Tamil Nadu Elections 2021: ಮತದಾರರ ಓಲೈಕೆಗಾಗಿ ಟಿವಿ, ವಾಷಿಂಗ್ ಮೆಷೀನ್ ಏನೇ ಕೇಳಿದರೂ ಕೊಡುತ್ತಿವೆ ರಾಜಕೀಯ ಪಕ್ಷಗಳು

Election Manifesto: ಯಾವುದೇ ರಾಜಕೀಯ ಪಕ್ಷ ಅಥವಾ ಮೈತ್ರಿಕೂಟ ತಮಿಳುನಾಡಿನಲ್ಲಿ ಅಧಿಕಾರಕ್ಕೇರಿದರೆ ಮಹಿಳೆಯರಿಗೆ ಒಂದು ವರ್ಷದವರೆಗೆ ಹೆರಿಗೆ ರಜೆ ಸಿಗಲಿದೆ. ಈವರೆಗೆ ಹೆರಿಗೆ ರಜೆ 6 ತಿಂಗಳವರೆಗೆ ಇತ್ತು. ಡಿಎಂಕೆ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದು ಬಾಣಂತಿಯರಿಗೆ 24,000 ರೂಪಾಯಿ ನೀಡುವುದಾಗಿ ಘೋಷಿಸಿದೆ.

Tamil Nadu Elections 2021: ಮತದಾರರ ಓಲೈಕೆಗಾಗಿ ಟಿವಿ, ವಾಷಿಂಗ್ ಮೆಷೀನ್ ಏನೇ ಕೇಳಿದರೂ ಕೊಡುತ್ತಿವೆ ರಾಜಕೀಯ ಪಕ್ಷಗಳು
ತಮಿಳುನಾಡು ಚುನಾವಣೆ (ಸಂಗ್ರಹ ಚಿತ್ರ)
Follow us
ರಶ್ಮಿ ಕಲ್ಲಕಟ್ಟ
|

Updated on:Mar 17, 2021 | 4:46 PM

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ವಿವಿಧ ರಾಜಕೀಯ ಪಕ್ಷಗಳು ಟಿವಿ,  ವಾಷಿಂಗ್ ಮೆಷೀನ್, ಉಚಿತ ಕೇಬಲ್ ಸಂಪರ್ಕ ನೀಡಲು ಮುಂದಾಗಿವೆ. ಏಪ್ರಿಲ್ 6ರಂದು ನಡೆಯಲಿರುವ ಚುನಾವಣೆಗಾಗಿ ಇಲ್ಲಿನ ರಾಜಕೀಯ ಪಕ್ಷಗಳು ಉಚಿತವಾಗಿ ನೀಡುವ ವಸ್ತುಗಳ ಪಟ್ಟಿಯನ್ನು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿವೆ. ಆಡಳಿತಾರೂಢ ಎಐಎಡಿಎಂಕೆ ಈ ಬಾರಿ ಬಿಜೆಪಿ ಜತೆ ಸ್ಪರ್ಧಿಸುತ್ತಿದ್ದು, ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಕೆಲಸ, ವಾಷಿಂಗ್ ಮೆಷೀನ್, ಸರ್ಕಾರದ ಅರಸು ಕೇಬಲ್ಸ್​ನಿಂದ ಬಡತನರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಕೇಬಲ್ ಟಿವಿ ಸಂಪರ್ಕ ನೀಡುವುದಾಗಿ ಭರವಸೆ ನೀಡಿದೆ. ಇದು ಮಾತ್ರವಲ್ಲದೆ ಸೋಲಾರ್ ಸ್ಟೌ, ಪ್ರತಿ ಕುಟುಂಬಕ್ಕೆ ವರ್ಷಕ್ಕೆ 6 ಎಲ್​ಪಿಜಿ ಸಿಲಿಂಡರ್ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದೆ.

ಇತ್ತ ವಿಪಕ್ಷ ಡಿಎಂಕೆ, ತಾವು ಅಧಿಕಾರಕ್ಕೇರಿದರೆ ಪ್ರತಿ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಇಳಿಕೆ ಮಾಡುವುದಾಗಿ ಹೇಳಿವೆ. ಎರಡೂ ಪಕ್ಷಗಳು ಶೈಕ್ಷಣಿಕ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದು ಎಐಎಡಿಎಂಕೆ ಕಾಲೇಜು ವಿದ್ಯಾರ್ಥಿಗಳಿಗೆ 2 ಜಿಬಿ ಡೇಟಾ ಉಚಿತವಾಗಿ ನೀಡುತ್ತೇವೆ ಎಂದಿದೆ. ಎಲ್ಲ ಸರ್ಕಾರಿ ಶಾಲೆಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಉಚಿತವಾಗಿ ನೀಡುತ್ತೇವೆ ಎಂದಿದೆ ಡಿಎಂಕೆ. 9, 10 ಮತ್ತು 11ನೇ ತಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದೂಟ ನೀಡುವುದಾಗಿ ಎಐಎಡಿಎಂಕೆ ಭರವಸೆ ನೀಡಿದೆ .

