BIEC ಕೋವಿಡ್ ಸೆಂಟರ್​ನಲ್ಲಿ ಬೆಳಿಗ್ಗೆ ಹಾವು ಪ್ರತ್ಯಕ್ಷ, ಮಧ್ಯಾಹ್ನ ಊಟದಲ್ಲಿ ಜಿರಳೆ!

| Updated By:

Updated on: Jul 30, 2020 | 2:53 PM

ಬೆಂಗಳೂರು: ನಗರದಲ್ಲಿ ನಿರ್ಮಾಣವಾಗಿರುವ ಅಧಿಕ ಬೆಡ್ ಗಳ ವ್ಯವಸ್ಥೆ ಇರುವ BIEC ಕೋವಿಡ್ ಸೆಂಟರ್ ನಿರ್ಮಾಣದ ದಿನದಿಂದ ಹಿಡಿದು ಇಲ್ಲಿಯವರೆಗೂ ಒಂದಲ್ಲ ಒಂದು ರೀತಿಯ ತಾಪತ್ರಯಗಳು ಎದುರಾಗುತ್ತಲೇ ಇವೆ. ಬೆಂಗಳೂರಿನ ಮಾದವರ ಬಳಿಯ BIEC ಕೋವಿಡ್ ಕೇರ್ ಸೆಂಟರ್ ಅನ್ನು ಇಂದಿನಿಂದ ಚಿಕಿತ್ಸೆಗೆ ಮುಕ್ತಗೊಳಿಸಲು ಸಿದ್ಧಗೊಳಿಸಲಾಗಿತ್ತು. ಆದರೆ ಇಂದು ಸೋಂಕಿತರನ್ನು ಆಸ್ಪತ್ರೆಗೆ ರವಾನಿಸುವ ಮೊದಲೇ ಹಾವೊಂದು ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿತ್ತು. ಈಗ ಅದು ಸಾಲದೆಂಬಂತೆ ಸಿಬ್ಬಂದಿಗಳಿಗೆ ಪೂರೈಕೆ ಮಾಡುವ ಆಹಾರದಲ್ಲಿ ಜಿರಳೆ ಕಂಡುಬಂದಿದ್ದು ಎಲ್ಲರಲ್ಲೂ ಆತಂಕ ಶುರುವಾಗಿದೆ. ಜಯನಗರದ […]

BIEC ಕೋವಿಡ್ ಸೆಂಟರ್​ನಲ್ಲಿ ಬೆಳಿಗ್ಗೆ ಹಾವು ಪ್ರತ್ಯಕ್ಷ, ಮಧ್ಯಾಹ್ನ ಊಟದಲ್ಲಿ ಜಿರಳೆ!
Follow us on

ಬೆಂಗಳೂರು: ನಗರದಲ್ಲಿ ನಿರ್ಮಾಣವಾಗಿರುವ ಅಧಿಕ ಬೆಡ್ ಗಳ ವ್ಯವಸ್ಥೆ ಇರುವ BIEC ಕೋವಿಡ್ ಸೆಂಟರ್ ನಿರ್ಮಾಣದ ದಿನದಿಂದ ಹಿಡಿದು ಇಲ್ಲಿಯವರೆಗೂ ಒಂದಲ್ಲ ಒಂದು ರೀತಿಯ ತಾಪತ್ರಯಗಳು ಎದುರಾಗುತ್ತಲೇ ಇವೆ.

ಬೆಂಗಳೂರಿನ ಮಾದವರ ಬಳಿಯ BIEC ಕೋವಿಡ್ ಕೇರ್ ಸೆಂಟರ್ ಅನ್ನು ಇಂದಿನಿಂದ ಚಿಕಿತ್ಸೆಗೆ ಮುಕ್ತಗೊಳಿಸಲು ಸಿದ್ಧಗೊಳಿಸಲಾಗಿತ್ತು. ಆದರೆ ಇಂದು ಸೋಂಕಿತರನ್ನು ಆಸ್ಪತ್ರೆಗೆ ರವಾನಿಸುವ ಮೊದಲೇ ಹಾವೊಂದು ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿತ್ತು. ಈಗ ಅದು ಸಾಲದೆಂಬಂತೆ ಸಿಬ್ಬಂದಿಗಳಿಗೆ ಪೂರೈಕೆ ಮಾಡುವ ಆಹಾರದಲ್ಲಿ ಜಿರಳೆ ಕಂಡುಬಂದಿದ್ದು ಎಲ್ಲರಲ್ಲೂ ಆತಂಕ ಶುರುವಾಗಿದೆ.

ಜಯನಗರದ ವೈಟ್ ಪೆಟಲ್ ಹೋಟೆಲಿನಿಂದ ಆಹಾರವನ್ನು ತಯಾರಿಸಲಾಗಿದ್ದು, BIEC ಕೋವಿಡ್ ಸೆಂಟರ್ ನಲ್ಲಿ ಕೆಲಸ ಮಾಡುವ 500 ಸಿಬ್ಬಂದಿಗೆ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ ಆಹಾರದಲ್ಲಿ ಜಿರಳೆ ಕಂಡುಬಂದಿದ್ದರಿಂದ ಸಿಬ್ಬಂದಿಗಳು ಆಹಾರ ಸೇವಿಸಲು ಹಿಂದೇಟು ಹಾಕುತ್ತಿದ್ದಾರೆ.

Published On - 4:46 pm, Tue, 28 July 20