ಮೈಕ್ರೊ ಫೈನಾನ್ಸ್​ ಕಂಪನಿಗಳ ಮೇಲೆ ಸಿಐಡಿ ದಾಳಿ: ಆರ್​ಬಿಐ ನಿಯಮ ಉಲ್ಲಂಘನೆ ಆರೋಪ

|

Updated on: Dec 24, 2020 | 8:31 PM

ಆರ್​ಬಿಐ ನಿಯಮ ಉಲ್ಲಂಘಿಸಿ ಸಾಲ ನೀಡುತ್ತಿದ್ದ ಈ ಕಂಪನಿಗಳಿಗೆ ಸೇರಿದ ಇಬ್ಬರು ಸಿಬ್ಬಂದಿಯನ್ನು ಸಿಐಡಿ ತಂಡ ಬಂಧಿಸಿದೆ. ವಹಿವಾಟು ನಡೆಸಲು ಬಳಸುತ್ತಿದ್ದ ಲ್ಯಾಪ್​ಟಾಪ್, ಮೊಬೈಲ್ ಫೋನ್​ಗಳನ್ನು ಜಪ್ತಿ ಮಾಡಿದ್ದಾರೆ.

ಮೈಕ್ರೊ ಫೈನಾನ್ಸ್​ ಕಂಪನಿಗಳ ಮೇಲೆ ಸಿಐಡಿ ದಾಳಿ: ಆರ್​ಬಿಐ ನಿಯಮ ಉಲ್ಲಂಘನೆ ಆರೋಪ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಆ್ಯಪ್​ ಆಧರಿತ ಸಾಲದ ವಹಿವಾಟು ನಡೆಸುತ್ತಿದ್ದ ನಾಲ್ಕು ಮೈಕ್ರೊ ಫೈನಾನ್ಸ್​ ಕಂಪನಿಗಳ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿದ್ದಾರೆ. ಆರ್​ಬಿಐ ನಿಯಮ ಉಲ್ಲಂಘಿಸಿ ಸಾಲ ನೀಡುತ್ತಿದ್ದ ಈ ಕಂಪನಿಗಳಿಗೆ ಸೇರಿದ ಇಬ್ಬರು ಸಿಬ್ಬಂದಿಯನ್ನು ಸಿಐಡಿ ತಂಡ ಬಂಧಿಸಿದೆ. ವಹಿವಾಟು ನಡೆಸಲು ಬಳಸುತ್ತಿದ್ದ ಲ್ಯಾಪ್​ಟಾಪ್, ಮೊಬೈಲ್ ಫೋನ್​ಗಳನ್ನು ಜಪ್ತಿ ಮಾಡಿದ್ದಾರೆ.

ತನಿಖೆ ವೇಳೆ ಈ ಕಂಪನಿಗಳಲ್ಲಿ ವಿದೇಶಿ ಮೂಲದ ವ್ಯಕ್ತಿಗಳ ಹೂಡಿಕೆಯೂ ಪತ್ತೆಯಾಗಿತ್ತು. ಸಾಲ ನೀಡಲು ಈ ಹಣವನ್ನು ಬಳಸಲಾಗುತ್ತಿತ್ತು. ತಮ್ಮ ಆ್ಯಪ್ ಬಳಸುವಂತೆ ಗ್ರಾಹಕರನ್ನು ಪುಸಲಾಯಿಸಿ, ಸಾಲ ಪಡೆಯುವುದು ಸುಲಭ ಎಂದು ಆಮಿಷ ಒಡ್ಡುತ್ತಿದ್ದರು. ಈ ವೇಳೆ ಗ್ರಾಹಕರ ದಾಖಲೆಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದರು. ಮರುಪಾವತಿ ವೇಳೆ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಇಂದು ಸಿಐಡಿ ಕಾರ್ಯಾಚರಣೆ ನಡೆದಿದೆ.

ಆ್ಯಪ್​ ಮೂಲಕ ನೀಡುತ್ತಿದ್ದ ಸಾಲಕ್ಕೆ ಶೇ 35 ಬಡ್ಡಿ! ರೈಡ್​ ವೇಳೆ ಹೊರಬಿತ್ತು ಭಯಾನಕ ಸತ್ಯ