ಬೃಹತ್ ಭ್ರಷ್ಟಾಚಾರ: ಇಬ್ಬರು IPS ಅಧಿಕಾರಿಗಳ ತಲೆದಂಡ, ಎಲ್ಲಿ?
ಲಕ್ನೋ: ಬೃಹತ್ ಭ್ರಷ್ಟಾಚಾರ ನಡೆಸಿರೋ ಆರೋಪದಲ್ಲಿ ಉತ್ತರ ಪ್ರದೇಶ ಸರ್ಕಾರವು ಇಬ್ಬರು IPS ಅಧಿಕಾರಿಗಳನ್ನು ಅಮಾನತು ಮಾಡಿದೆ. DIG ದಿನೇಶ್ ಚಂದ್ರ ದುಬೇ ಮತ್ತು DIG ಅರವಿಂದ್ ಸೇನ್ ಅಮಾನತುಗೊಂಡಿರುವ IPS ಅಧಿಕಾರಿಗಳು. ಉತ್ತರ ಪ್ರದೇಶ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡವು ನೀಡಿರುವ ವರದಿಯ ಬೆನ್ನಲ್ಲೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ DIG ದಿನೇಶ್ ಚಂದ್ರ ದುಬೇ ತಮ್ಮ ಪ್ರಭಾವ ಬಳಸಿ ಸರ್ಕಾರಿ ಇಲಾಖೆಗಳಲ್ಲಿ ಕಾಮಗಾರಿಯ ಟೆಂಡರ್ಗಳನ್ನು ಕೊಡಿಸುವ ಆಶ್ವಾಸನೆ […]
ಲಕ್ನೋ: ಬೃಹತ್ ಭ್ರಷ್ಟಾಚಾರ ನಡೆಸಿರೋ ಆರೋಪದಲ್ಲಿ ಉತ್ತರ ಪ್ರದೇಶ ಸರ್ಕಾರವು ಇಬ್ಬರು IPS ಅಧಿಕಾರಿಗಳನ್ನು ಅಮಾನತು ಮಾಡಿದೆ. DIG ದಿನೇಶ್ ಚಂದ್ರ ದುಬೇ ಮತ್ತು DIG ಅರವಿಂದ್ ಸೇನ್ ಅಮಾನತುಗೊಂಡಿರುವ IPS ಅಧಿಕಾರಿಗಳು. ಉತ್ತರ ಪ್ರದೇಶ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡವು ನೀಡಿರುವ ವರದಿಯ ಬೆನ್ನಲ್ಲೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ DIG ದಿನೇಶ್ ಚಂದ್ರ ದುಬೇ ತಮ್ಮ ಪ್ರಭಾವ ಬಳಸಿ ಸರ್ಕಾರಿ ಇಲಾಖೆಗಳಲ್ಲಿ ಕಾಮಗಾರಿಯ ಟೆಂಡರ್ಗಳನ್ನು ಕೊಡಿಸುವ ಆಶ್ವಾಸನೆ ನೀಡಿದ್ದರಂತೆ. ಆದರೆ, ಇವರು ಹಣ ಪಡೆದ ಯಾವುದೇ ವ್ಯಕ್ತಿಗೂ ಗುತ್ತಿಗೆ ಸಿಗಲೇ ಇಲ್ಲ ಎಂಬ ಆರೋಪ ಕೇಳಿಬಂದಿದೆ.
ಇತ್ತ DIG ಅರವಿಂದ್ ಸೇನ್ ರಾಜ್ಯ ಸರ್ಕಾರದ ಪಶು ಸಂಗೋಪನೆ ಇಲಾಖೆಯಲ್ಲಿ ತಮ್ಮ ಪ್ರಭಾವ ಬಳಸಿ ಉದ್ಯಮಿಯೊಬ್ಬರಿಗೆ ಟೆಂಡರ್ ಕೊಡಿಸುವುದಾಗಿ ಮೋಸ ಮಾಡಿದ್ದ ತಂಡವೊಂದರ ಜೊತೆ ಶಾಮೀಲಾಗಿದ್ದರಂತೆ.
ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿ ತನಿಖೆ ನಡೆಸಲಾಗಿತ್ತು. ಇದೀಗ, ತನಿಖಾ ವರದಿ ಹೊರಬಿದ್ದಿದ್ದು ಅಧಿಕಾರಿಗಳಿಬ್ಬರೂ ಭ್ರಷ್ಟಾಚಾರ ಮತ್ತು ದುರ್ನಡತೆಯ ಆರೋಪದಡಿ ಸಸ್ಪೆಂಡ್ ಆಗಿದ್ದಾರೆ.
Published On - 4:59 pm, Tue, 25 August 20