BIEC ಕೇಂದ್ರಕ್ಕೆ ‘ಗುಣಲಕ್ಷಣವಿಲ್ಲದ ಸೋಂಕಿತರನ್ನು’ ಇಂದೇ ಶಿಫ್ಟ್​ ​​ಮಾಡಿ -ಸಿಎಂ BSY ಸೂಚನೆ

| Updated By:

Updated on: Jul 26, 2020 | 12:47 AM

ಬೆಂಗಳೂರು: ಸಾಲು ಸಾಲು ಸಭೆ ನಡೆಸಿದರು. ಹಲವು ನಿರ್ದೇಶನಗಳನ್ನ ನೀಡಿದರು. ಏನೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕ್ರೂರಿಯ ನಾಗಲೋಟ ನಿಲ್ತಿಲ್ಲ. ಸಾವಿನ ಸುನಾಮಿ ಕಿಂಚಿಂತ್ತೂ ಕಂಟ್ರೋಲ್​ಗೆ ಸಿಗ್ತಿಲ್ಲ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡೋದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ನುಂಗಲಾರದ ಬಿಸಿತುಪ್ಪವಾಗಿ ಕಾಡ್ತಿದೆ. ಆದ್ರೂ ರಾಜ್ಯದ ಜನರ ಜೀವ ಉಳಿಸೋದು ಸರ್ಕಾರದ ಕರ್ತವ್ಯವಾಗಿದ್ದು, ಇಂದಿನಿಂದ 10 ಸಾವಿರ ಬೆಡ್​ಗಳ ಕೊವಿಡ್ ಕೇರ್ ಸೆಂಟರ್​ನ ಆರಂಭಿಸೋಕೆ ಮುಂದಾಗಿದೆ. ಇಂದೇ ಸೋಂಕಿತರನ್ನ ಶಿಫ್ಟ್ ಮಾಡಲು ಸಿಎಂ ಸೂಚನೆ ರಾಜ್ಯದಲ್ಲಿ ಕೊರೊನಾ ಅಟ್ಟಹಾಸ […]

BIEC ಕೇಂದ್ರಕ್ಕೆ ‘ಗುಣಲಕ್ಷಣವಿಲ್ಲದ ಸೋಂಕಿತರನ್ನು’ ಇಂದೇ ಶಿಫ್ಟ್​ ​​ಮಾಡಿ -ಸಿಎಂ BSY ಸೂಚನೆ
Follow us on

ಬೆಂಗಳೂರು: ಸಾಲು ಸಾಲು ಸಭೆ ನಡೆಸಿದರು. ಹಲವು ನಿರ್ದೇಶನಗಳನ್ನ ನೀಡಿದರು. ಏನೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕ್ರೂರಿಯ ನಾಗಲೋಟ ನಿಲ್ತಿಲ್ಲ. ಸಾವಿನ ಸುನಾಮಿ ಕಿಂಚಿಂತ್ತೂ ಕಂಟ್ರೋಲ್​ಗೆ ಸಿಗ್ತಿಲ್ಲ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡೋದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ನುಂಗಲಾರದ ಬಿಸಿತುಪ್ಪವಾಗಿ ಕಾಡ್ತಿದೆ. ಆದ್ರೂ ರಾಜ್ಯದ ಜನರ ಜೀವ ಉಳಿಸೋದು ಸರ್ಕಾರದ ಕರ್ತವ್ಯವಾಗಿದ್ದು, ಇಂದಿನಿಂದ 10 ಸಾವಿರ ಬೆಡ್​ಗಳ ಕೊವಿಡ್ ಕೇರ್ ಸೆಂಟರ್​ನ ಆರಂಭಿಸೋಕೆ ಮುಂದಾಗಿದೆ.

