ನಮ್ಮ ರಾಜ್ಯದಲ್ಲಿ ಜನಪ್ರತಿನಿಧಿಗಳು ಸಹ ಸುರಕ್ಷಿತರಾಗಿಲ್ಲ, ಅವರಿಗೂ ಬೆದರಿಕೆ ಪತ್ರಗಳು!: ಬಸನಗೌಡ ಯತ್ನಾಳ್
ಗುರುವಾರದಂದು ಬಿಜೆಪಿ ರಾಜ್ಯಾಧ್ಯಕ್ಷ ಬೆಂಗಳೂರಲ್ಲಿ ಸಭೆ ನಡೆಸಿದ್ದು ತನಗೆ ಭಾರೀ ಹಿನ್ನಡೆ ಅಂತ ಪತ್ರಿಕೆಯೊಂದರಲ್ಲಿ ವರದಿಯಾಗಿರುವುದನ್ನು ನೋಡಿದೆ, ಅವರು ಸಭೆ ನಡೆಸಿದರೆ ತನಗ್ಯಾಕೆ ಹಿನ್ನೆಡೆಯಾಗಬೇಕು, ಯಾರೇ ಸಭೆ ನಡೆಸಿದರೂ ತನಗೆ ಹಿನ್ನಡೆಯಾಗುವ ಪ್ರಶ್ನೆ ಉದ್ಭವಿಸಲ್ಲ, ಮಾಧ್ಯಮಗಳಿಗೆ ಸುದ್ದಿ ಬೇಕು, ಎರಡು ದಿನ ಅದೇ ವಿಷಯದ ಬಗ್ಗೆ ವರದಿಗಾರಿಕೆ ನಡೆಯುತ್ತದೆ ಎಂದು ಯತ್ನಾಳ್ ಹೇಳಿದರು.
ವಿಜಯಪುರ: ಒಬ್ಬ ಜನಪ್ರತಿನಿಧಿಗೆ ಭದ್ರತೆ ಇಲ್ಲದಿರುವ ಕರ್ನಾಟದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬಹುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಟಿ ರವಿಗೆ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಹೇಳಿದರು. ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್ ಮಾಡಿದ್ದನ್ನು ಗೃಹ ಸಚಿವ ಜಿ ಪರಮೇಶ್ವರ್ ಸಮರ್ಥಿಸಿಕೊಳ್ಳುತ್ತಾರೆ, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬರುತ್ತಿದ್ದವರನ್ನು ಮತ್ತೇನು ಮುತ್ತು ಕೊಡಲಾದೀತೆ ಎಂದು ಸಚಿವ ಹೇಳುತ್ತಾರೆ, ಅವರು ಹಿಂದೂಗಳಿಗೆ ಮುತ್ತಿಡುವುದು ಬೇಡ, ಸಾಬರಿಗೆ ಮಾತ್ರ ಮುತ್ತಿಡಲಿ ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರವಿ ಮೇಲೆ ಹಲ್ಲೆ ನಡೆದಾಗ ಬೆಳಗಾವಿ ಪೊಲೀಸ್ ಕಮೀಶನರ್ ಯಾರೊಂದಿಗೆ ಫೋನಲ್ಲಿ ಮಾತಾಡುತ್ತಿದ್ದರೆನ್ನುವುದು ಗೊತ್ತಾಗಬೇಕು: ಯತ್ನಾಳ್
Latest Videos