ಪ್ರವೀಣ್ ಹತ್ಯೆ ಮೆರವಣಿಗೆ ವೇಳೆ ಲಾಠಿಚಾರ್ಜ್; ಪೊಲೀಸ್​ ಅಧಿಕಾರಿಗಳ ವರ್ಗಾವಣೆ

ಕಾಸರಗೋಡಿನ ಹಿರಿಯ ಆರ್​ಎಸ್​ಎಸ್ ಕಾರ್ಯಕರ್ತ ರಮೇಶ್ ಮೇಲೂ ಪೊಲೀಸರು ಲಾಠಿ ಬೀಸಿದ್ದು, ಪೊಲೀಸರ ಮೇಲೆ ಕ್ರಮ ಕೈಗೊಳ್ಳದ ಹಿನ್ನೆಲೆ ನಿನ್ನೆ ಸಿಎಂ ಬೊಮ್ಮಾಯಿಗೂ ಕಾರ್ಯಕರ್ತರು ಧಿಕ್ಕಾರ ಕೂಗಿದ್ದರು.  

ಪ್ರವೀಣ್ ಹತ್ಯೆ ಮೆರವಣಿಗೆ ವೇಳೆ ಲಾಠಿಚಾರ್ಜ್; ಪೊಲೀಸ್​ ಅಧಿಕಾರಿಗಳ ವರ್ಗಾವಣೆ
ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಮೆರವಣಿಗೆ ವೇಳೆ ಲಾಠಿಚಾರ್ಜ್
Edited By:

Updated on: Jul 29, 2022 | 1:51 PM

ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ (Praveen Nettar) ಹತ್ಯೆ ಮೆರವಣಿಗೆ ವೇಳೆ ಲಾಠಿಚಾರ್ಜ್ ಹಿನ್ನೆಲೆ ಕೊನೆಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ದ.ಕ ಜಿಲ್ಲೆಯ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ಸೈಗಳ ವರ್ಗಾವಣೆ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ. ಬೆಳ್ಳಾರೆಗೆ ನೂತನ ಪಿಎಸೈ ಆಗಿ ಸುಹಾಸ್ ಹಾಗೂ ಸುಬ್ರಹ್ಮಣ್ಯಕ್ಕೆ ಮಂಜುನಾಥ್ ನೇಮಕ ಮಾಡಲಾಗಿದೆ. ಕುಂದಾಪುರ ಎಸೈ ಆಗಿದ್ದ ಸುಹಾಸ್ ಬೆಳ್ಳಾರೆ ಠಾಣೆಗೆ. ವಿಟ್ಲ ಠಾಣಾ ಎಸೈ ಆಗಿದ್ದ ಮಂಜುನಾಥ ಟಿ. ಅವರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೇಮಿಸಲಾಗಿದೆ. ವರ್ಗಾವಣೆಯಾದ ಪಿಎಸ್ಸೈಗಳಿಗೆ ಜಾಗ ತೋರಿಸದೇ ಮಂಗಳೂರು ಐಜಿ ಕಚೇರಿಯಲ್ಲಿ ವರದಿ ಮಾಡಲು ಸೂಚನೆ ನೀಡಲಾಗಿದೆ. ಕಾಸರಗೋಡಿನ ಹಿರಿಯ ಆರ್​ಎಸ್​ಎಸ್ ಕಾರ್ಯಕರ್ತ ರಮೇಶ್ ಮೇಲೂ ಪೊಲೀಸರು ಲಾಠಿ ಬೀಸಿದ್ದು, ಪೊಲೀಸರ ಮೇಲೆ ಕ್ರಮ ಕೈಗೊಳ್ಳದ ಹಿನ್ನೆಲೆ ನಿನ್ನೆ ಸಿಎಂ ಬೊಮ್ಮಾಯಿಗೂ ಕಾರ್ಯಕರ್ತರು ಧಿಕ್ಕಾರ ಕೂಗಿದ್ದರು.

