ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಜೈಲಿನಲ್ಲಿ ಬಿಕ್ಕಿ ಬಿಕ್ಕಿ ಅತ್ತ ನಟಿಯರು
ಬೆಂಗಳೂರು: ರಾಗಿಣಿ ಮತ್ತು ಸಂಜನಾರ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಇಬ್ಬರು ನಟಿಯರು ಬಿಕ್ಕಿ ಬಿಕ್ಕಿ ಅತ್ತರು ಎಂದು ತಿಳಿದುಬಂದಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಯರು ಇಂದು ಬಹುತೇಕ ಹೊರ ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದರು ಎಂದು ತಿಳಿದುಬಂದಿದೆ. ಜೈಲಿನ ಅಧಿಕಾರಿಗಳಿಗೆ ಕೈ ಮುಗಿದ ನಟಿಯರು, ನಾವು ಏನು ತಪ್ಪು ಮಾಡಿಲ್ಲ. ನಮ್ಮನ್ನು ಬಿಡಿ ಎಂದು ಗೋಗರೆದರಂತೆ. ರಾಗಿಣಿಯ ಜೈಲು ವಾಸ ಇಂದಿಗೆ ಹದಿನಾಲ್ಕು ದಿನ ಪೂರೈಸಿದೆ. ಜೈಲು […]
ಬೆಂಗಳೂರು: ರಾಗಿಣಿ ಮತ್ತು ಸಂಜನಾರ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಇಬ್ಬರು ನಟಿಯರು ಬಿಕ್ಕಿ ಬಿಕ್ಕಿ ಅತ್ತರು ಎಂದು ತಿಳಿದುಬಂದಿದೆ.
ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಯರು ಇಂದು ಬಹುತೇಕ ಹೊರ ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದರು ಎಂದು ತಿಳಿದುಬಂದಿದೆ. ಜೈಲಿನ ಅಧಿಕಾರಿಗಳಿಗೆ ಕೈ ಮುಗಿದ ನಟಿಯರು, ನಾವು ಏನು ತಪ್ಪು ಮಾಡಿಲ್ಲ. ನಮ್ಮನ್ನು ಬಿಡಿ ಎಂದು ಗೋಗರೆದರಂತೆ.
ರಾಗಿಣಿಯ ಜೈಲು ವಾಸ ಇಂದಿಗೆ ಹದಿನಾಲ್ಕು ದಿನ ಪೂರೈಸಿದೆ. ಜೈಲು ವಾಸದಿಂದ ನಟಿ ಹೈರಾಣಾಗಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ, ಸಂಜನಾಳ ಜೈಲು ವಾಸ ಹನ್ನೆರಡನೆ ದಿನಕ್ಕೆ ಕಾಲಿಟ್ಟಿದೆ. ಇದೀಗ, NDPS ಕೋರ್ಟ್‌ನಿಂದ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾರನ್ನು ಸೆಲ್‌ಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ವಿಶೇಷ ಕೊಠಡಿಯಿಂದ ಸೆಲ್‌ಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು ಇಂದು ಅಥವಾ ನಾಳೆ ಇಬ್ಬರು ಜೈಲು ಸೆಲ್‌ಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.
ಜೈಲ್‌ನ ಸೆಲ್‌ನಲ್ಲಿ ಇಬ್ಬರಿಗೂ ಒಂದೇ ಕೊಠಡಿ ಕೊಡಲಾಗುವುದು. ಜೈಲ್‌ನ ಸೆಲ್‌ನಿಂದ ಇಬ್ಬರೂ ಹತ್ತು ದಿನಗಳ ಕಾಲ ಸೆಲ್‌ನಿಂದ ಹೊರಬರುವಂತಿಲ್ಲ. ನಟಿಯರಿಗೆ ಜೈಲ್‌ನ ಸೆಲ್‌ನಲ್ಲಿ 2ನೇ ಹಂತದ ಕ್ವಾರಂಟೈನ್ ನಡೆಸಲಾಗುವುದು ಎಂಬ ಮಾಹಿತಿ ಸಿಕ್ಕಿದೆ.