AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BJP ಸೇರಿದ ಕರ್ನಾಟಕ ಸಿಂಗಂ ಅಣ್ಣಾಮಲೈಗೆ ಇದೇ ಟೈಮಿಂಗ್​ ಯಾಕೆ? ಇನ್​ಸೈಡ್​ ಸ್ಟೋರಿ

[lazy-load-videos-and-sticky-control id=”3YAsfNLxkrk”] ಬೆಂಗಳೂರು: ಕರ್ನಾಟಕ ಸಿಂಗಂ ಎಂದೇ ಖ್ಯಾತಿ ಪಡೆದಿರುವ  ಮಾಜಿ​ IPS ಅಧಿಕಾರಿ ಕೆ. ಅಣ್ಣಾಮಲೈBJP ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದೆಹಲಿಯಲ್ಲಿರುವ BJP ಪ್ರಧಾನ ಕಚೇರಿಯಲ್ಲಿ ಹಿರಿಯ ನಾಯಕರ ಸಮಕ್ಷಮದಲ್ಲಿ ಪಕ್ಷ ಸೇರಿದ ಅಣ್ಣಾಮಲೈ ರಾಜಕೀಯ ನಡೆ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಸೇರ್ಪಡೆ ಬಳಿಕ ಮಾತನಾಡಿದ ಅಣ್ಣಾಮಲೈ ಪ್ರಧಾನಿ ಮೋದಿ ಕಾರ್ಯಕ್ಕೆ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ನಿಷ್ಠೆಯಿಂದ ಯೋಧನಾಗಿ ಬಿಜೆಪಿಗೆ ದುಡಿಯುತ್ತೇನೆ. ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ಬೇಕು. ಹೀಗಾಗಿ, ಸಮಾಜಸೇವೆ ಮಾಡುವುದಕ್ಕೆ ಬಿಜೆಪಿಗೆ ಸೇರಿದ್ದೇನೆ. […]

BJP ಸೇರಿದ ಕರ್ನಾಟಕ ಸಿಂಗಂ ಅಣ್ಣಾಮಲೈಗೆ ಇದೇ ಟೈಮಿಂಗ್​ ಯಾಕೆ? ಇನ್​ಸೈಡ್​ ಸ್ಟೋರಿ
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Aug 25, 2020 | 4:06 PM

[lazy-load-videos-and-sticky-control id=”3YAsfNLxkrk”]

ಬೆಂಗಳೂರು: ಕರ್ನಾಟಕ ಸಿಂಗಂ ಎಂದೇ ಖ್ಯಾತಿ ಪಡೆದಿರುವ  ಮಾಜಿ​ IPS ಅಧಿಕಾರಿ ಕೆ. ಅಣ್ಣಾಮಲೈBJP ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದೆಹಲಿಯಲ್ಲಿರುವ BJP ಪ್ರಧಾನ ಕಚೇರಿಯಲ್ಲಿ ಹಿರಿಯ ನಾಯಕರ ಸಮಕ್ಷಮದಲ್ಲಿ ಪಕ್ಷ ಸೇರಿದ ಅಣ್ಣಾಮಲೈ ರಾಜಕೀಯ ನಡೆ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಸೇರ್ಪಡೆ ಬಳಿಕ ಮಾತನಾಡಿದ ಅಣ್ಣಾಮಲೈ ಪ್ರಧಾನಿ ಮೋದಿ ಕಾರ್ಯಕ್ಕೆ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ನಿಷ್ಠೆಯಿಂದ ಯೋಧನಾಗಿ ಬಿಜೆಪಿಗೆ ದುಡಿಯುತ್ತೇನೆ. ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ಬೇಕು. ಹೀಗಾಗಿ, ಸಮಾಜಸೇವೆ ಮಾಡುವುದಕ್ಕೆ ಬಿಜೆಪಿಗೆ ಸೇರಿದ್ದೇನೆ. ಪೊಲೀಸ್ ಕರ್ತವ್ಯದಲ್ಲಿದ್ದಾಗ ಪೊಲೀಸ್ ಧರ್ಮ ನನ್ನದಾಗಿತ್ತು. ಎಲ್ಲಾ ಧರ್ಮದವರೂ ನನಗೆ ಸ್ನೇಹಿತರಾಗಿದ್ದಾರೆ. ಜೊತೆಗೆ, ಬಿಜೆಪಿ ಸೇರಿದ ಮೇಲೆ ಬಿಜೆಪಿ ಸಿದ್ಧಾಂತಕ್ಕೆ ಬದ್ಧ ಎಂದು ಅಣ್ಣಾಮಲೈ ಹೇಳಿದ್ದಾರೆ.

ತಮ್ಮ ರಾಜೀನಾಮೆಯ ಬಳಿಕ ತಮಿಳುನಾಡು ಮೂಲದ ಅಣ್ಣಾಮಲೈ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಈ ನಡುವೆ ಅಣ್ಣಾಮಲೈರ ರಾಜಕೀಯ ಹೇಳಿಕೆಗಳ ಕಂಡು ಜನರು ಅವರು ತಮಿಳು ಸೂಪರ್​ಸ್ಟಾರ್ ರಜನೀಕಾಂತ್​ರ ರಾಜಕೀಯ ಚಳವಳಿ ಸೇರಲಿದ್ದಾರೆ ಎಂದು ಭಾವಿಸಿದ್ದರು. ಆದರೆ, ಸಿಂಗಂ ನಡೆ ಬೇರೆನೇ ಆಗಿದೆ.

ತಮಿಳುನಾಡು ವಿಧಾನಸಭಾ ಚುನಾವಣೆ ಮೇಲೆ ಕಣ್ಣು ಅಣ್ಣಾಮಲೈರ ಈ ನಡೆ BJPಗೆ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯ ವೇಳೆ ಸಾಕಷ್ಟು ಲಾಭ ತಂದುಕೊಡಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡಿನಲ್ಲಿ ಕಳೆದ ಕೆಲವು ದಶಕಗಳಿಂದ ಪ್ರಾದೇಶಿಕ ಪಕ್ಷಗಳೇ ಗಟ್ಟಿಯಾಗಿ ಬೇರೂರಿದ್ದು ರಾಷ್ಟ್ರೀಯ ಪಕ್ಷಗಳಿಗೆ ಅಷ್ಟು ಯಶಸ್ಸು ದೊರಕಿಲ್ಲ.

ಹಾಗಾಗಿ, ತಮ್ಮ ಕರ್ತವ್ಯನಿಷ್ಠೆ ಮತ್ತು ಜನಪ್ರಿಯತೆಯಿಂದ ಮನೆಮಾತಾಗಿರೋ ಅಣ್ಣಾಮಲೈರನ್ನು ಬಳಸಿಕೊಂಡು ದಕ್ಷಿಣ ಭಾರತದಲ್ಲಿ ಮತ್ತಷ್ಟು ಬೇರೂರುವ ಯೋಚನೆಯಲ್ಲಿ ಕೇಸರಿ ಪಕ್ಷದ ನಡೆ ಮುಂದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡು ಅಸೆಂಬ್ಲಿ ಚುನಾವಣೆ 2021ರ ಮೇ ತಿಂಗಳಲ್ಲಿ ನಡೆಯಬೇಕಿದೆ. 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

Published On - 1:30 pm, Tue, 25 August 20

ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