23 ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಸರ್ಕಾರ ಬಂದಿದೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 01, 2022 | 2:26 PM

23 ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಸರ್ಕಾರ ಬಂದಿದೆ. ಎಲ್ಲ ಸೌವಲತ್ತು ಸೌವಲಭ್ಯದ ಬಳಿಕ ಹೀಗೆ ಹೇಳುವುದು ಎಷ್ಟು ಸರಿ. ಕಾರ್ಯಕ್ರತರನ್ನ ಸಮಾಧನ ಪಡಿಸುವುದು ಬಿಟ್ಟು ಉಡಾಫೆ ಉತ್ತರ ಸರಿಯಲ್ಲ.

23 ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಸರ್ಕಾರ ಬಂದಿದೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ
ಚಕ್ರವರ್ತಿ ಸೂಲಿಬೆಲೆ
Follow us on

ಬೆಂಗಳೂರು: ಪ್ರವೀಣ್ (Praveen Nettar) ಹತ್ಯೆಯ ನಿಜವಾದ ಹಂತಕರ ಬಂಧನದ ಬಗ್ಗೆ ಮಾಹಿತಿ ಇಲ್ಲ. ಆದರೆ ಸರ್ಕಾರ ತಮ್ಮ ಪೊಲೀಸ್ ಪಡೆಯ ಮೇಲಿನ ವಿಶ್ವಾಸ ಕಳೆದುಕೊಂಡಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸದ ಹಾಗೂ ಮಂತ್ರಿಗಳ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದರು. 23 ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಸರ್ಕಾರ ಬಂದಿದೆ. ಎಲ್ಲ ಸೌವಲತ್ತು ಸೌವಲಭ್ಯದ ಬಳಿಕ ಹೀಗೆ ಹೇಳುವುದು ಎಷ್ಟು ಸರಿ. ಕಾರ್ಯಕ್ರತರನ್ನ ಸಮಾಧನ ಪಡಿಸುವುದು ಬಿಟ್ಟು ಉಡಾಫೆ ಉತ್ತರ ಸರಿಯಲ್ಲ. ಇನ್ನು ಎಂಟು ತಿಂಗಳಿದೆ ಎಲ್ಲರೂ ಸೇರಿ ಹೋಗೋಣಾ ಅಂತಾ ಪ್ರೀತಿಯಿಂದ ಹೇಳದೆ ಉಡಾಫೆ ಉತ್ತರ ನೀಡುವುದೆ ಆಕ್ರೋಶಕ್ಕೆ ಕಾರಣ. ಪ್ರವೀಣ ನೆಟ್ಟಾರ ಹತ್ಯೆಯಿಂದ ಕಾರ್ಯಕರ್ತರು ಇಷ್ಟು ಬೇಸರವಾಗಿಲ್ಲ.

ಕಳೆದ ಮೂರು ವರ್ಷದಿಂದ ಸರ್ಕಾರದ ಆಡಳಿತದಿಂದ ಬೇಸತ್ತು ಈಗ ಆಕ್ರೋಶ ಕೇಳಿ ಬರುತ್ತಿದೆ. ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ಬೆಲೆ ಜಾಸ್ತಿ. ನಾಯಕರ ರಾಜೀನಾಮೆ ನೀಡಿದ್ರೆ ನೂರಾರು ಕಾರ್ಯಕರ್ತರು ಆ ಜಾಗ ತುಂಬಲು ಸಮರ್ಥರಿದ್ದಾರೆ. ಆದರೆ ಕಾರ್ಯಕರ್ತನ ಸ್ಥಾನ ತುಂಬಲ ಒಬ್ಬ ಸಮರ್ಥ ನಾಯಕ ಮುಂದೆ ಬರಲ್ಲ ಎಂದು ಕಿಡಿಕಾರಿದರು. ಸಿಎಂ ಬೊಮ್ಮಾಯಿ ಅವರೆ ನೀವು ರಾಜ್ಯವನ್ನ ಉತ್ತರ ಪ್ರದೇಶ ಮಾಡಿದ್ದೀರಾ. ನೀವು ರಾಜ್ಯ ಯುಪಿತರ ಇಲ್ಲ ಅಂತಾ ಹೇಳಿದ್ರಿ.
ಆದರೆ ನೀವು ಕಳೆದ ಒಂದು ವರ್ಷದಲ್ಲಿ ರಾಜ್ಯವನ್ನ ಯುಪಿತರ ಮಾಡಿದ್ದೀರಾ. ಹೀಗಾಗಿ ನೀವು ಇಲ್ಲಿ ಯುಪಿ ಮಾಡಲ್ ತರಬಹುದು. ಯುಪಿಯಲ್ಲಿ ಯೋಗಿ ಬರುವುದಕ್ಕೂ ಮೊದಲು ಹೇಗಿತ್ತೊ ಹಾಗೆ ರಾಜ್ಯ ಮಾಡಿದ್ದೀರಾ. ಹೀಗಾಗಿ ನೀವು ಇಲ್ಲಿ ಯುಪಿ ಮಾಡಲ್ ತರಬಹದು ಎಂದರು.

