ಕ್ವಾರಂಟೈನ್ ಕೇಂದ್ರದಲ್ಲಿ ಅನ್ನ-ನೀರು ಇಲ್ಲದೇ ಮಕ್ಕಳ ಗೋಳಾಟ.. ಎಲ್ಲಿ?

|

Updated on: Jul 14, 2020 | 1:20 PM

ಗದಗ: ಬೆಂಗಳೂರು ಸಂಪೂರ್ಣ ಲಾಕ್ ಡೌನ್ ಆದ ಕಾರಣ ಬೆಂಗಳೂರಿನಿಂದ ಬಂದ ಜನರಿಗೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಅಲ್ಪಸಂಖ್ಯಾತರ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆ ಕಂಡು ಜನರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾಗಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿಲ್ಲ, ಬೆಳಿಗ್ಗೆ 10 ಗಂಟೆಯಾದ್ರೂ ಉಪಹಾರ, ನೀರು ನೀಡಿಲ್ಲ. ಕ್ವಾರಂಟೈನ್ ಕೇಂದ್ರದ ಅಧಿಕಾರಿಗಳು ತಮಗೆ ಪರಿಚಯವಿದ್ದವ್ರನ್ನ ಮನೆಗೆ ಕಳುಹಿಸಿ ನಮ್ಮನ್ನ ಮಾತ್ರ ಇಲ್ಲಿ ಕೂಡಿ ಹಾಕಿದ್ದಾರೆ ಅಂತಾ‌ ಜನ ಆರೋಪ […]

ಕ್ವಾರಂಟೈನ್ ಕೇಂದ್ರದಲ್ಲಿ ಅನ್ನ-ನೀರು ಇಲ್ಲದೇ ಮಕ್ಕಳ ಗೋಳಾಟ.. ಎಲ್ಲಿ?
Follow us on

ಗದಗ: ಬೆಂಗಳೂರು ಸಂಪೂರ್ಣ ಲಾಕ್ ಡೌನ್ ಆದ ಕಾರಣ ಬೆಂಗಳೂರಿನಿಂದ ಬಂದ ಜನರಿಗೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಅಲ್ಪಸಂಖ್ಯಾತರ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆ ಕಂಡು ಜನರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾಗಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿಲ್ಲ, ಬೆಳಿಗ್ಗೆ 10 ಗಂಟೆಯಾದ್ರೂ ಉಪಹಾರ, ನೀರು ನೀಡಿಲ್ಲ. ಕ್ವಾರಂಟೈನ್ ಕೇಂದ್ರದ ಅಧಿಕಾರಿಗಳು ತಮಗೆ ಪರಿಚಯವಿದ್ದವ್ರನ್ನ ಮನೆಗೆ ಕಳುಹಿಸಿ ನಮ್ಮನ್ನ ಮಾತ್ರ ಇಲ್ಲಿ ಕೂಡಿ ಹಾಕಿದ್ದಾರೆ ಅಂತಾ‌ ಜನ ಆರೋಪ ಮಾಡಿದ್ದಾರೆ.

ಸದ್ಯ ಕ್ವಾರಂಟೈನ್ ಕೇಂದ್ರದಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದು ಅವರಿಗೂ ಸಹ ಸರಿಯಾದ ಊಟದ ವ್ಯವಸ್ಥೆಯಿಲ್ಲದೆ ನರಳುತ್ತಿದ್ದಾರೆ. ಅಧಿಕಾರಿಗಳ ಈ ದಿವ್ಯ ನಿರ್ಲಕ್ಷತನಕ್ಕೆ ಬೇಸತ್ತ ಕ್ವಾರಂಟೈನ್ ಕೇಂದ್ರದ‌ ಜನರು, ಚಿಕ್ಕ ಮಕ್ಕಳ ಹಸುವಿನ ಕೂಗು ಸಹ ಇವರಿಗೆ ಕಾಣುತ್ತಿಲ್ಲವೇ ಅಂತಾ ತಮ್ಮ ಆಕ್ರೋಶ ಹೊರಹಾಕಿದ್ದಾರೆ.