ಕೊರೊನಾ ಕಾಲದಲ್ಲಿ Cashಗೆ ಇತ್ತು ಸಿಕ್ಕಾಪಟ್ಟೆ ಡಿಮ್ಯಾಂಡ್, ಯಾಕೆ?
ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಫೆಬ್ರವರಿ 28ರಿಂದ (22.55 ಲಕ್ಷ ಕೋಟಿ ರೂ.) ಜುಲೈ 17ರವರೆಗಿನ ಕಾಲಾವಧಿಯಲ್ಲಿ ಸಾರ್ವಜನಿಕರು ಕ್ರೋಢೀಕರಿಸಿಕೊಂಡಿದ್ದ ನಗದಿನಿ ಪ್ರಮಾಣವು 3,24,500 ಕೋಟಿ ರೂ.ಗಳಷ್ಟು ಏರಿಕೆಯಾಗಿತ್ತು. ಹೀಗಾಗಿ, ಜುಲೈ 17ರ ವೇಳೆಗೆ ಸಾರ್ವಜನಿಕರ ಬಳಿಯಿದ್ದ ನಗದಿನ ಪ್ರಮಾಣ 25.8 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು ಎಂದು RBI ತಿಳಿಸಿದೆ. ಆದರೆ, ಜುಲೈ 17ರಿಂದ ಜುಲೈ 31 ರವರೆಗೆ, ಅಂದರೆ ಕೇವಲ 15 ದಿನಗಳಲ್ಲಿ ಈ ಮೊತ್ತವು […]
ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಫೆಬ್ರವರಿ 28ರಿಂದ (22.55 ಲಕ್ಷ ಕೋಟಿ ರೂ.) ಜುಲೈ 17ರವರೆಗಿನ ಕಾಲಾವಧಿಯಲ್ಲಿ ಸಾರ್ವಜನಿಕರು ಕ್ರೋಢೀಕರಿಸಿಕೊಂಡಿದ್ದ ನಗದಿನಿ ಪ್ರಮಾಣವು 3,24,500 ಕೋಟಿ ರೂ.ಗಳಷ್ಟು ಏರಿಕೆಯಾಗಿತ್ತು. ಹೀಗಾಗಿ, ಜುಲೈ 17ರ ವೇಳೆಗೆ ಸಾರ್ವಜನಿಕರ ಬಳಿಯಿದ್ದ ನಗದಿನ ಪ್ರಮಾಣ 25.8 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು ಎಂದು RBI ತಿಳಿಸಿದೆ.
ಆದರೆ, ಜುಲೈ 17ರಿಂದ ಜುಲೈ 31 ರವರೆಗೆ, ಅಂದರೆ ಕೇವಲ 15 ದಿನಗಳಲ್ಲಿ ಈ ಮೊತ್ತವು 3,982 ಕೋಟಿ ರೂಪಾಯಿಗಳಷ್ಟು ಇಳಿಕೆ ಕಂಡಿದ್ದು ಇದೀಗ ಸಾರ್ವಜನಿಕರು ಕ್ರೋಢೀಕರಿಸಿಕೊಂಡಿರುವ ನಗದಿನ ಮೊತ್ತವು 25.76 ಲಕ್ಷ ಕೋಟಿಗೆ ಇಳಿದಿದೆ.
ಕೇಂದ್ರವು ಲಾಕ್ಡೌನ್ ನಿರ್ಬಂಧನೆಗಳನ್ನು ಸಡಿಲಗೊಳಿಸಿದ ಪರಿಣಾಮದಿಂದಾಗಿ ಜೂನ್ ಮತ್ತು ಜುಲೈನಲ್ಲಿ ನಗದು ಕ್ರೋಢೀಕರಣದ ವೇಗವೂ ಕೊಂಚ ತಗ್ಗಿತು ಎಂಬುದು ತಿಳಿದುಬಂದಿದೆ. ಜೊತೆಗೆ, ಲಾಕ್ಡೌನ್ನ ಆರಂಭಿಕ ಹಂತದಲ್ಲಿ, E-ಕಾಮರ್ಸ್ ವಹಿವಾಟಿಗೆ ಕೇಂದ್ರ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಜನರು ನೆರೆಹೊರೆಯ ಮಳಿಗೆಗಳನ್ನು ಅವಲಂಬಿಸಬೇಕಾಗಿತ್ತು. ಇದರ ಪರಿಣಾಮವಾಗಿ ನಗದಿನ ಬಳಕೆ ಸಾರ್ವಜನಿಕ ವಲಯದಲ್ಲಿ ಹೆಚ್ಚಾಯ್ತು. ಆದ್ದರಿಂದ, ಜನರು ಹೆಚ್ಚಿನ ಪ್ರಮಾಣದಲ್ಲಿ ATM ಮತ್ತು ಬ್ಯಾಂಕ್ಗಳಿಂದ ಹಣ ಹಿಂಪಡೆದರು.
ಇದಲ್ಲದೆ, ಜನರು ತಮ್ಮ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಒಂದೇ ಬಾರಿಯಲ್ಲಿ ದೊಡ್ಡ ಮೊತ್ತವನ್ನು ಬ್ಯಾಂಕ್ನಿಂದ ಹಿಂಪಡೆಕೊಂಡರು. ಹಾಗಾಗಿ, ಜನರು ನೋಟು ಮತ್ತು ನಾಣ್ಯಗಳನ್ನು ಹೆಚ್ಚಾಗಿ ಬಳಸಲು ಇದು ಕಾರಣವಾಯಿತು. ಈಗ E-ಕಾಮರ್ಸ್ ವಹಿವಾಟು ವೇಗ ಪಡೆಯುತ್ತಿರುವುದರಿಂದ, ನಗದು ಮೇಲಿನ ಅವಲಂಬನೆ ಕಡಿಮೆಯಾಗಿದೆ.
Published On - 3:15 pm, Tue, 25 August 20