ನಾಳೆಯಿಂದಲೇ ಸಿಎಂ BSY ಕರ್ತವ್ಯಕ್ಕೆ ಹಾಜರು, ಕ್ವಾರಂಟೈನ್ ಅನ್ವಯ ಆಗಲ್ಲ

ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾದ ಸಿಎಂ ಬಿಎಸ್ ಯಡಿಯೂರಪ್ಪ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಎಂದಿನಂತೆ ವಾಕಿಂಗ್ ಹಾಗೂ ಆಹಾರ ಶೈಲಿಯನ್ನು ಮುಂದುವರೆಸಲು ಇದೇ ಸಂದರ್ಭದಲ್ಲಿ ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಸಿಎಂ ಬಿಎಸ್ ಯಡಿಯೂರಪ್ಪ ಸಾಂವಿಧಾನಿಕ ಹುದ್ದೆಯಲ್ಲಿದ್ದು ಜೊತೆಗೆ ಕೊರೊನಾ ವಾರಿಯರ್ ಆಗಿರುವ ಹಿನ್ನೆಲೆಯಿಂದಾಗಿ ಸಾಮಾನ್ಯ ಸೋಂಕಿತರಿಗೆ ಇರುವಂತಹ ನಿಯಮಾವಳಿಗಳು ಇರುವುದಿಲ್ಲ. ಹಾಗಾಗಿ ಬಿಎಸ್ ವೈಗೆ ಕ್ವಾರಂಟೈನ್ ಆಗುವ ನಿಯಮಾವಳಿಗಳು ಇಲ್ಲದಿರುವುದರಿಂದ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಜೊತೆಗೆ […]

ನಾಳೆಯಿಂದಲೇ ಸಿಎಂ BSY ಕರ್ತವ್ಯಕ್ಕೆ ಹಾಜರು, ಕ್ವಾರಂಟೈನ್ ಅನ್ವಯ ಆಗಲ್ಲ
ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ
Follow us
ಸಾಧು ಶ್ರೀನಾಥ್​
|

Updated on:Aug 10, 2020 | 5:52 PM

ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾದ ಸಿಎಂ ಬಿಎಸ್ ಯಡಿಯೂರಪ್ಪ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಎಂದಿನಂತೆ ವಾಕಿಂಗ್ ಹಾಗೂ ಆಹಾರ ಶೈಲಿಯನ್ನು ಮುಂದುವರೆಸಲು ಇದೇ ಸಂದರ್ಭದಲ್ಲಿ ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಅಲ್ಲದೆ ಸಿಎಂ ಬಿಎಸ್ ಯಡಿಯೂರಪ್ಪ ಸಾಂವಿಧಾನಿಕ ಹುದ್ದೆಯಲ್ಲಿದ್ದು ಜೊತೆಗೆ ಕೊರೊನಾ ವಾರಿಯರ್ ಆಗಿರುವ ಹಿನ್ನೆಲೆಯಿಂದಾಗಿ ಸಾಮಾನ್ಯ ಸೋಂಕಿತರಿಗೆ ಇರುವಂತಹ ನಿಯಮಾವಳಿಗಳು ಇರುವುದಿಲ್ಲ. ಹಾಗಾಗಿ ಬಿಎಸ್ ವೈಗೆ ಕ್ವಾರಂಟೈನ್ ಆಗುವ ನಿಯಮಾವಳಿಗಳು ಇಲ್ಲದಿರುವುದರಿಂದ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಜೊತೆಗೆ ಎರಡು ದಿನಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯಬಹುದು ಎಂಬ ಮಾಹಿತಿ ಇದ್ದು, ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿದುಬಂದಿದೆ.

ಪುತ್ರಿ ಸಹ ಮನೆಗೆ ವಾಪಾಸ್.. ಸಿಎಂ ಬಿಎಸ್‌ವೈ ಜೊತೆಗೆ ಕೊರೊನಾ ಸೋಂಕು ದೃಢಪಟ್ಟಿದ್ದ ಸಿಎಂ ಪುತ್ರಿ ಪದ್ಮಾವತಿ ಸಹ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ವಾಪಸಾಗಿದ್ದಾರೆ.

Published On - 5:37 pm, Mon, 10 August 20