ಮುಸ್ಲಿಂರಿಗೆ ಸಾವು ಹಾಗೂ ಬದುಕಿನ ವ್ಯತ್ಯಸ ಗೊತ್ತಿಲ್ಲ

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಮುಸ್ಲಿಂರಿಗೆ ಸಾವು ಹಾಗೂ ಬದುಕಿನ ವ್ಯತ್ಯಸ ಗೊತ್ತಿಲ್ಲ. ನಾವುಗಳು ಸರ್ಕಾರವನ್ನ ಕೂಡಿಸಿರುವುದು ಕೊಲೆಗಡುಕರಿಗೆ ತಕ್ಕ ಶಿಕ್ಷ ನಿಡುತ್ತೆ ಅಂತಾ. ಸಿದ್ದರಾಮಯ್ಯ ಸರ್ಕಾರದಲ್ಲಿ 23 ಹಿಂದೂ ಕಾರ್ಯಕರ್ತರ ಕೊಲೆಯಾಗಿತ್ತು. ಆದರೆ ಈಗ ನಮ್ಮ ಸರ್ಕಾರದಲ್ಲೂ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಹಿಂದೂ ಕಾರ್ಯಕರ್ತರ ಹಂತಕರಿಗೆ ಜೈಲಿನ ರಾಜ್ಯ ಮಾರ್ಯದೆ ಸಹಿಸಿಕೊಳ್ಳುವುದು ಕಷ್ಟಾ ಎಂದು ಹೇಳಿದರು. ಸಿದ್ದರಾಮಯ್ಯ ಆಡಳಿತದಲ್ಲಿ ಸರ್ಕಾರ ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್​ಗಳಿಗೆ 90ಕ್ಕೂ ಹೆಚ್ಚು PFI ಕಾರ್ಯಕರ್ತರಿಗೆ ಬಿ ರಿಪೋರ್ಟ್ ಹಾಕಲಾಗಿದೆ. ಯಾವ ಸಂಘಟನೆ ದೇಶದಲ್ಲಿಯೇ ಬ್ಯಾನ್ ಮಾಡಬೇಕೊ ಅವರ ಮೇಲಿನ ಕೇಸ್ ಕೈಬಿಡಲಾಗಿದೆ. ಆದರೆ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ಕೇಳೊರೆ ಇಲ್ಲ. ಹಿಂದೂ ಕಾರ್ಯಕರ್ತರು ಇನ್ನು ಕೋರ್ಟ್​​ಗೆ ಅಲೆಯುತ್ತಿದ್ದಾರೆ. ಈ ಸರ್ಕಾರ ಯಾರಿಗೆ ಉಪಕಾರ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಎಲ್ಲರೂ ಸಮಾನವಾಗಿ ನೋಡಬೇಕು ಅಂತಾ ಸಂವಿಧಾನವೇ ಹೇಳುತ್ತದೆ: ಸಿ.ಟಿ. ರವಿ 

