Praveen Nettaru: ಮಾಂಸದ ಉದ್ಯಮ ಶುರು ಮಾಡಿದ್ದೇ ಹತ್ಯೆಗೆ ಕಾರಣವಾಯ್ತಾ? ಪ್ರವೀಣ್ ಸಹೋದರ ರಂಜಿತ್ ಸ್ಫೋಟಕ ಹೇಳಿಕೆ
ಸಿಎಂ ಬಸವರಾಜ ಬೊಮ್ಮಾಯಿ ಹತ್ಯೆಯಾದ ಪ್ರವೀಣ್ ಮನೆಗೆ ನಿನ್ನೆ ಭೇಟಿ ನೀಡಿದ್ದು, ಕುಟುಂಬದವರಿಗೆ ಸಾಂತ್ವನ ಹೇಳಿದರು. 25 ಲಕ್ಷ ರೂ. ಪರಿಹಾರದ ಚೆಕ್ ನೀಡಿದರು.
ದಕ್ಷಿಣ ಕನ್ನಡ: ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಕೇಸ್ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಮಾಂಸದ ಉದ್ಯಮ ಶುರು ಮಾಡಿದ್ದೇ ಪ್ರವೀಣ್ ಹತ್ಯೆಗೆ ಕಾರಣವಾಯ್ತಾ? ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಈ ಕುರಿತಾಗಿ ಪ್ರವೀಣ್ ಸಹೋದರ ರಂಜಿತ್ ಸ್ಫೋಟಕ ಹೇಳಿಕೆ ನೀಡಿದ್ದು, ಮಾಂಸ ಉದ್ಯಮದಲ್ಲಿ ಹಿಂದುಗಳು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದ. ಮೀನಿನ ಟೆಂಡರ್ ಹಿಂದುಗಳಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಹಿಂದೂವಿನಲ್ಲಿ ಪ್ರಮುಖ ನಾಯಕನಾಗಿ ರೂಪುಗೊಳುತ್ತಿದ್ದ. ಅಲ್ಲದೇ ಒಂದು ತಿಂಗಳಿಂದ ಪ್ರವೀಣ್ಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಇದಕ್ಕೆ ಸಂಬಂಧಪಟ್ಟಂತೆ ಮೌಖಿಕವಾಗಿ ಬೆಳ್ಳಾರೆ ಪೊಲೀಸರಿಗೂ ವಿಚಾರ ತಿಳಿಸಲಾಗಿದೆ. ಆದರೆ ಪೊಲೀಸರು ಗಂಭೀರವಾಗಿ ಇದನ್ನು ಪರಿಗಣಿಸಿಲ್ಲ ಎಂದು ಟಿವಿ9ಗೆ ಪ್ರವೀಣ್ ಸಹೋದರ ರಂಜಿತ್ ಹೇಳಿಕೆ ನೀಡಿದರು.
ಇದನ್ನೂ ಓದಿ: Pramod Muthalik: ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ನಿಷೇಧ
ಪ್ರವೀಣ್ ಕುಟುಂಬಸ್ಥರಿಗೆ ಸಿಎಂ ಬೊಮ್ಮಾಯಿ ಸಾಂತ್ವನ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಅರೆಸ್ಟ್ ಆದ ಇಬ್ಬರು ಆರೋಪಿಗಳಿಗೆ ಆಗಸ್ಟ್ 11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಪುತ್ತೂರಿನ ಎಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಮತ್ತೊಂದೆಡೆ ನಿನ್ನೆ (ಜುಲೈ 28) ಸಿಎಂ ಬಸವರಾಜ ಬೊಮ್ಮಾಯಿ ಹತ್ಯೆಯಾದ ಪ್ರವೀಣ್ ಮನೆಗೆ ಭೇಟಿ ನೀಡಿದ್ದಾರೆ. ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ರು. ಅಷ್ಟೇ ಅಲ್ಲದೆ, ರಾಜ್ಯಾದ್ಯಂತ ಎದ್ದಿರೋ ಆಕ್ರೋಶವನ್ನ ತಣ್ಣಗೆ ಮಾಡೋ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಮಾದರಿಯಲ್ಲಿ ಕಠಿಣ ಕಾನೂನಿನ ಭರವಸೆಯನ್ನೂ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬೊಮ್ಮಾಯಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೊತೆಗಿದ್ದರು.
ಆರೋಪಿಗಳಿಗಾಗಿ ತೀರ್ವ ಶೋಧ
ಹತ್ಯೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ಐವರು ಶಂಕಿತರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಆರಂಭಿಸಿದ್ದಾರೆ. ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದನು. ಬೆಳ್ಳಾರೆ ಪೇಟೆಯಲ್ಲಿ ಇಂದು ತನ್ನ ಕೋಳಿ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಆರೋಪಿಗಳಿಗಾಗಿ ಬಲೆ ಬೀಸಿರುವ ಪೊಲೀಸರು ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿದ್ದು, ಕೊಲೆ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
Published On - 11:53 am, Fri, 29 July 22