ರಜತ್ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
Bigg Boss Kannada: ಕಳೆದ ವಾರ ಉಸ್ತುವಾರಿ ಆಗಿದ್ದ ರಜತ್ ವಿಪರೀತ ಫೇವರಿಸಮ್ ಮಾಡಿದ್ದರು. ಭವ್ಯಾ ಅನ್ನು ಗೆಲ್ಲಿಸಲು ಹಲವು ಪ್ರಯತ್ನ ಮಾಡಿದ್ದರು. ಆದರೆ ಇದೀಗ ಶನಿವಾರ ಬಂದಿದ್ದು ಸುದೀಪ್, ರಜತ್ ಅನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಭವ್ಯಾ ಸಹ ಮತ್ತೊಮ್ಮೆ ತಮ್ಮ ಹಳೆ ಛಾಳಿ ಮುಂದುವರೆಸಿದ್ದಾರೆ.
ಕಳೆದ ವಾರ ಉಸ್ತುವಾರಿಯಾಗಿದ್ದ ರಜತ್ ಈ ವೇಳೆ ಸಾಕಷ್ಟು ತಪ್ಪುಗಳನ್ನು ಮಾಡಿದ್ದರು. ಭವ್ಯಾ ಮತ್ತು ತಮಗೆ ಬೇಕಾದವರಿಗೆ ಅನುಕೂಲಕರವಾದ ಆಟಗಳನ್ನು ಆಡಿದರು. ಇದನ್ನು ಇತರೆ ಸ್ಪರ್ಧಿಗಳು ಕಂಡಿಸಿದರಾದರೂ ಅವರ ಮಾತಿಗೆ ರಜತ್ ಮೌಲ್ಯ ಕೊಡಲಿಲ್ಲ. ಇದು ಉಗ್ರಂ ಮಂಜು, ಗೌತಮಿ ಇನ್ನಿತರರಿಗೆ ತೀವ್ರ ಬೇಸರ ಮೂಡಿಸಿತ್ತು. ಇದೀಗ ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಮುಂದೆ ರಜತ್ ಒಳ್ಳೆಯವನಾಗುವ ಪ್ರಯತ್ನ ಮಾಡಿದರು. ಆದರೆ ಸುದೀಪ್ ಅದಕ್ಕೆ ಅವಕಾಶ ಕೊಡಲಿಲ್ಲ. ಅಲ್ಲದೆ ಭವ್ಯಾ, ಈ ಬಾರಿಯೂ ಸಹ ತಾವು ತಪ್ಪು ಮಾಡಿಲ್ಲವೆಂದು ಸಾಧಿಸಲು ಹೋಗಿ ಸುದೀಪ್ ಕೈಯಲ್ಲಿ ಬೈಸಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos