
ಬೆಂಗಳೂರು: ಗುರುರಾಘವೇಂದ್ರ ಸಹಕಾರಿ ಬ್ಯಾಂಕ್‌ನಿಂದ ವಂಚನೆ ಕೇಸ್ಗೆ ಸಂಬಂಧಿಸಿ CIDಯಿಂದ ಮೂವರು ಆರೋಪಿಗಳ ಬಂಧನವಾಗಿದೆ. ಬಾಲರೆಡ್ಡಿ, ವೆಂಕಟೇಶ್ ಮತ್ತು ಸುಬ್ರಹ್ಮಣ್ಯ ಎಂಬ ಮೂವರನ್ನು CID ಅಧಿಕಾರಿಗಳು ಬಂಧಿಸಿದ್ದಾರೆ.
ಈ ಮೂವರು ಪ್ರಕರಣದ ಪ್ರಮುಖ ಆರೋಪಿಗಳು ತಪ್ಪಿಸಿಕೊಳ್ಳಲು ನೆರವಾಗಿದ್ದರು ಎಂದು ಹೇಳಲಾಗಿದೆ. ಪ್ರಮುಖ ಆರೋಪಿಗಳಾದ ಕೆ.ರಾಮಕೃಷ್ಣ, ಜಿ.ರಘುನಾಥ್ ಮತ್ತು ಕೆ.ಆರ್.ವೇಣುಗೋಪಾಲ್ ತಲೆಮರೆಸಿಕೊಳ್ಳುವುದಕ್ಕೆ ನೆರವಾಗಿದ್ದ ಆರೋಪದಡಿ ಇವರನ್ನು ಬಂಧಿಸಲಾಗಿದೆ.