ಯಾವುದೇ ರಾಜಕೀಯ ಪಕ್ಷ ಅಥವಾ ಮೈತ್ರಿಕೂಟ ತಮಿಳುನಾಡಿನಲ್ಲಿ ಅಧಿಕಾರಕ್ಕೇರಿದರೆ ಮಹಿಳೆಯರಿಗೆ ಒಂದು ವರ್ಷದವರೆಗೆ ಹೆರಿಗೆ ರಜೆ ಸಿಗಲಿದೆ. ಈವರೆಗೆ ಹೆರಿಗೆ ರಜೆ 6 ತಿಂಗಳವರೆಗೆ ಇತ್ತು. ಡಿಎಂಕೆ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದು ಬಾಣಂತಿಯರಿಗೆ 24,000 ರೂಪಾಯಿ ನೀಡುವುದಾಗಿ ಘೋಷಿಸಿದೆ.

ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಅಮ್ಮ ನಿಗಾ ವಾಹನಗಳನ್ನು ನಿಯೋಜಿಸಲಾಗುವುದು ಎಂದು ಎಐಎಡಿಎಂಕೆ ಹೇಳಿದೆ. ಮದ್ರಾಸ್ ಹೈಕೋರ್ಟ್ ಹೆಸರನ್ನು ತಮಿಳುನಾಡು ಹೈಕೋರ್ಟ್ ಎಂದು ಬದಲಿಸುವುದಾಗಿಯೂ ಎಐಎಡಿಎಂಕೆ ಹೇಳಿದೆ .

ಆದಾಗ್ಯೂ, ಡಿಎಂಕೆ ಪ್ರಣಾಳಿಕೆಯಲ್ಲಿ ‘ಉಚಿತ’ ಭರವಸೆಗಳು ಜಾಸ್ತಿ ಇವೆ. ಅಮ್ಮ ಕ್ಯಾಂಟೀನ್​ಗೆ ಟಫ್ ಫೈಟ್ ನೀಡಲು ರಾಜ್ಯದಾದ್ಯಂತ 500 ಕಲೈಂಗಾರ್ ಕ್ಯಾಂಟೀನ್ ಆರಂಭಿಸುವುದಾಗಿ ಹೇಳಿದೆ. 2016ರಲ್ಲಿ ಡಿಎಂಕೆ ಸಂಸ್ಥಾಪಕ ಸಿ.ಎನ್.ಅಣ್ಣಾದುರೈ ಹೆಸರಿನಂಲ್ಲಿ ರಾಜ್ಯದಾದ್ಯಂತ ಅಣ್ಣಾ ಕ್ಯಾಂಟೀನ್ ಆರಂಭಿಸುವುದಾಗಿ ಹೇಳಿತ್ತು. ಕಳೆದ ಬಾರಿಯ ಪ್ರಣಾಳಿಕೆಯಲ್ಲಿ ರಾಜ್ಯ ಸರ್ಕಾರ ಆವಿನ್ ಹಾಲಿನ ಬೆಲೆ ಲೀಟರ್​ಗೆ 7 ರೂಪಾಯಿ ಇಳಿಕೆ ಮಾಡುವುದಾಗಿ ಹೇಳಿದ್ದು, ಈ ಬಾರಿ 3 ರೂ ಇಳಿಕೆ ಮಾಡುವುದಾಗಿ ಹೇಳಿದೆ. ಪಡಿತರ ಚೀಟಿ ಹೊಂದಿರುವ ಎಲ್ಲರಿಗೂ ಆರ್ಥಿಕ ವರ್ಷದಲ್ಲಿ ಒಂದು ಸಲ ₹4,000 ನೀಡುವುದಾಗಿ ಡಿಎಂಕೆ ಹೇಳಿದೆ. ರೈತರು ಹೊಸ ಮೋಟರ್ ಖರೀದಿಸಲು ₹10,000 , ತೀರ್ಥಯಾತ್ರೆ ಹೋಗಲು ₹ 25,000 ದಿಂದ 100,000 ನೀಡುವುದಾಗಿ ಹೇಳಿರುವ ಡಿಎಂಕೆ ಈ ಬಾರಿ ಒಟ್ಟು 500 ಭರವಸೆಗಳನ್ನು ನೀಡಿದೆ. ಈ ಭರವಸೆಗಳನ್ನು ಪೂರೈಸಲು ಪ್ರತ್ಯೇಕ ಸಚಿವಾಲಯವನ್ನೇ ರಚಿಸುವುದಾಗಿ ಹೇಳಿದೆ.

ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಈ ಬಾರಿ 25 ಸೀಟುಗಳಲ್ಲಿ ಸ್ಪರ್ಧಿಸುತ್ತಿದ್ದು, ಕೌಶಲಾಭಿವೃದ್ಧಿ ತರಬೇತಿ ಮತ್ತು ಸರ್ಕಾರಿ ಕೆಲಸಗಳನ್ನು ನೀಡುವುದಾಗಿ ಭರವಸೆ ನೀಡಿದೆ. ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಹೇಳಿದ್ದು, 2016ರಲ್ಲಿ ಡಿಎಂಕೆ ಇದೇ ಭರವಸೆ ನೀಡಿತ್ತು.

ಇದನ್ನೂ ಓದಿ :  Tamil Nadu Elections 2021: ತಮಿಳುನಾಡಿನಲ್ಲಿ ನೀಟ್ ಪರೀಕ್ಷೆ ರದ್ದು ಮಾಡುವುದಾಗಿ ಡಿಎಂಕೆ, ಕಾಂಗ್ರೆಸ್ ಭರವಸೆ ನೀಡುತ್ತಿರುವುದೇಕೆ? 

Tamil Nadu Assembly Elections 2021: ಮದ್ಯದಂಗಡಿ ಮುಚ್ಚುವ ಭರವಸೆ, ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ; ಆಕರ್ಷಕ ಪ್ರಣಾಳಿಕೆ ಘೋಷಿಸಿದ ಕಾಂಗ್ರೆಸ್

Published On - 4:43 pm, Wed, 17 March 21

ಮಕ್ಕಳು ಮತ್ತು ವಯೋವೃದ್ಧರು ಮನೆಗಳಿಂದ ಹೊರಬಾರದ ಸ್ಥಿತಿ!
ಮಕ್ಕಳು ಮತ್ತು ವಯೋವೃದ್ಧರು ಮನೆಗಳಿಂದ ಹೊರಬಾರದ ಸ್ಥಿತಿ!
ಎಲ್ಲರಿಗೂ ಟೈಮ್ ಬರುತ್ತೆ: ಡ್ರೆಸ್ಸಿಂಗ್ ರೂಮ್​ನಲ್ಲಿ ಅಶ್ವಿನ್ ಭಾವುಕ ಮಾತು
ಎಲ್ಲರಿಗೂ ಟೈಮ್ ಬರುತ್ತೆ: ಡ್ರೆಸ್ಸಿಂಗ್ ರೂಮ್​ನಲ್ಲಿ ಅಶ್ವಿನ್ ಭಾವುಕ ಮಾತು
ಬೆಂಗಳೂರು: ರಸ್ತೆಗೆ ಅಡ್ಡಲಾಗಿ ಕಂಟೈನರ್ ನಿಲ್ಲಿಸಿದ ಚಾಲಕ, ಟ್ರಾಫಿಕ್ ಜಾಮ್
ಬೆಂಗಳೂರು: ರಸ್ತೆಗೆ ಅಡ್ಡಲಾಗಿ ಕಂಟೈನರ್ ನಿಲ್ಲಿಸಿದ ಚಾಲಕ, ಟ್ರಾಫಿಕ್ ಜಾಮ್
ಗೌತಮಿನ ಸ್ವಮ್ಮಿಂಗ್​ಪೂಲ್​ಗೆ ತಳ್ಳಿದ ಮೋಕ್ಷಿತಾ; ಹೆಚ್ಚಿತು ದ್ವೇಷ
ಗೌತಮಿನ ಸ್ವಮ್ಮಿಂಗ್​ಪೂಲ್​ಗೆ ತಳ್ಳಿದ ಮೋಕ್ಷಿತಾ; ಹೆಚ್ಚಿತು ದ್ವೇಷ
ಮನೆಯಲ್ಲಿ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು: ಇದೆ ಅಧ್ಯಾತ್ಮ ಕಾರಣ!
ಮನೆಯಲ್ಲಿ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು: ಇದೆ ಅಧ್ಯಾತ್ಮ ಕಾರಣ!
ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ!
ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ!
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