Kannada News Latest news SSLC ರಿಸಲ್ಟ್: ಚಿಕ್ಕಬಳ್ಳಾಪುರ ಜಿಲ್ಲೆ ಫಸ್ಟ್ ಬರೋಕ್ಕೆ.. ಈ ಇಬ್ಬರು ಹೆಣ್ಣು ಮಕ್ಕಳೇ ಕಾರಣ!
SSLC ರಿಸಲ್ಟ್: ಚಿಕ್ಕಬಳ್ಳಾಪುರ ಜಿಲ್ಲೆ ಫಸ್ಟ್ ಬರೋಕ್ಕೆ.. ಈ ಇಬ್ಬರು ಹೆಣ್ಣು ಮಕ್ಕಳೇ ಕಾರಣ!
ಚಿಕ್ಕಬಳ್ಳಾಪುರ: SSLC ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್ ಅಮರೇಶ್ ಸಂತಸ ವ್ಯಕ್ತಪಡಿಸಿದ್ದಾರೆ. DC ಲತಾ ಮತ್ತು CEO ಫೌಜಿಯಾ ತರನಮ್ ಶ್ರಮ ಹೆಚ್ಚು ಇದೆ ನಮ್ಮದು ಹಿಂದುಳಿದ ಜಿಲ್ಲೆಯಾಗಿದ್ರೂ ಈ ಬಾರಿ SSLCಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಇದರಲ್ಲಿ ಜಿಲ್ಲಾಧಿಕಾರಿ ಆರ್ ಲತಾ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನಮ್ ಅವರ ಶ್ರಮ ಹೆಚ್ಚಾಗಿದೆ. ಇಬ್ಬರೂ ಅಧಿಕಾರಿಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಹಾಗಾಗಿ, ಇವರ ಪರಿಶ್ರಮದಿಂದ ಇಂದು […]
Follow us on
ಚಿಕ್ಕಬಳ್ಳಾಪುರ: SSLC ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್ ಅಮರೇಶ್ ಸಂತಸ ವ್ಯಕ್ತಪಡಿಸಿದ್ದಾರೆ.
DC ಲತಾ ಮತ್ತು CEO ಫೌಜಿಯಾ ತರನಮ್ ಶ್ರಮ ಹೆಚ್ಚು ಇದೆ ನಮ್ಮದು ಹಿಂದುಳಿದ ಜಿಲ್ಲೆಯಾಗಿದ್ರೂ ಈ ಬಾರಿ SSLCಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಇದರಲ್ಲಿ ಜಿಲ್ಲಾಧಿಕಾರಿ ಆರ್ ಲತಾ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನಮ್ ಅವರ ಶ್ರಮ ಹೆಚ್ಚಾಗಿದೆ.
ಇಬ್ಬರೂ ಅಧಿಕಾರಿಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಹಾಗಾಗಿ, ಇವರ ಪರಿಶ್ರಮದಿಂದ ಇಂದು ಅನೋಘ ಫಲಿತಾಂಶ ಬಂದಿದೆ. ಜೊತೆಗೆ, ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವೆ ಎಂದು ಅಪರ ಜಿಲ್ಲಾಧಿಕಾರಿ ಅಮರೇಶ್ ಹೇಳಿದರು.
ಇನ್ನು ಜಿಲ್ಲೆಯಲ್ಲಿ 623 ಅಂಕ ಪಡೆದ ವಿದ್ಯಾರ್ಥಿನಿಯರಿಬ್ಬರು ಜಿಲ್ಲಾ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಚಿಂತಾಮಣಿ ನಗರದಲ್ಲಿರುವ ಕಿಶೋರ್ ವಿದ್ಯಾ ಭವನ ಶಾಲೆಯ ವಿದ್ಯಾರ್ಥಿನಿಯರು ಉತ್ತಮ ಅಂಕಗಳನ್ನ ಗಳಿಸಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.