ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್ ಸಮೀಪ ಇರೋ ಎಂಟಿಆರ್ ಹೋಟೆಲ್ ಜನಸಾಮಾನ್ಯರಿಂದ ಹಿಡಿದು ಮಹಾಮಹಿಮರವರೆಗೂ ದಿಲ್ ಪಸಂದ್! ರುಚಿ-ಶುಚಿ ಇಲ್ಲಿನ ಆಕರ್ಷಣೆ. ಬೆಂಗಳೂರಿನ ಕೆಲವೇ ಕೆಲ ಹಳೆಯ ಮತ್ತು ತನ್ನದೇ ಆದ ವೈಶಿಷ್ಟತೆ ಹೊಂದಿರೋ ಹೊಟೆಲ್‌ಗಳಲ್ಲಿ ಇದು ಕೂಡಾ ಒಂದು. ಇಲ್ಲಿ ಬೆಳಗಿನ ಉಪಹಾರ ಮಾಡೋದರ ಗಮ್ಮತ್ತೇ ಬೇರೆ. ಇದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡಾ ಹೊರತಾಗಿಲ್ಲ.
ಸೀದಾ ಎಂಟಿಆರ್ ಹೊಟೆಲ್‌ಗೆ ಎಂಟ್ರಿ ಕೊಟ್ಟವರೇ ತಮಗಿಷ್ಟವಾದ ತಿಂಡಿ ಆರ್ಡರ್ ಮಾಡಿದ್ರು.. ಲಾಕ್‌ಡೌನ್ ತೆರವುಗೊಳಿಸಿದ ನಂತರ ಮೊದಲ ಬಾರಿಗೆ ಹೋಟೆಲ್‌ಗೆ ತೆರಳಿದ ಮುಖ್ಯಮಂತ್ರಿ ಸಖತ್ತಾಗಿ ಬೆಳಗಿನ ಉಪಹಾರ ಸವಿದ್ರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರ ಗೌಡ ಪಾಟೀಲ್ ಮುನೇನಕೊಪ್ಪ ಮುಖ್ಯಮಂತ್ರಿಗೆ ಸಾಥ್ ಕೊಟ್ರು. ಎಂದಿನಂತೆ ಎಂಟಿಆರ್ ಹೋಟೆಲ್ ಸಿಬ್ಬಂದಿ ದಿಢೀರನೆ ಬಂದ ವಿಶೇಷ ಅತಿಥಿಗೆ ಸತ್ಕಾರ ಮಾಡಿ ಧನ್ಯತಾ ಭಾವ ಮೆರೆದರು!
Published On - 1:06 pm, Sat, 13 June 20