ಹೃದಯಾಘಾತದಿಂದ ಕಡೂರು ಯೋಧ ಮಂಜಪ್ಪ ಲಖನೌನಲ್ಲಿ ಸಾವು

ಸಿಐಎಸ್ಎಫ್ ಯೋಧ ಮಂಜಪ್ಪ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಿರೇನಲ್ಲೂರು ಗ್ರಾಮದ ನಿವಾಸಿಯಾಗಿದ್ದ ಸಿಐಎಸ್ಎಫ್ ಯೋಧ ಮಂಜಪ್ಪ ಉತ್ತರಪ್ರದೇಶದ ಲಖನೌನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಚಿಕ್ಕಮಗಳೂರು: ಹೃದಯಾಘಾತದಿಂದ ಸಿಐಎಸ್ಎಫ್ ಯೋಧ ಮಂಜಪ್ಪ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಿರೇನಲ್ಲೂರು ಗ್ರಾಮದ ನಿವಾಸಿಯಾಗಿದ್ದ ಮಂಜಪ್ಪ ಉತ್ತರಪ್ರದೇಶದ ಲಖನೌನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಾಳೆ ಬೆಳಗ್ಗೆ ಗ್ರಾಮಕ್ಕೆ ಇವರು ಪಾರ್ಥಿವ ಶರೀರ ಆಗಮಿಸಲಿದೆ. ಯೋಧನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಮೆಟ್ಟಿಲಿನ ಮೇಲಿಂದ ಬಿದ್ದು ಕರ್ತವ್ಯ ನಿರತ ಬಸನಾಳ ಗ್ರಾಮದ ಯೋಧ ಸಾವು..