ಗಣೇಶ ಮೂರ್ತಿ ವಿಸರ್ಜನೆ ವೇಳೆ ಇಬ್ಬರು ಬಾಲಕರು ನೀರುಪಾಲು
ಗಣೇಶ ಮೂರ್ತಿ ವಿಸರ್ಜನೆ ಮಾಡಲು ಹೋದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ತಮಿಳುನಾಡಿನ ಸೂಳಗಿರಿ ಸಮೀಪದ ಅನಾಸಂದ್ರಂ ಕೆರೆಯಲ್ಲಿ ನೆಡೆದಿದೆ. ಸೂಳಗಿರಿ ವಾಸಿಗಳಾದ ಭೂಪತಿ(12) ಮತ್ತು ಮುರಳಿ(12) ಮೃತ ಬಾಲಕರಾಗಿದ್ದಾರೆ. ಗಣೇಶ ಚತುರ್ಥಿ ಅಂಗವಾಗಿ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದ ಬಾಲಕರು, ಮೂರು ದಿನದ ಬಳಿಕ ಇಂದು ಸ್ನೇಹಿತರೊಂದಿಗೆ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಲು ಹೋಗಿದ್ದರು. ಈ ವೇಳೆ ನೀರಿನ ಆಳ ಅರಿಯದೇ ಗಣೇಶ ವಿಸರ್ಜನೆಗೆ ಇಳಿದಿದ್ದ ಬಾಲಕರು, ನೋಡ ನೋಡುತ್ತಿದ್ದಂತೆ ಗಣೇಶ ಮೂರ್ತಿ ಜೊತೆ ಇಬ್ಬರು […]

ಗಣೇಶ ಮೂರ್ತಿ ವಿಸರ್ಜನೆ ಮಾಡಲು ಹೋದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ತಮಿಳುನಾಡಿನ ಸೂಳಗಿರಿ ಸಮೀಪದ ಅನಾಸಂದ್ರಂ ಕೆರೆಯಲ್ಲಿ ನೆಡೆದಿದೆ.
ಸೂಳಗಿರಿ ವಾಸಿಗಳಾದ ಭೂಪತಿ(12) ಮತ್ತು ಮುರಳಿ(12) ಮೃತ ಬಾಲಕರಾಗಿದ್ದಾರೆ. ಗಣೇಶ ಚತುರ್ಥಿ ಅಂಗವಾಗಿ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದ ಬಾಲಕರು, ಮೂರು ದಿನದ ಬಳಿಕ ಇಂದು ಸ್ನೇಹಿತರೊಂದಿಗೆ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಲು ಹೋಗಿದ್ದರು.
ಈ ವೇಳೆ ನೀರಿನ ಆಳ ಅರಿಯದೇ ಗಣೇಶ ವಿಸರ್ಜನೆಗೆ ಇಳಿದಿದ್ದ ಬಾಲಕರು, ನೋಡ ನೋಡುತ್ತಿದ್ದಂತೆ ಗಣೇಶ ಮೂರ್ತಿ ಜೊತೆ ಇಬ್ಬರು ನೀರುಪಾಲಾಗಿದ್ದಾರೆ. ಸದ್ಯ ಸೂಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸ್ಥಳಕ್ಕಾಗಮಿಸಿದ ಸೂಳಗಿರಿ ಪೊಲೀಸರು, ಸ್ಥಳೀಯರ ನೆರವಿನಿಂದ ಮೃತ ದೇಹಗಳನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.
Published On - 4:55 pm, Tue, 25 August 20




