ಮಹಾಪಂಚಾಯತ್ ಫರ್ಮಾನು! ಮನೆಯಿಂದ ಒಬ್ಬ ರೈತ ದೆಹಲಿ ಪ್ರತಿಭಟನೆಗೆ ಬರಲೇಬೇಕು, ಇಲ್ಲದಿದ್ರೆ 1500 ರೂ ದಂಡ!
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ಇಂದು ಕೂಡ ಮುಂದುವರಿದಿದೆ. ದೆಹಲಿ-ಹರಿಯಾಣ ಗಡಿಭಾಗವಾದ ಸಿಂಘು, ಟಿಕ್ರಿ ಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ದೆಹಲಿ: ಮನೆಯಿಂದ ಒಬ್ಬ ರೈತ ದೆಹಲಿ ಪ್ರತಿಭಟನೆಗೆ ಬರಲೇಬೇಕು. ಪ್ರತಿಭಟನೆಗೆ ಹೋಗದ ಕುಟುಂಬಕ್ಕೆ 1,500 ರೂ. ದಂಡ ವಿಧಿಸಲಾಗುವುದು. ದಂಡ ವಿಧಿಸಲು ನಿರಾಕರಿಸಿದವರನ್ನು ಗ್ರಾಮದಿಂದ ಬಹಿಷ್ಕರಿಸಲಾಗುವುದು ಎಂದು ಮಹಾಪಂಚಾಯತ್ ಮುಖಂಡರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪಂಜಾಬ್ ಬಟಿಂಡಾದ ವಿರ್ಕ್ ಖುರ್ದ್ ಗ್ರಾಮ ಪಂಚಾಯತಿಯಲ್ಲಿ ಹೀಗೆ ಪ್ರಕಟಣೆ ಹೊರಡಿಸಲಾಗಿದೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯು 66 ದಿನದತ್ತ ಕಾಲಿಟ್ಟಿದೆ. ಗಣರಾಜ್ಯೋತ್ಸವ ದಿನದಂದು ನಡೆದ ಘಟನೆಗಳ ಬಳಿಕವೂ ರೈತ ಚಳುವಳಿ ಮುಂದುವರಿದಿದೆ. ದೆಹಲಿ ಗಡಿಭಾಗಗಳಲ್ಲಿ ರೈತ ಸಂಘಟನೆಯ ನಾಯಕರು, ಸದಸ್ಯರು ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಕೇಂದ್ರದ ವಿರುದ್ಧ ನಡೆಯುತ್ತಿರುವ ರೈತ ಆಂದೋಲನದಲ್ಲಿ ಬಟಿಂಡಾದ ರೈತರು ಒಂದು ವಾರಗಳ ಕಾಲ ಭಾಗಿಯಾಗಬೇಕು. ದೆಹಲಿಗೆ ಹೋಗಲು ಒಪ್ಪದಿದ್ದರೆ ಅಂಥವರಿಗೆ 1,500 ರೂ. ದಂಡ ವಿಧಿಸಲಾಗುವುದು ಎಂದು ಮಹಾ ಪಂಚಾಯತ್ ಮುಖಂಡರ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ.
ಗಾಜಿಪುರ್ ಗಡಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಗಣರಾಜ್ಯೋತ್ಸವದ ಬಳಿಕ ರೈತ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಟ್ರ್ಯಾಕ್ಟರ್ ಚಳುವಳಿ ಅನುಚಿತ ತಿರುವು ಪಡೆದುಕೊಂಡಿತ್ತು. ನಿನ್ನೆ (ಜ.29) ಕೂಡ ದೆಹಲಿ ಗಡಿ ಪ್ರದೇಶಗಳಾದ ಸಿಂಘು, ಟಿಕ್ರಿ ಮುಂತಾದ ಕಡೆಗಳಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಸಿಂಘು ಗಡಿಯಲ್ಲಿ ರೈತರು ಹಾಗೂ ಪೊಲೀಸರ ಮಧ್ಯೆ ಮತ್ತೆ ಘರ್ಷಣೆ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ, ದೆಹಲಿ ಗಾಜಿಪುರ್ ಗಡಿಯಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ. ಹರಿಯಾಣ, ಪಂಜಾಬ್ನ 17 ಜಿಲ್ಲೆಗಳಲ್ಲಿ ಕೂಡ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ರೈತ ಸಂಘಟನೆಗಳಿಂದ ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ಇಂದು ಕೂಡ ಮುಂದುವರಿದಿದೆ. ದೆಹಲಿ-ಹರಿಯಾಣ ಗಡಿಭಾಗವಾದ ಸಿಂಘು, ಟಿಕ್ರಿ ಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಂಘು ಗಡಿಯಲ್ಲಿ ಭದ್ರತೆಗಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ. ನಿನ್ನೆ (ಜ.29) ಸಿಂಘು ಗಡಿಯಲ್ಲಿ ರೈತರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಇಂದು (ಜ.30) ರೈತ ಸಂಘಟನೆಗಳು 12 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿವೆ. ಸುದ್ದಿಗೋಷ್ಠಿಯಲ್ಲಿ ಮುಂದಿನ ಹೋರಾಟದ ಬಗ್ಗೆ ರೈತ ಸಂಘಟನೆಗಳಿಂದ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.
ರೈತರೇ ಹೋರಾಟ ಮುಂದುವರಿಸಿ, ನಿಮ್ಮ ಜತೆ ನಾವಿದ್ದೇವೆ: ರಾಹುಲ್ ಗಾಂಧಿ ಅಭಯ‘ಹಸ್ತ‘
ಫ್ರೀಡಂ ಪಾರ್ಕ್ನಲ್ಲಿಂದು ಕಪ್ಪು ಪಟ್ಟಿ ಧರಿಸಿ ರೈತರಿಂದ ಕರಾಳ ದಿನಾಚರಣೆ..
Published On - 11:48 am, Sat, 30 January 21