
ಕೋಲಾರ: ಕೊರೊನಾ ಸೋಂಕು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವ ತಾಯಿಯ ಮುಖವನ್ನು ಒಂದು ಬಾರಿ ನೋಡಿ ಮರಳಲು ಆಸ್ಪತ್ರೆ ಎದುರು ಕಂದಮ್ಮಗಳು ಕಾದು ಕುಳಿತಿರುವ ದೃಶ್ಯ ಎಂತಹವರಲ್ಲೂ ಕಣ್ಣೀರು ತರಿಸುವಂತಿತ್ತು.
ಕೋಲಾರದ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ತಾಯಿ ಚಿಕಿತ್ಸೆ ಪಡೆಯುತ್ತಿದ್ದು, ತಂದೆಯೊಂದಿಗೆ ತಾಯಿ ನೋಡಲು ಕೋವಿಡ್ ಆಸ್ಪತ್ರೆಗೆ ಬಂದ ಮಕ್ಕಳು ಒಂದೇ ಒಂದು ಬಾರಿ ತಾಯಿ ಮುಖ ತೋರಿಸುವಂತೆ ಅಧಿಕಾರಿಗಳ ಬಳಿ ಅಳಲು ತೊಡಿಕೊಳ್ಳುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪ್ರತಿಯೊಬ್ಬರ ಮನಕಲುಕುವಂತಿದೆ.
ಕೊನೆಗೆ ತಾಯಿಯನ್ನ ದೂರದಿಂದಲೆ ನೋಡಿದ ಮಕ್ಕಳು ಸಮಾಧಾನಗೊಂಡರು. ಬೇಗ ಹುಷಾರಾಗಿ ಬಾ ಅಮ್ಮಾ ಎಂದು ಹೇಳಿ ಮನೆಗೆ ವಾಪಾಸ್ಸಾಗಿದ್ದಾರೆ.