ಮತ್ತೆ ಖಾತೆ ಬದಲಾವಣೆಗೆ ಸಿಎಂ ನಿರ್ಧಾರ; ವೈದ್ಯಕೀಯ ಶಿಕ್ಷಣ ಖಾತೆ ಸುಧಾಕರ್ ಹೆಗಲಿಗೆ?..ಆನಂದ್ ಸಿಂಗ್ ಮುನಿಸು !
ಈ ಬಗ್ಗೆ ನನಗೆ ಮಾಹಿತಿ ಇಲ್ಲವೆಂದು ಸಚಿವ ಮಾಧುಸ್ವಾಮಿ ಹೇಳಿದ್ದರೆ, ಇನ್ನೊಂದೆಡೆ ಆನಂದ್ ಸಿಂಗ್, ನಾನು ಸಿಎಂ ಭೇಟಿ ಮಾಡುತ್ತೇನೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದೂ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಖಾತೆ ಹಂಚಿಕೆ ಮುಗಿಯುತ್ತಿಲ್ಲ. ಸಚಿವರ ಮುನಿಸು ಪರಿಹಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಸ್ ಮುಂದುವರಿದಿದೆ. ಈಗ ಮತ್ತೆ ಬಿಎಸ್ವೈ ಖಾತೆ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಜೆ.ಸಿ.ಮಾಧುಸ್ವಾಮಿಗೆ ನೀಡಲಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ ಸಚಿವ ಸುಧಾಕರ್ಗೇ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮಾಧುಸ್ವಾಮಿ ಬಳಿಯಿದ್ದ ಹಜ್, ವಕ್ಫ್ ಖಾತೆಯನ್ನೂ ವಾಪಸ್ ಪಡೆಯಲು ನಿರ್ಧರಿಸಿದ್ದಲ್ಲದೆ, ಸಚಿವ ಆನಂದ್ಸಿಂಗ್ರಿಂದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಹಿಂಪಡೆಯುವ ಬಗ್ಗೆ ಯೋಚಿಸಿದ್ದಾರೆ. ಹಾಗೇ ಆನಂದ್ ಸಿಂಗ್ಗೆ ಹಜ್, ವಕ್ಫ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಜವಾಬ್ದಾರಿ ನೀಡಲು ನಿರ್ಧರಿಸಿದ್ದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಸಂಜೆ ಅಧಿಕೃತವಾಗಿ ಆದೇಶ ಹೊರಬೀಳಲಿದೆ.
ಇನ್ನು ಈ ಬಗ್ಗೆ ನನಗೆ ಮಾಹಿತಿ ಇಲ್ಲವೆಂದು ಸಚಿವ ಮಾಧುಸ್ವಾಮಿ ಹೇಳಿದ್ದರೆ, ಇನ್ನೊಂದೆಡೆ ಆನಂದ್ ಸಿಂಗ್, ನಾನು ಸಿಎಂ ಭೇಟಿ ಮಾಡುತ್ತೇನೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದೂ ಆಪ್ತರ ಬಳಿ ಹೇಳಿಕೊಂಡಿದ್ದಾಗಿ ಮಾಹಿತಿ ಸಿಕ್ಕಿದೆ.
ಕೊನೆಗೂ ರೈತರ ಹಠಕ್ಕೆ ಮಣಿದ ದೆಹಲಿ ಪೊಲೀಸರು.. ‘ಕಿಸಾನ್ ಗಣತಂತ್ರ’ ಪರೇಡ್ಗೆ ಅನುಮತಿ
Published On - 11:33 am, Mon, 25 January 21