ದ.ಕ. ಜಿಲ್ಲೆಯಲ್ಲಿ ಮಸೂದ್ ಮತ್ತು ಫಾಜಿಲ್ ಮನೆಗೆ ಬಿಜೆಪಿ ನಾಯಕರು ಮತ್ತು ಸಿಎಂ ಭೇಟಿ ನೀಡದ ವಿಚಾರವಾಗಿ ವಿಧಾನಸೌಧದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ನೀಡಿದ್ದು, ಎಲ್ಲರೂ ಸಮಾನವಾಗಿ ನೋಡಬೇಕು ಅಂತಾ ಸಂವಿಧಾನವೇ ಹೇಳುತ್ತದೆ. ಪ್ರವೀಣ್ ಬಿಜೆಪಿಯ ಕಾರ್ಯಕರ್ತ. ಹಾಗಾಗಿ ಕಾರ್ಯಕರ್ತನ ಮನೆಗೆ ಸಾಂತ್ವನ ಹೇಳುವುದು ಪಕ್ಷದ ಕೆಲಸ. ಸರ್ಕಾರದ ಬಗ್ಗೆ ನಾನು ಮಾತನಾಡಲು ಹೋಗಲ್ಲ. ಪಕ್ಷವಾಗಿ ನಮ್ಮ ಸಂಬಂಧ ಇರುವುದು ಕಾರ್ಯಕರ್ತನ ಜೊತೆಗೆ. ಮನುಷ್ಯನಾಗಿ ಎಲ್ಲರ ಜೊತೆಗೂ ಸಂಬಂಧ ಇಟ್ಟುಕೊಳ್ಳಬಹುದು. ನನ್ನ ಬಗ್ಗೆ ಮಾತ್ರ ನಾನು ಉತ್ತರ ಕೊಡಬಲ್ಲೆ. ಉಳಿದ ಪ್ರಶ್ನೆಗೆಳಿಗೆ ಸಂಬಂಧಪಟ್ಟವರನ್ನು ಕೇಳಿ. ಈಗ ಪ್ರಶ್ನೆಗಳನ್ನು ಕೇಳುತ್ತಿರುವವರು ಅವರು ಅಧಿಕಾರದಲ್ಲಿದ್ದಾಗ ಪ್ರಶಾಂತ್ ಪೂಜಾರಿ ಹತ್ಯೆಯಾದಾಗ ಏನು ಹೇಳಿದರು ಅಂತಾ ಗೊತ್ತಿದೆ. ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ. ಸರ್ಕಾರ ಎಲ್ಲರನ್ನೂ ಸಮಾನವಾಗಿಯೇ ನೋಡಬೇಕು ಎಂದು ಹೇಳಿದರು.

ಸೂಲಿಬೆಲೆ ವೈಚಾರಿಕವಾಗಿ ಅಪ್ಪಟ ರಾಷ್ಟ್ರವಾದಿ

ರಾಜ್ಯ ಸರ್ಕಾರದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮೂಲಕ ಟೀಕೆ ವಿಚಾರ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಸೂಲಿಬೆಲೆ ವೈಚಾರಿಕವಾಗಿ ಅಪ್ಪಟ ರಾಷ್ಟ್ರವಾದಿ. ವ್ಯತಿರಿಕ್ತವಾಗಿ ಟ್ವೀಟ್ ಮಾಡಿದ್ದರೂ ಅವರ ಜೊತೆ ವೈಯಕ್ತಿಕವಾಗಿ ಮಾತಾಡುತ್ತೇವೆ.
ಸಿಟ್ಟು ಹತ್ತಾರು ಕಾರಣಕ್ಕೆ ಬಂದಿರುತ್ತದೆ. ಸಮಾಧಾನಪಡಿಸುವ ಕೆಲಸ ಮಾಡುತ್ತೇವೆ. ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ವ್ಯಕ್ತಿಗತವಾಗಿ, ಗುಂಪಿನಲ್ಲಿ ಕುಳಿತು ಮಾತಾಡಿಸಬೇಕಾದ ಸನ್ನಿವೇಶ ಇರುತ್ತದೆ. ನಾಲಿಗೆಯೂ ನಮ್ಮದೇ ದವಡೆಯೂ ನಮ್ಮದೇ. ದವಡೆ ನಾಲಿಗೆಯನ್ನು ಕಚ್ಚಿತು ಅಂತಾ ದವಡೆ ಉದುರಿಸಿಕೊಳ್ಳುವ ಕೆಲಸ ಮಾಡಲ್ಲ. ಅವರೆಲ್ಲರೂ ನಮ್ಮ ಹಿತೈಷಿಗಳೇ, ದೂರ ಇರಿಸುವ ಕೆಲಸ ಮಾಡಲ್ಲ ಎಂದು ಹೇಳಿದರು.