ಡಿಕೆ ಶಿವಕುಮಾರ್ ತನ್ನ ಶತ್ರುಗಳು ಯಾರೆನ್ನುವುದನ್ನು ಮೊದಲು ತಿಳಿಸಬೇಕು: ಪ್ರಲ್ಹಾದ್ ಜೋಶಿ
ಡಿಕೆ ಶಿವಕುಮಾರ್ ಅವರು ಶತ್ರು ಸಂಹಾರಯಾಗ ಮಾಡುತ್ತಿರುವುದನ್ನು ಅಂಗೀಕರಿಸಿದ್ದಾರೆ, ಅವರು ನೀಡಿರುವ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದ ಪ್ರಲ್ಹಾದ್ ಜೋಶಿಯವರು, ಶಿವಕುಮಾರ್ ಯಾರನ್ನು ಶತ್ರುಗಳೆಂದು ಪರಿಗಣಿಸುತ್ತಾರೆ ಅನ್ನೋದನ್ನು ಮೊದಲು ಹೇಳಬೇಕು, ವಿರೋಧ ಪಕ್ಷ ಅವರ ಶತ್ರುನೋ, ಸಿದ್ದರಾಮಯ್ಯನೋ ಅಥವಾ ಪರಮೇಶ್ವರ್ ಅವರರೋ ಅಂತ ತಿಳಿಸಬೇಕು ಅಂದರು.
ಹುಬ್ಬಳ್ಳಿ: ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ತಾನಾಗಲೀ, ತನ್ನ ಪಕ್ಷವಾಗಲೀ ಅಥವಾ ಪ್ರಧಾನ ಮಂತ್ರಿಯವರೇ ಆಗಲಿ, ರಾಜಕೀಯದಲ್ಲಿ ಯಾರನ್ನೂ ಶತ್ರುಗಳೆಂದು ಭಾವಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ರಾಜಕೀಯ ಬದುಕಿನಲ್ಲಿ ತನಗೆ ಮಾಜಿ ಪ್ರಧಾನ ಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಒಡನಾಟದ ಸುಯೋಗ ಸಿಕ್ಕಿತ್ತು, ಅವರು ಯಾವತ್ತೂ ತಮ್ಮ ಎದುರಾಳಿಗಳನ್ನು ಶತ್ರುಗಳೆಂದು ಪರಿಗಣಿಸುತ್ತಿರಲಿಲ್ಲ, ಅದನ್ನೇ ತಾವು ಅವರಿಂದ ಕಲಿತಿದ್ದು, ಪ್ರಜಾಪ್ರಭುತ್ವ ಇರುವ ಭಾರತ ಮತ್ತು ಇಂಗ್ಲೆಂಡ್ನಂಥ ದೇಶಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳಿರುತ್ತವೆ, ಪ್ರತಿ ಅಂದರೆ ಶತ್ರುವಲ್ಲ ಎಂದು ಜೋಶಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಟಿ ರವಿಯನ್ನ ಫೇಕ್ ಎನ್ಕೌಂಟರ್ ಮಾಡುವ ವಿಚಾರ ಪೊಲೀಸರಿಗಿತ್ತು ಅನಿಸುತ್ತೆ: ಪ್ರಲ್ಹಾದ್ ಜೋಶಿ ಆರೋಪ
Latest Videos