AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿಯಲ್ಲೊಬ್ಬ ಎಡವಟ್ಟಿನ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್.. ಕಂತೆ ಕಂತೆ ಹಣ ಎಣಿಸುತಿದ್ದವ ಕಂಬಿ ಹಿಂದೆ

ಅರುಣ್ ವೀರ ಮಲ್ಲ ಎಂಬ ಬ್ರಾಂಚ್ ಮ್ಯಾನೇಜರ್ ಮನಿ ಡಬ್ಲಿಂಗ್ ಆಸೆಗೆ ಬಿದ್ದು ಕೋಟಿ ಹಣ ಹೂಡಿ ಪೊಲೀಸರ ಅತಿಥಿಯಾಗಿದ್ದಾನೆ. ಅರುಣ್ ವೀರ ಮಲ್ಲ, ಪ್ರತಿಷ್ಠಿತ ಬ್ಯಾಂಕ್​ನ ರಾಜರಾಜೇಶ್ವರಿ ನಗರದ ಬ್ರಾಂಚ್ ಮ್ಯಾನೇಜರ್.

ಸಿಲಿಕಾನ್ ಸಿಟಿಯಲ್ಲೊಬ್ಬ ಎಡವಟ್ಟಿನ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್.. ಕಂತೆ ಕಂತೆ ಹಣ ಎಣಿಸುತಿದ್ದವ ಕಂಬಿ ಹಿಂದೆ
ಅರುಣ್ ವೀರ ಮಲ್ಲ
ಆಯೇಷಾ ಬಾನು
|

Updated on: Jan 25, 2021 | 9:49 AM

Share

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಬ್ಬ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ಕಳ್ಳದಾರಿಯ ಮೊದಲ ಪ್ರಯತ್ನದಲ್ಲೇ ಎಡವಟ್ಟು ಮಾಡಿಕೊಂಡು ಕಂಬಿ ಹಿಂದೆ ಲಾಕ್ ಆಗಿದ್ದಾನೆ. ಕಂತೆ ಕಂತೆ ಹಣ ಎಣಿಸುತಿದ್ದವನು ಕಂಬಿ ಎಣಿಸುತ್ತಿದ್ದಾನೆ.

ಅರುಣ್ ವೀರ ಮಲ್ಲ ಎಂಬ ಬ್ರಾಂಚ್ ಮ್ಯಾನೇಜರ್ ಮನಿ ಡಬ್ಲಿಂಗ್ ಆಸೆಗೆ ಬಿದ್ದು ಕೋಟಿ ಹಣ ಹೂಡಿ ಪೊಲೀಸರ ಅತಿಥಿಯಾಗಿದ್ದಾನೆ. ಅರುಣ್ ವೀರ ಮಲ್ಲ, ಪ್ರತಿಷ್ಠಿತ ಬ್ಯಾಂಕ್​ನ ರಾಜರಾಜೇಶ್ವರಿ ನಗರದ ಬ್ರಾಂಚ್ ಮ್ಯಾನೇಜರ್. ಮನಿ ಡಬ್ಲಿಂಗ್ ಆಸೆಗೆ ಇದೇ ತಿಂಗಳ 12ರಂದು ಬ್ಯಾಂಕ್​ನ ನಿಧಿಯಿಂದ ಶಾಖೆಯ ಕಾರ್ಯ ಚಟುವಟಿಕೆಗೆಂದು ಒಂದು ಕೋಟಿ ರೂಪಾಯಿ ಡ್ರಾ ಮಾಡಿಕೊಂಡಿದ್ದಾನೆ. ಬೆಳಿಗ್ಗೆ ಹಣ ಪಡೆದು ಶಾಖೆಯಲ್ಲಿ ಜಮೆ ಮಾಡದೆ ನಾಪತ್ತೆಯಾಗಿದ್ದಾನೆ. ಬಳಿಕ ಸಂಜೆ ಶಾಖೆಯ ವ್ಯವಸ್ಥಾಪಕಿ ರಮ್ಯಾ ಶೆಟ್ಟಿರವರಿಗೆ ಕರೆ ಮಾಡಿ ಹಣ ಡಿಪಾಸಿಟ್ ಮಾಡಿದ್ದಾಗಿ ನಗದು ನಮೂದು ಪಾಸ್ ಮಾಡುವಂತೆ ಹೇಳಿದ್ದಾನೆ. ಅರುಣ್ ಮಾತಿನಿಂದ ಅನುಮಾನಗೊಂಡ ಶಾಖಾ ವ್ಯವಸ್ಥಾಪಕಿ ಹಿರಿಯ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಈ ವೇಳೆ ಅಸಲಿ ಸತ್ಯ ಬಯಲಾಗಿದೆ.

