ಅಂದು ಕ್ರಾಂತಿಯ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದ ಕೋಟೆ ಇಂದು ಅವಸಾನದತ್ತ

ಬೀದರ್: ಭಾರತದ ಇತಿಹಾಸದಲ್ಲಿಯೇ ಅದೂ 12ನೇ ಶತಮಾನದಲ್ಲಿ ಸಮಾನತೆ ಮತ್ತು ಕಾಯಕ ತತ್ವದ ಮೂಲಕ ಕ್ರಾಂತಿಯನ್ನುಂಟು ಮಾಡಿದ್ದು ಕ್ರಾಂತಿಯೋಗಿ ಬಸವಣ್ಣ ಮತ್ತು ಬಿಜ್ಜಳದ ರಾಜ. ಆದ್ರೆ ಬಸವ-ಬಿಜ್ಜಳರ ಬಸವಕಲ್ಯಾಣ ಕೋಟೆ ಇಂದು ಅವನತಿಯತ್ತ ಸಾಗಿದೆ. ಇದಕ್ಕೆ ಕಾರಣ ಆಳುವ ಸರ್ಕಾರಗಳ ಸತತ ನಿರ್ಲಕ್ಷ್ಯ. ಹೌದು ಸಮಾನತೆ ತತ್ವದಡಿ ಕ್ರಾಂತಿಯ ಮೂಲಕ ಅಣ್ಣ ಬಸವಣ್ಣನ ಕಾಯಕ ಭೂಮಿಯಾದ ಬೀದರ್ ಜಿಲ್ಲೆಯ ಬಸವಕಲ್ಯಾಣ ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿಸಬೇಕು ಎನ್ನುವ ಸರ್ಕಾರಗಳ ನಿರ್ಧಾರ ಕೇವಲ ಘೋಷಣೆಯಾಗಿಯೇ ಉಳಿದಿದೆ. ಚುನಾವಣೆ ವೇಳೆ […]

ಅಂದು ಕ್ರಾಂತಿಯ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದ ಕೋಟೆ ಇಂದು ಅವಸಾನದತ್ತ
Follow us
Guru
| Updated By: ಸಾಧು ಶ್ರೀನಾಥ್​

Updated on:Jul 14, 2020 | 2:06 PM

ಬೀದರ್: ಭಾರತದ ಇತಿಹಾಸದಲ್ಲಿಯೇ ಅದೂ 12ನೇ ಶತಮಾನದಲ್ಲಿ ಸಮಾನತೆ ಮತ್ತು ಕಾಯಕ ತತ್ವದ ಮೂಲಕ ಕ್ರಾಂತಿಯನ್ನುಂಟು ಮಾಡಿದ್ದು ಕ್ರಾಂತಿಯೋಗಿ ಬಸವಣ್ಣ ಮತ್ತು ಬಿಜ್ಜಳದ ರಾಜ. ಆದ್ರೆ ಬಸವ-ಬಿಜ್ಜಳರ ಬಸವಕಲ್ಯಾಣ ಕೋಟೆ ಇಂದು ಅವನತಿಯತ್ತ ಸಾಗಿದೆ. ಇದಕ್ಕೆ ಕಾರಣ ಆಳುವ ಸರ್ಕಾರಗಳ ಸತತ ನಿರ್ಲಕ್ಷ್ಯ.

ಹೌದು ಸಮಾನತೆ ತತ್ವದಡಿ ಕ್ರಾಂತಿಯ ಮೂಲಕ ಅಣ್ಣ ಬಸವಣ್ಣನ ಕಾಯಕ ಭೂಮಿಯಾದ ಬೀದರ್ ಜಿಲ್ಲೆಯ ಬಸವಕಲ್ಯಾಣ ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿಸಬೇಕು ಎನ್ನುವ ಸರ್ಕಾರಗಳ ನಿರ್ಧಾರ ಕೇವಲ ಘೋಷಣೆಯಾಗಿಯೇ ಉಳಿದಿದೆ. ಚುನಾವಣೆ ವೇಳೆ ಬಸವಕಲ್ಯಾಣವನ್ನು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿಸಲು ನೂರಾರು ಕೋಟಿ ರೂಪಾಯಿ ಅನುದಾನ ನೀಡುವ ರಾಜಕಾರಣಿಗಳ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ.

ಕೋಟೆಯ ದುಃಸ್ಥಿತಿಯಿಂದ ಕಡಿಮೆಯಾಗುತ್ತಿದೆ ಪ್ರವಾಸಿಗರ ಸಂಖ್ಯೆ ಪ್ರತಿ ವರ್ಷ ಬಸವಕಲ್ಯಾಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದರೂ ಕೋಟೆ ನೋಡುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಕೋಟೆಯ ದುಃಸ್ಥಿತಿ. ವಿದ್ಯಾರ್ಥಿಗಳು ಸೇರಿದಂತೆ ಪ್ರತಿ ವರ್ಷ ಸರಾಸರಿ 30 ಸಾವಿರ ಪ್ರವಾಸಿಗರು ಕಲ್ಯಾಣಕ್ಕೆ ಭೇಟಿ ನೀಡುತ್ತಾರೆ.

ಕೋಟೆ ಮತ್ತು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವರಿಗೆ ತಲಾ 4 ರೂಪಾಯಿ ಮಕ್ಕಳಿಗೆ 2 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಿದ್ದು, ಪ್ರತಿವರ್ಷ ಲಕ್ಷಾಂತರ ರೂಪಾಯಿ ಸಂಗ್ರಹ ಮಾಡಲಾಗುತ್ತಿದೆ, ಅದರ ಆದ್ರೆ ಸದ್ವಿನಿಯೋಗ ಆಗುತ್ತಿಲ್ಲ.

ಗತ ಇತಿಹಾಸ ತಿಳಿಸಲು ಗೈಡ್‌ಗಳೇ ಇಲ್ಲ ಈ ಕೋಟೆಯ ಒಳಗೆ ಬಾರುದ್ ಇಡುವ ಕೋಣೆ, ಕೈದಿಗಳ ಜೈಲು, ರಂಗ ಮಹಲ್, ತೋಪುಗಳು ನೋಡುಗರ ಗಮನ ಸೆಳೆಯುತ್ತವೆ. ಆದ್ರೆ ಕೋಟೆ ಮತ್ತು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮಾಹಿತಿ ನೀಡುವ ಗೈಡ್​ಗಳ ಕೊರತೆ ಇದೆ.

ಪ್ರವಾಸಿಗರು ಸುಮ್ಮನೆ ಒಂದು ಸುತ್ತುಹಾಕಿ ಮರಳಿ ಹೋಗುತ್ತಿದ್ದಾರೆ. ಗತಕಾಲದ ಇತಿಹಾಸ ತಿಳಿಸುವ ಕಾರ್ಯ ಇಲ್ಲಿ ನಡೆಯಬೇಕು. ಈ ಬಗ್ಗೆ ಕೋಟೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರವಾಸಿಗರ ಅಭಿಪ್ರಾಯ

ಪಾಳು ಬಿದ್ದಿದೆ ಐತಿಹಾಸಿಕ ಕೋಟೆ ಕೋಟೆ ಆವರಣದಲ್ಲಿ ಗಿಡಮರಗಳು ಬೆಳೆದು ಅವಶೇಷಗಳು ಹಾಗೂ ಗೋಡೆಗಳು ಹಾಳಾಗುತ್ತಿದ್ದು, ಯಾವ ಸಂದರ್ಭದಲ್ಲಾದರೂ ಕುಸಿಯುವಂತೆ ಕಾಣುತ್ತಿವೆ. ಸರ್ಕಾರ ಪ್ರವಾಸಿ ತಾಣವನ್ನಾಗಿ ಬೆಳೆಸುವ ಜೊತೆಗೆ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಕೋಟೆ ಆವರಣ ಸ್ವಚ್ಛಗೊಳಿಸಿ ಉದ್ಯಾನ ಬೆಳೆಸಿ ಆಕರ್ಷಣೀಯ ತಾಣವಾಗಿಸಬೇಕು. ಗೈಡ್ ನೇಮಕ ಮಾಡಬೇಕು, ಸ್ಮಾರಕಗಳ ಸ್ಥಳದಲ್ಲಿ ಅವುಗಳ ಇತಿಹಾಸವಿರುವ ಫಲಕ ಹಾಕಬೇಕು. ಇದರಿಂದ ಪ್ರವಾಸಿಗರಿಗೆ ಸರಿಯಾದ ಮಾಹಿತಿ ಸಿಗುತ್ತದೆ ಎನ್ನುವುದು ಸ್ಥಳೀಯರ ಆಗ್ರಹ.

115 ಏಕರೆ ವಿಸ್ತಾರದ ಐತಿಹಾಸಿಕ ಕೋಟೆ 12ನೇ ಶತಮಾನಕ್ಕಿಂತ ಪೂರ್ವದಲ್ಲಿಯೇ 115 ಎಕರೆ ಪ್ರದೇಶದಲ್ಲಿ ಕರಿ ಕಲ್ಲಿನಿಂದ ಈ ಐತಿಹಾಸಿಕ ಕೋಟೆಯನ್ನ ಕಟ್ಟಲಾಗಿದೆ. ಬಿಜ್ಜಳ ರಾಜ ಸೇರದಿದಂತೆ ಹತ್ತಾರು ರಾಜಮಹಾರಾಜರು ಈ ಕೋಟೆಯನ್ನ ಆಳಿದ್ದಾರೆ. ವಿಶಾಲ ಪ್ರವೇಶ ದ್ವಾರ, ಪ್ರಾಂಗಣ, ಅಂತರ ಗೋಪುರಗಳು, 150 ಅಡಿ ಎತ್ತರದ ಗೋಡೆಗಳು ಈ ಕೋಟೆಯ ವೈಶಿಷ್ಟ್ಯ. ಕೋಟೆಯನ್ನೋಮ್ಮೇ ಸುತ್ತು ಹಾಕಿದರೆ ಶಿಲ್ಪ ಕಲೆಯ ವೈಭವ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ಇಂಥ ಅಪೂರ್ವ ಕೆತ್ತನೆಗಳು ನಿಧಾನವಾಗಿ ನಶಿಸಿಹೋಗುತ್ತಿರುವುದು ಕಲಾ ಪ್ರೀಯರಿಗೆ ನಿರಾಸೆ ಮೂಡಿಸಿದೆ. ಹೀಗಾಗಿ ಇಂಥ ಕೋಟೆ ಹಾಳಾಗದಂತೆ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಭವ್ಯ ಪರಂಪರೆಯನ್ನು ಪರಿಚಯಿಸುವವಂತಾಗಬೇಕು. ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ ಕೋಟೆಯ ಜಿರ್ಣೋದ್ದಾರಕ್ಕೆ ಸೂಕ್ತ ಕ್ರಮ ಕೈಗೊಂಡು ಸಂರಕ್ಷಣೆಯತ್ತ ಗಮನಹರಿಸಬೇಕೆನ್ನುವುದು ಸ್ಥಳೀಯರ ಆಗ್ರಹ. -ಸುರೇಶ್ ನಾಯಕ್

Published On - 1:56 pm, Tue, 14 July 20

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