ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆ ಬಳಿ ಬಟ್ಟೆ ಅಂಗಡಿಯೊಂದು ಅಗ್ನಿಗೆ ಆಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಶಿವಕುಮಾರ್ ಎಂಬುವವರಿಗೆ ಸೇರಿದ ವೈಟ್ ಬರ್ಡ್ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಕಸ್ಮಿಕವಾಗಿ ಹೊತ್ತಿ ಉರಿದ ಬೆಂಕಿ ಇಡೀ ಅಂಗಡಿಗೆ ವ್ಯಾಪಿಸಿದ ಪರಿಣಾಮ ಸಂಪೂರ್ಣ ಮಳಿಗೆ ಸುಟ್ಟು ಕರಕಲಾಗಿದೆ.
ಅಂಗಡಿಯಲ್ಲಿದ್ದ ಬಟ್ಟೆ, ಹೊಲಿಗೆ ಯಂತ್ರ ಸೇರಿದಂತೆ ಇತರೆ ಉಪಕರಣಗಳು ಬೆಂಕಿಗೆ ಆಹುತಿಯಾಗಿದ್ದು, ಘಟನೆಯಿಂದಾಗಿ ಸುಮಾರು ₹12-₹15ಲಕ್ಷ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೆಳಗ್ಗೆ ಬಾಗಿಲು ತೆಗೆದು ಸ್ವಲ್ಪ ಹೊತ್ತಿನಲ್ಲೇ ಅವಘಡ ಉಂಟಾಗಿದ್ದು, ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ.. ಹೊತ್ತಿ ಉರಿದ ಮೋಕ್ಷ ಅಗರಬತ್ತಿ ಕಾರ್ಖಾನೆ
Published On - 12:18 pm, Sat, 30 January 21