ಕುಮಾರಸ್ವಾಮಿ ನೀಡಲು ಬಂದ ಚೆಕ್ ಅನ್ನು ಮೃತ ಫಾಜಿಲ್ ತಂದೆ ತೆಗೆದುಕೊಳ್ಳಲು ನಿರಾಕರಿಸಿದರು
ಫಾಜಿಲ್ ತಂದೆಗೆ 5 ಲಕ್ಷ ರೂ. ಗಳ ಚೆಕ್ ನೀಡಲು ಹೋದಾಗ ಮಗನನ್ನು ನೆನೆದು ಒಂದೇಸಮ ರೋದಿಸುತ್ತಿದ್ದ ಅವರು ಚೆಕ್ ತೆಗೆದುಕೊಳ್ಳಲು ನಿರಾಕರಿಸಿ ನನಗೆ ನ್ಯಾಯ ಕೊಡಿಸಿ ಸಾಕು ಎಂದರು.
ಮಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕಳೆದ 15 ದಿನಗಳಲ್ಲಿ ಕರಾವಳಿ ಭಾಗದಲ್ಲಿ ಹತ್ಯೆಯಾದ ಮೂವರು ಯುವಕರ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪ್ರವೀಣ್ (Praveen) ಹತ್ಯೆಯಾದ ಮರುದಿನ ಕೊಲೆಯಾದ ಫಾಜಿಲ್ (Fazil) ತಂದೆಗೆ 5 ಲಕ್ಷ ರೂ. ಗಳ ಚೆಕ್ ನೀಡಲು ಹೋದಾಗ ಮಗನನ್ನು ನೆನೆದು ಒಂದೇಸಮ ರೋದಿಸುತ್ತಿದ್ದ ಅವರು ಚೆಕ್ ತೆಗೆದುಕೊಳ್ಳಲು ನಿರಾಕರಿಸಿ ನನಗೆ ನ್ಯಾಯ ಕೊಡಿಸಿ ಸಾಕು ಎಂದರು.
Latest Videos