ಇದನ್ನೂ ಓದಿ: Praveen Nettar: ಪ್ರವೀಣ್ ನೆಟ್ಟಾರು ಹತ್ಯೆ: ತನಿಖೆ ಚುರುಕು, ಪೊಲೀಸರ ವಶಕ್ಕೆ 3ನೇ ಆರೋಪಿ

ಫಾಜಿಲ್​ ಹತ್ಯೆ: ಆರೋಪಿಗಳ ಸುಳಿವು ಪತ್ತೆ, 

ಫಾಜಿಲ್​ ಹತ್ಯೆ ಪ್ರಕರಣ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಸುಳಿವು ಪತ್ತೆ ಆಗ್ತಿದ್ದಂತೆ ಅಧಿಕಾರಿಗಳ ತುರ್ತು ಸಭೆ ಮಾಡಲಾಯಿತು. ಪ್ರಕರಣದ ಕುರಿತಾಗಿ ಅಲೋಕ್ ಕುಮಾರ್ ಮಾಹಿತಿ ಪಡೆದರು. ಆರೋಪಿಗಳ ಮಾಹಿತಿ ಕಲೆ ಹಾಕಿರುವ ಹಿನ್ನೆಲೆ ಬಂಧಿಸುವ ಬಗ್ಗೆ ಸಭೆಯಲ್ಲಿ ಪಿನ್​ ಟು ಪಿನ್ ಮಾಹಿತಿ ಚರ್ಚೆ ಮಾಡಲಾಗಿದ್ದು, ಈಗಾಗಲೇ 14 ಜನರನ್ನ  ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Praveen Nettaru: ಮಾಂಸದ ಉದ್ಯಮ ಶುರು ಮಾಡಿದ್ದೇ ಹತ್ಯೆಗೆ ಕಾರಣವಾಯ್ತಾ? ಪ್ರವೀಣ್ ಸಹೋದರ ರಂಜಿತ್ ಸ್ಫೋಟಕ ಹೇಳಿಕೆ

ಫಾಜಿಲ್​ ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸುತ್ತೇವೆ;

ಫಾಜಿಲ್​ ಕೊಲೆ ಆರೋಪಿಗಳನ್ನ ಶೀಘ್ರವೇ ಬಂಧಿಸುತ್ತೇವೆ ಎಂದು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್​ ಕುಮಾರ್​ ಹೇಳಿಕೆ ನೀಡಿದರು. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳ ಸುಳಿವು ಸಿಕ್ಕಿದೆ. ಇಂದು ಸಂಜೆಯಿಂದ ವಿಶೇಷ ಕಾರ್ಯಾಚರಣೆ ಮಾಡುತ್ತೇವೆ. ಯಾರು ಕೂಡ ವದಂತಿಗಳಿಗೆ ಕಿವಿ ಕೊಡಬಾರದು. ಫಾಜಿಲ್​ ಮನೆಯವರು ಹತ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು. ವಿವಿಧ ಆಯಾಮಗಳಿಂದ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಸಿಸಿಟಿವಿ ದೃಶ್ಯ ಆಧರಿಸಿ ಕಾರು ಪತ್ತೆ ಹಚ್ಚಿ ತನಿಖೆ ಮಾಡ್ತಿದ್ದೇವೆ. ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬಾರದು. ಈಗಿರುವ ಪೊಲೀಸ್​ ಬಂದೋಬಸ್ತ್​​ ಮುಂದುವರಿಸುತ್ತೇವೆ. ಗಡಿಭಾಗದಲ್ಲಿ ವಾಹನಗಳನ್ನ ಚೆಕ್​ ಮಾಡಲಾಗುತ್ತದೆ. ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು ಎಡಿಜಿಪಿ ಅಲೋಕ್​ ಕುಮಾರ್​ ಹೇಳಿದರು.