ರಾಜ್ಯದ ಆರ್ಥಿಕ ಸ್ಥಿತಿ ಸರಿಯಾಗಿಲ್ಲ: CM ಯಡಿಯೂರಪ್ಪ

ಬಾಗಲಕೋಟೆ: ಕರ್ನಾಟಕದ ಆರ್ಥಿಕ ಸ್ಥಿತಿ ಸರಿಯಾಗಿಲ್ಲ, ಹದಗೆಟ್ಟು ಹೋಗಿದೆಯಂತೆ. ಈ ಮಾತನ್ನು ಬೇರೆ ಯಾರೂ ಹೇಳ್ತಿಲ್ಲ ಬದಲು ಸ್ವತಃ ರಾಜ್ಯದ ಮುಖ್ಯಮಂತ್ರಿಯೇ ಹೇಳಿದ್ದಾರೆ. ಹೌದು ವಿಜಯಪುರ ಜಿಲ್ಲೆಯ ಆಲಮಟ್ಟಿಯ ಜಲಾಶಯಕ್ಕೆ ಬಾಗಿನ ಅರ್ಪಿಸಲು ಉತ್ತರ ಕರ್ನಾಟಕಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಸದ್ಯ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಒಂದೆಡೆ ಕೊರೊನಾ ಇದೆ, ಮತ್ತೊಂದೆಡೆ ಪ್ರವಾಹವಿದೆ. ಹೀಗಾಗಿ ರಾಜ್ಯ ಸಂಕಷ್ಟದಲ್ಲಿದೆ. ಆದ್ರೂ ಪರವಾಗಿಲ್ಲ, ಸಾಲ ಮಾಡಿಯಾದರೂ ನಮ್ಮ ಸರ್ಕಾರ ಪ್ರವಾಹದ ಹಾನಿ ಭರಿಸುತ್ತದೆ. […]

ರಾಜ್ಯದ ಆರ್ಥಿಕ ಸ್ಥಿತಿ ಸರಿಯಾಗಿಲ್ಲ: CM ಯಡಿಯೂರಪ್ಪ
ಬಿ.ಎಸ್​.ಯಡಿಯೂರಪ್ಪ (ಸಂಗ್ರಹ ಚಿತ್ರ)
Edited By:

Updated on: Aug 25, 2020 | 4:48 PM

ಬಾಗಲಕೋಟೆ: ಕರ್ನಾಟಕದ ಆರ್ಥಿಕ ಸ್ಥಿತಿ ಸರಿಯಾಗಿಲ್ಲ, ಹದಗೆಟ್ಟು ಹೋಗಿದೆಯಂತೆ. ಈ ಮಾತನ್ನು ಬೇರೆ ಯಾರೂ ಹೇಳ್ತಿಲ್ಲ ಬದಲು ಸ್ವತಃ ರಾಜ್ಯದ ಮುಖ್ಯಮಂತ್ರಿಯೇ ಹೇಳಿದ್ದಾರೆ.

ಹೌದು ವಿಜಯಪುರ ಜಿಲ್ಲೆಯ ಆಲಮಟ್ಟಿಯ ಜಲಾಶಯಕ್ಕೆ ಬಾಗಿನ ಅರ್ಪಿಸಲು ಉತ್ತರ ಕರ್ನಾಟಕಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಸದ್ಯ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಒಂದೆಡೆ ಕೊರೊನಾ ಇದೆ, ಮತ್ತೊಂದೆಡೆ ಪ್ರವಾಹವಿದೆ. ಹೀಗಾಗಿ ರಾಜ್ಯ ಸಂಕಷ್ಟದಲ್ಲಿದೆ. ಆದ್ರೂ ಪರವಾಗಿಲ್ಲ, ಸಾಲ ಮಾಡಿಯಾದರೂ ನಮ್ಮ ಸರ್ಕಾರ ಪ್ರವಾಹದ ಹಾನಿ ಭರಿಸುತ್ತದೆ. ಜೊತೆಗೆ ಕೊರೊನಾವನ್ನು ಕೂಡಾ ನಿಯಂತ್ರಣ ಮಾಡುತ್ತೇವೆ ಎಂದು ಆಲಮಟ್ಟಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನತೆಗೆ ಭರವಸೆ ನೀಡಿದ್ದಾರೆ.