ವೈಯಕ್ತಿಕ ಲಾಭಕ್ಕೆ ಬ್ಯಾಂಕ್​ಗೆ ವಂಚಿಸಿದ ಬ್ರಾಂಚ್ ಮ್ಯಾನೇಜರ್ ಇನ್ನು ಇತ್ತ ಹಣ ತೆಗೆದುಕೊಂಡು ಹೊಗಿದ್ದ ಬ್ರಾಂಚ್ ಮ್ಯಾನೇಜರ್ ಅರುಣ್, ಸಂಜೆ ಬ್ಯಾಂಕ್​ಗೆ ಕರೆ ಮಾಡಿ ತನನ್ನು ಯಾರೋ ದರೋಡೆ ಮಾಡಿದ್ದಾಗಿ, ಹಣ ಕಳೆದುಕೊಂಡಿದ್ದಾಗಿ ಹೇಳಿದ್ದಾನೆ. ಸದ್ಯ ನಾನು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿದ್ದೇನೆಂದು ತಿಳಿಸಿದ್ದಾನೆ. ಬಳಿಕ ಅರುಣ್ ಮೇಲೆ ಅನುಮಾನಗೊಂಡು ಬೆಂಗಳೂರು ನಗರದ ಸೌಥ್ ರಿಜಿನಲ್ ಮ್ಯಾನೇಜರ್ ಈ ಬಗ್ಗೆ ಯಲಹಂಕ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ತಲಾಶ್ ನಡೆಸಿ ಆರೋಪಿ ಅರುಣ್​ನನ್ನು ಬಂಧಿಸಿ ತನಿಖೆ ಕೈಗೊಂಡ ಬಳಿಕ ಅಸಲಿ ಸತ್ಯ ಬಯಲಾಗಿದೆ. ಮಧ್ಯವರ್ತಿಯಿಂದ ಪರಿಚಯವಾದ ಇಬ್ಬರಿಂದ ಅರುಣ್​ಗೆ ಮಹಾನ್ ದೋಖಾ ಆಗಿದೆ. ಕೆಲ ದಿನಗಳ ಹಿಂದೆ ಮಧ್ಯವರ್ತಿ ಬಸವರಾಜ್ ಮುಖಾಂತರ ಪರಿಚಯವಾಗಿದ್ದ ಇಮ್ತಿಯಾಜ್ ಹಾಗೂ ಮತ್ತೋರ್ವ ವ್ಯಕ್ತಿ ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ಒಂದು ಕೋಟಿಯನ್ನು ಕೆಲವೇ ಗಂಟೆಯಲ್ಲಿ ಎರಡು ಕೋಟಿ ಕೊಡೋದಾಗಿ ನಂಬಿಸಿ ಮೋಸ ಮಾಡಿದ್ದಾರೆ.

ಅಲ್ಲದೇ, ಏಜೆಂಟ್​ಗೂ ಪರ್ಸೆಂಟ್ ಹಣ ಕೊಡೋದಾಗಿ ಹೇಳಿದ್ದರಂತೆ. ಹೀಗಾಗಿ ಎರಡು ಕೋಟಿ ಹಣದ ಕನಸು ಕಂಡು ಬ್ಯಾಂಕ್​ನ ಹಣ ಕೊಟ್ಟು ಅರುಣ್ ಕಂಬಿ ಹಿಂದೆ ಬಿದ್ದಿದ್ದಾನೆ. ಅರುಣ್ ಹೇಳಿಕೆ ಆಧರಿಸಿ ಯಲಹಂಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹಣ ಪಡೆದು ವಂಚಿಸಿದ್ದ ಇಮ್ತಿಯಾಜ್, ಏಜೆಂಟ್ ಬಸವರಾಜ್ ಅರೆಸ್ಟ್ ಆಗಿದ್ದು ಮತ್ತೊಬ್ಬ ನಾಪತ್ತೆಯಾಗಿದ್ದಾನೆ. ಮತ್ತೋರ್ವ ವ್ಯಕ್ತಿಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಹಣ ಡಬಲ್ ಆಗುತ್ತೆ ಅಂತ ಹಣ ಕೊಟ್ಟಿ ಕೆಟ್ಟ ಅರುಣ್ ಕೂಡ ಕಂಬಿ ಎಣಿಸುತ್ತಿದ್ದಾನೆ.

ತೂಕದಲ್ಲಿ ಏರುಪೇರು ಮಾಡಿ ರೈತರಿಗೆ ಮೋಸ: ದಲ್ಲಾಳಿ‌ಯ ಧೋಖಾಗೆ ತೀವ್ರ ಆಕ್ರೋಶ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