ಮಸ್ಕಿ ಬೈಎಲೆಕ್ಷನ್‌ನಲ್ಲಿ ಪ್ರತಾಪಗೌಡ ಪಾಟೀಲ್ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ – ಬಿ.ಎಸ್.ಯಡಿಯೂರಪ್ಪ

ಮಸ್ಕಿಯಲ್ಲಿ ಪ್ರತಾಪಗೌಡ ಬಂದಾಗ ಭವ್ಯ ಸ್ವಾಗತ ಮಾಡಿದ್ದಾರೆ. ಪ್ರತಾಪಗೌಡ ಪಾಟೀಲ್ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಮಸ್ಕಿ ಬೈಎಲೆಕ್ಷನ್‌ನಲ್ಲಿ ಪ್ರತಾಪಗೌಡ ಪಾಟೀಲ್ ಗೆಲ್ಲುತ್ತಾರೆ. 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಸಿಎಂ ಹೇಳಿದ್ದಾರೆ.

ಮಸ್ಕಿ ಬೈಎಲೆಕ್ಷನ್‌ನಲ್ಲಿ ಪ್ರತಾಪಗೌಡ ಪಾಟೀಲ್ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ - ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ

Updated on: Mar 21, 2021 | 11:43 AM

ರಾಯಚೂರು: ಏಪ್ರಿಲ್ 17ರಂದು ಮಸ್ಕಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ದೇವರ ಮೊರೆ ಹೋಗಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನ ಶರಣಬಸವೇಶ್ವರ ದೇಗುಲಕ್ಕೆ ಸಿಎಂ ಭೇಟಿ ನೀಡಿ ಶರಣಬಸವೇಶ್ವರರ ದರ್ಶನ ಪಡೆದಿದ್ದಾರೆ. ದೇವಾಲಯದ ಸಮಿತಿಯಿಂದ ಸಿಎಂ BSYಗೆ ಸನ್ಮಾನ ಮಾಡಲಾಯಿತು.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ವಿಜಯೇಂದ್ರ ಬಸವಕಲ್ಯಾಣ ಅಭ್ಯರ್ಥಿಯಾಗ್ತಾರೆಂಬ ವಿಚಾರಕ್ಕೆ ಉತ್ತರಿಸಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದಾರೆ. ಬೈಎಲೆಕ್ಷನ್ ಮುಗಿದ ಬಳಿಕ ಮೈಸೂರಿನಲ್ಲಿ ಮನೆ ಮಾಡ್ತಾರೆ. ಅಲ್ಲಿನ ಎರಡು, ಮೂರು ಕ್ಷೇತ್ರಗಳಲ್ಲಿ ಪಕ್ಷ ಸಂಘಟಿಸುತ್ತಾರೆ. ಮುಂಬರುವ ದಿನಗಳಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಬರಲು ಶ್ರಮ ಹಾಕಲಾಗುತ್ತೆ. ಮುಂದಿನ ಬಾರಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಬಿ.ವೈ.ವಿಜಯೇಂದ್ರ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿದ್ರು.

ಮಸ್ಕಿ ಬೈಎಲೆಕ್ಷನ್‌ನಲ್ಲಿ ಪ್ರತಾಪಗೌಡ ಪಾಟೀಲ್ ಗೆಲ್ಲುತ್ತಾರೆ
ಇದೇ ವೇಳೆ ಮಾತನಾಡಿದ ಅವರು, ಅಗತ್ಯವಿರುವ ನೀರಾವರಿ ಯೋಜನೆಗೆ ಆದ್ಯತೆ ನೀಡುತ್ತೇವೆ. 5A ಉಪಕಾಲುವೆ ಬದಲು ಏತನೀರಾವರಿ ಯೋಜನೆ, ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಮಾಡ್ತೇವೆ ಎಂದರು.

ಮಸ್ಕಿಯಲ್ಲಿ ಪ್ರತಾಪಗೌಡ ಬಂದಾಗ ಭವ್ಯ ಸ್ವಾಗತ ಮಾಡಿದ್ದಾರೆ. ಪ್ರತಾಪಗೌಡ ಪಾಟೀಲ್ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಮಸ್ಕಿ ಬೈಎಲೆಕ್ಷನ್‌ನಲ್ಲಿ ಪ್ರತಾಪಗೌಡ ಪಾಟೀಲ್ ಗೆಲ್ಲುತ್ತಾರೆ. 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಸಿಎಂ ಹೇಳಿದ್ದಾರೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ನಾವು ಗೆದ್ದಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲೂ ನಾವು ಗೆಲ್ಲಲಿದ್ದೇವೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಮಾಡಿ ದೆಹಲಿಗೆ ಕಳುಹಿಸಿದ್ದೇವೆ. ಶೀಘ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಿಸುತ್ತೇವೆ ಎಂದು ಸಿಂಧನೂರಿನಲ್ಲಿ ಸಿಎಂ ತಿಳಿಸಿದರು. ಇನ್ನು ಏ.17ರಂದು ಮಸ್ಕಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಿಎಂ ಬಿಎಸ್‌ವೈ ಮತಯಾಚನೆ ನಡೆಸುತ್ತಿದ್ದಾರೆ. ದೇಗುಲಕ್ಕೆ ಭೇಟಿ ನೀಡಿದ ವೇಳೆ ಸಿಎಂ ಮಸ್ಕಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಮತ ಹಾಕಲು‌ ಮನವಿ ಮಾಡಿದ್ದಾರೆ.

ಬಿಜೆಪಿ ಗೆಲುವಿಗೆ ಸಿಎಂ ಬಿಎಸ್‌ವೈ ಚುನಾವಣಾ ರಣತಂತ್ರ
ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಕಾರ್ಯಕರ್ತರ ಜತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿದ್ದಾರೆ. ಕಾರ್ಯಕರ್ತರು, ಸಿಎಂಗೆ ಜಾತಿವಾರು ಮತಗಳ ಲೆಕ್ಕ ನೀಡಿದ್ದು
ಗ್ರಾಮೀಣ ಪ್ರದೇಶದ ಜನರನ್ನ ಬಿಜೆಪಿಗೆ ಸೇರಿಸಲು ರಣತಂತ್ರ ಹೆಣೆಯಲಾಗಿದೆ. ಸಿಎಂ BSY ಕ್ಷೇತ್ರದ ಎಲ್ಲ ವರ್ಗದ ಮತದಾರರ ಮಾಹಿತಿ ಪಡೆದಿದ್ದಾರೆ. ಮಸ್ಕಿಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸುವಂತೆ ಸಿಎಂ ಸೂಚನೆ ನೀಡಿದ್ದಾರಂತೆ.

ಇದನ್ನೂ ಓದಿ: ‘ಮಸ್ಕಿಗೆ ಒಂದು ದೊಡ್ಡ ಹುಲಿ ಬಂದಿದೆ, ಅದು ರಾಜಾಹುಲಿ; ಈಗ ಇನ್ನೊಂದು ಮರಿ ಹುಲಿಯನ್ನ ಕ್ಷೇತ್ರಕ್ಕೆ ಕಳಿಸುತ್ತೇವೆ’