ಇಂದೇ ಸೋಂಕಿತರನ್ನ ಶಿಫ್ಟ್ ಮಾಡಲು ಸಿಎಂ ಸೂಚನೆ
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಕಮ್ಮಿಯಾಗ್ತಿಲ್ಲ. ಸೋಂಕಿತರಿಗೆ ತಾಪತ್ರಯ ತಪ್ಪುತ್ತಿಲ್ಲ. ಬೆಡ್ ಸಿಗದೆ ನಿತ್ಯ ಹಲವರು ಸಾವಿನ ಮನೆ ಸೇರ್ತಿದ್ದಾರೆ. ನಾನ್ ಕೊವಿಡ್ ಪೇಷೆಂಟ್​ಗಳು ಕೂಡ ಚಿಕಿತ್ಸೆ ಸಿಗದೆ ನರಕ ಅನುಭವಿಸ್ತಿದ್ದಾರೆ. ಹೀಗಾಗಿ, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡೋಕೆ ನಗರದ ಹೊರವಲಯದಲ್ಲಿರುವ BIEC ಕೊವಿಡ್ ಕೇರ್ ಸೆಂಟರ್​ನಲ್ಲಿ ಕೊನೇ ಹಂತದ ಸಿದ್ಧತೆ ಭರದಿಂದ ಸಾಗಿದೆ. ಇನ್ನು ತಡ ಮಾಡೋದು ಬೇಡ. ಇಂದೇ ಗುಣಲಕ್ಷಣಗಳಿಲ್ಲದ ಸೋಂಕಿತರನ್ನ ಅಲ್ಲಿಗೆ ಶಿಫ್ಟ್ ಮಾಡಿ ಅಂತಾ ಸಿಎಂ BSYಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಕೊವಿಡ್ ಕೇರ್ ಸೆಂಟರ್​ನಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನೇ ಮಾಡಿಲ್ಲ. ಹಾಗಾದ್ರೆ ಇಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಗೊತ್ತಾ?

BIEC ಕೊವಿಡ್​ ಕೇರ್​ ಸೆಂಟರ್​ನಲ್ಲಿರುವ ಸಮಸ್ಯೆಗಳೇನು?
ಸದ್ಯ BIEC ಯಲ್ಲಿರೋ ಕೊವಿಡ್ ಕೇರ್ ಸೆಂಟರ್​ನಲ್ಲಿ ಒಟ್ಟು 5 ವಿಭಾಗಗಳನ್ನು ಸಿದ್ಧಗೊಳಿಸಲಾಗಿದೆ. ಆದರೆ ಶೌಚಾಲಯಗಳಿಗೆ ನೀರಿನ ಕನೆಕ್ಷನ್ ಕೊಡಬೇಕಿದೆ. 10,100 ಬೆಡ್​ಗಳ ವ್ಯವಸ್ಥೆ ಇನ್ನೂ ಪೂರ್ತಿಯಾಗಿಲ್ಲ. ಹಾಲ್​ಗಳ ಕೆಲಸ ಮುಗಿಯಲು ಮೂರ್ನಾಲ್ಕು ದಿನ ಬೇಕಾಗುತ್ತೆ. ಹಾಗಾಗಿ, ನಾಳೆ ಸೋಂಕಿತರನ್ನ ಶಿಫ್ಟ್ ಮಾಡಿದ್ರೆ ತೊಂದರೆಯಾಗದಿರಲೆಂದು ಹಾಲ್ ನಂಬರ್ 5ನ್ನ ಮಾತ್ರ ಸಜ್ಜುಗೊಳಿಸಲಾಗಿದೆ.

ಒಟ್ನಲ್ಲಿ, ವಿಪಕ್ಷಗಳ ಟೀಕೆಗಳಿಂದ ತಪ್ಪಿಸಿಕೊಳ್ಳಲು ಹಾಗೂ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಇಂದೇ ಸೋಂಕಿತರನ್ನ BIEC ಕೊವಿಡ್ ಕೇರ್​ ಸೆಂಟರ್​ಗೆ ಶಿಫ್ಟ್ ಮಾಡೋಕೆ ನಿರ್ಧಾರ ಮಾಡಿದೆ. ಆದರೆ ಅವ್ಯವಸ್ಥೆ ನಡುವೆ ಸೋಂಕಿತರನ್ನ ಕರೆತಂದ ಮೇಲೆ ಏನೆಲ್ಲಾ ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ ಅನ್ನೋದೇ ದೊಡ್ಡ ಚಿಂತೆಯಾಗಿದೆ.

Published On - 7:29 am, Sat, 25 July 20