MiG-21 Bison crash: ಮಿಗ್​ 21 ಬೈಸನ್ ಯುದ್ಧ ವಿಮಾನ​ ಪತನ: ಪೈಲಟ್​ ಸಾವು

ಮಿಗ್​ 21 ಬೈಸನ್ ಯುದ್ಧ ವಿಮಾನವು​ ಇಂದು ಅಪಘಾತಕ್ಕೀಡಾಗಿದ್ದು, ಭಾರತೀಯ ವಾಯುಪಡೆಯ ಪೈಲಟ್ ಗ್ರೂಪ್​ ಕ್ಯಾಪ್ಟನ್​​ ಎ ಗುಪ್ತಾ ಸಾವಿಗೀಡಾಗಿದ್ದಾರೆ.

MiG-21 Bison crash: ಮಿಗ್​ 21 ಬೈಸನ್ ಯುದ್ಧ ವಿಮಾನ​ ಪತನ: ಪೈಲಟ್​ ಸಾವು
Follow us
ಸಾಧು ಶ್ರೀನಾಥ್​
|

Updated on:Mar 17, 2021 | 2:35 PM

ಮಿಗ್​ ಯುದ್ಧ ವಿಮಾನಗಳ ಸಾವಿನ ಸರಣಿ ಮುಂದುವರಿದಿದೆ. ಮಿಗ್​ 21 ಬೈಸನ್ ಯುದ್ಧ ವಿಮಾನವು​ ಇಂದು ಅಪಘಾತಕ್ಕೀಡಾಗಿದ್ದು, ಭಾರತೀಯ ವಾಯುಪಡೆಯ ಪೈಲಟ್ ಗ್ರೂಪ್​ ಕ್ಯಾಪ್ಟನ್​​ ಎ ಗುಪ್ತಾ ಸಾವಿಗೀಡಾಗಿದ್ದಾರೆ. ಮಿಗ್​ 21 ಬೈಸನ್ ಯುದ್ಧ ವಿಮಾನವು ಆಕಾಶಕ್ಕೆ ಚಿಮ್ಮಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೆ ತುತ್ತಾಗಿದೆ.

ಮಧ್ಯ ಭಾರತದಲ್ಲಿ ಐಎಎಫ್​ಗೆ ಸೇರಿದ ವಾಯುಪಡೆಯ ನೆಲೆಯಲ್ಲಿ ತರಬೇತಿಯಲ್ಲಿದ್ದಾಗ ಇಂದು ಬುಧವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಭಾರತೀಯ ವಾಯುಪಡೆಯು ದುರಂತದ ಬಗ್ಗೆ ವಿಚಾರಣೆಗೆ ಆದೇಶಿಸಿದೆ.

Published On - 2:28 pm, Wed, 17 March 21