ಬದಲಿಸುವ ಹಂತಹಂತದ ವಿಧಾನ ಇಲ್ಲಿದೆ:

ಹಂತ 1: ಮೊದಲಿಗೆ ನಿಮ್ಮ ಸ್ಮಾರ್ಟ್​ಫೋನ್​​ನಲ್ಲಿ ಫೋನ್​ಪೇ ಅಪ್ಲಿಕೇಷನ್ ತೆರೆಯಿರಿ

ಹಂತ 2: ಮುಂದೆ, ಹೋಮ್ ಪೇಜ್​ನಲ್ಲಿ My Money ಎಂಬುದರ ಮೇಲೆ ಕ್ಲಿಕ್ ಮಾಡಿ

ಹಂತ 3: ಹೊಸ ಪುಟವೊಂದು ತೆರೆದುಕೊಳ್ಳುತ್ತದೆ. ಅಲ್ಲಿ ಪಾವತಿ ವಿಧಾನ ವಿಭಾಗದಲ್ಲಿ Bank Accounts ಆರಿಸಿಕೊಳ್ಳಬೇಕು

ಹಂತ 4: ಬ್ಯಾಂಕ್ ಅಕೌಂಟ್ಸ್ ಪುಟದಲ್ಲಿ ಯಾವ್ಯಾವ ಬ್ಯಾಂಕ್ ಖಾತೆಗಳು ಜೋಡಣೆ ಆಗಿವೆ ಎಂಬುದನ್ನು ನೋಡಬಹುದು

ಹಂತ 5: ಈಗ ಯಾವ ಖಾತೆಯನ್ನು ನಿಮ್ಮ ಪ್ರಾಥಮಿಕ ಖಾತೆಯನ್ನಾಗಿ ಮಾಡಿಕೊಳ್ಳಲು ಬಯಸುತ್ತೀರೋ ಅದರ ಮುಂಭಾಗದಲ್ಲಿನ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ಗಮನದಲ್ಲಿರಲಿ: ನಿಮ್ಮ ಪ್ರಾಥಮಿಕ ಬ್ಯಾಂಕ್ ಖಾತೆಯ ಚೆಕ್ ಬಾಕ್ಸ್​ನಲ್ಲಿ ಹಸಿರು ಬಣ್ಣದ ಟಿಕ್ ಗುರುತು ಕಾಣಿಸುತ್ತದೆ.

ಹಂತ 6: ನಿಮ್ಮ ಫೋನ್ ತೆರೆಯ ಮೇಲೆ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ. Yes ಎಂಬುದನ್ನು ಆರಿಸಿಕೊಳ್ಳುವ ಮೂಲಕ ನಿಮ್ಮ ಮನವಿಯನ್ನು ಖಾತ್ರಿಪಡಿಸಿ.

ಇದರೊಂದಿಗೆ ಪ್ರಾಥಮಿಕ ಖಾತೆಯು ಯಶಸ್ವುಯಾಗಿ ಬದಲಾವಣೆ ಆಗಿರುತ್ತದೆ. ಆ ನಂತರದಿಂದ ನಿಮಗೆ ಬರುವ ಹಣ ಹಾಗೂ ನೀವು ಮಾಡುವ ಪಾವತಿ ಆ ಆಯ್ದ ಬ್ಯಾಂಕ್ ಖಾತೆಯ ಮೂಲಕವೇ ಆಗುತ್ತದೆ. ಆದ್ದರಿಂದ ಮೇಲ್ಕಾಣಿಸಿದ ಹಂತಗಳನ್ನು ಅನುಸರಿಸುವ ಮೂಲಕ ನೀವು ಯಾವಾಗ ಬೇಕಾದರೂ ಹಾಗೂ ಎಲ್ಲಿಂದ ಬೇಕಾದರೂ ಫೋನ್​ಪೇದಲ್ಲಿ ಪ್ರಾಥಮಿಕ ಬ್ಯಾಂಕ್ ಖಾತೆ ಬದಲಿಸಿಕೊಳ್ಳಬಹುದು.

ಇದನ್ನೂ ಓದಿ: Income Tax Rules: ಏಪ್ರಿಲ್ 1ರಿಂದ ಬದಲಾಗಲಿದೆ ಆದಾಯ ತೆರಿಗೆಯ ಈ 5 ನಿಯಮ