ಲಾಲ್‌ಬಾಗ್‌ನಲ್ಲಿ ಅಕಾಡೆಮಿ ಉದ್ಘಾಟಿಸಿ, MTR ‌ನಲ್ಲಿ ಬೊಂಬಾಟ್ ಬ್ರೇಕ್​ಫಾಸ್ಟ್ ಮಾಡಿದ BSY

ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್‌ ಸಮೀಪ ಇರೋ ಎಂಟಿಆರ್‌ ಹೋಟೆಲ್‌ ಜನಸಾಮಾನ್ಯರಿಂದ ಹಿಡಿದು ಮಹಾಮಹಿಮರವರೆಗೂ ದಿಲ್ ಪಸಂದ್! ರುಚಿ-ಶುಚಿ ಇಲ್ಲಿನ ಆಕರ್ಷಣೆ. ಬೆಂಗಳೂರಿನ ಕೆಲವೇ ಕೆಲ ಹಳೆಯ ಮತ್ತು ತನ್ನದೇ ಆದ ವೈಶಿಷ್ಟತೆ ಹೊಂದಿರೋ ಹೊಟೆಲ್‌ಗಳಲ್ಲಿ ಇದು ಕೂಡಾ ಒಂದು. ಇಲ್ಲಿ ಬೆಳಗಿನ ಉಪಹಾರ ಮಾಡೋದರ ಗಮ್ಮತ್ತೇ ಬೇರೆ. ಇದಕ್ಕೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕೂಡಾ ಹೊರತಾಗಿಲ್ಲ. ಇವತ್ತು ಲಾಲ್‌ಬಾಗ್‌ನಲ್ಲಿ ವಲ್ಲಭಾಯಿ ಪಟೇಲ್‌ ಅಕಾಡೆಮಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಇತ್ತು. ಜತೆಗೆ ಸಾವಯವ ಗೊಬ್ಬರ ಘಟಕದ ಉದ್ಘಾಟನೆ ಕೂಡಾ […]

ಲಾಲ್‌ಬಾಗ್‌ನಲ್ಲಿ ಅಕಾಡೆಮಿ ಉದ್ಘಾಟಿಸಿ, MTR ‌ನಲ್ಲಿ ಬೊಂಬಾಟ್ ಬ್ರೇಕ್​ಫಾಸ್ಟ್ ಮಾಡಿದ BSY
Follow us
ಸಾಧು ಶ್ರೀನಾಥ್​
|

Updated on:Jun 13, 2020 | 7:39 PM

ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್‌ ಸಮೀಪ ಇರೋ ಎಂಟಿಆರ್‌ ಹೋಟೆಲ್‌ ಜನಸಾಮಾನ್ಯರಿಂದ ಹಿಡಿದು ಮಹಾಮಹಿಮರವರೆಗೂ ದಿಲ್ ಪಸಂದ್! ರುಚಿ-ಶುಚಿ ಇಲ್ಲಿನ ಆಕರ್ಷಣೆ. ಬೆಂಗಳೂರಿನ ಕೆಲವೇ ಕೆಲ ಹಳೆಯ ಮತ್ತು ತನ್ನದೇ ಆದ ವೈಶಿಷ್ಟತೆ ಹೊಂದಿರೋ ಹೊಟೆಲ್‌ಗಳಲ್ಲಿ ಇದು ಕೂಡಾ ಒಂದು. ಇಲ್ಲಿ ಬೆಳಗಿನ ಉಪಹಾರ ಮಾಡೋದರ ಗಮ್ಮತ್ತೇ ಬೇರೆ. ಇದಕ್ಕೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕೂಡಾ ಹೊರತಾಗಿಲ್ಲ.

ಇವತ್ತು ಲಾಲ್‌ಬಾಗ್‌ನಲ್ಲಿ ವಲ್ಲಭಾಯಿ ಪಟೇಲ್‌ ಅಕಾಡೆಮಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಇತ್ತು. ಜತೆಗೆ ಸಾವಯವ ಗೊಬ್ಬರ ಘಟಕದ ಉದ್ಘಾಟನೆ ಕೂಡಾ ಇತ್ತು. ಹೀಗಾಗಿ ಎರಡೂ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಿಎಂ ಬಿಎಸ್‌ವೈ ಸನಿಹದಲ್ಲೇ ಇದ್ದ ಎಟಿಆರ್‌ ನತ್ತ ಹೆಜ್ಜೆ ಹಾಕಿಯೇ ಬಿಟ್ರು.

ಸೀದಾ ಎಂಟಿಆರ್‌ ಹೊಟೆಲ್‌ಗೆ ಎಂಟ್ರಿ ಕೊಟ್ಟವರೇ ತಮಗಿಷ್ಟವಾದ ತಿಂಡಿ ಆರ್ಡರ್‌ ಮಾಡಿದ್ರು.. ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಮೊದಲ ಬಾರಿಗೆ ಹೋಟೆಲ್‌ಗೆ ತೆರಳಿದ ಮುಖ್ಯಮಂತ್ರಿ ಸಖತ್ತಾಗಿ ಬೆಳಗಿನ ಉಪಹಾರ ಸವಿದ್ರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್‌ ಅಶೋಕ್‌, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರ ಗೌಡ ಪಾಟೀಲ್ ಮುನೇನಕೊಪ್ಪ ಮುಖ್ಯಮಂತ್ರಿಗೆ ಸಾಥ್‌ ಕೊಟ್ರು. ಎಂದಿನಂತೆ ಎಂಟಿಆರ್‌ ಹೋಟೆಲ್‌ ಸಿಬ್ಬಂದಿ ದಿಢೀರನೆ ಬಂದ ವಿಶೇಷ ಅತಿಥಿಗೆ ಸತ್ಕಾರ ಮಾಡಿ ಧನ್ಯತಾ ಭಾವ ಮೆರೆದರು!

Published On - 1:06 pm, Sat, 13 June 20

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