ಮರಳು ಸಾಗಣೆಗೆ ಬಿತ್ತು ಬ್ರೇಕ್.. ಕೇರಳಕ್ಕೆ ಹೊರಟಿದ್ದ ಮರಳು ತುಂಬಿದ ಲಾರಿಯನ್ನು ಸೀಜ್ ಮಾಡಿದ ಕಮಿಷನರ್ ಮತ್ತು ಡಿಸಿಪಿ
ಮಧ್ಯರಾತ್ರಿ ಅಕ್ರಮವಾಗಿ ಮರಳನ್ನು ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಈ ವೇಳೆ ಕಮಿಷನರ್ ಮತ್ತು ಡಿಸಿಪಿ ಅಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ಕರ್ನಾಟಕ-ಕೇರಳ ಗಡಿ ತಲಪಾಡಿ ಟೋಲ್ನಲ್ಲಿ ಲಾರಿಗೆ ತಡೆಯೊಡ್ಡಿದ್ದಾರೆ. ಇನ್ನು ಮರಳು ಲಾರಿಗೆ ಎಸ್ಕಾರ್ಟ್ ಮಾಡ್ತಿದ್ದ ಚಂದ್ರ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು: ಟಿವಿ9 ವರದಿಯಿಂದ ಅಕ್ರಮ ಮರಳು ಸಾಗಣೆಗೆ ಬ್ರೇಕ್ ಬಿದ್ದಿದೆ. ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ದ್ವಿಚಕ್ರ ವಾಹನದಲ್ಲಿ ಬಂದು ಮರಳು ಲಾರಿ ತಡೆಯುವ ಮೂಲಕ ಅಕ್ರಮ ಮರಳು ದಂಧೆಕೋರರಿಗೆ ಶಾಕ್ ಕೊಟ್ಟಿದ್ದಾರೆ. ಮಧ್ಯರಾತ್ರಿ ಅಕ್ರಮವಾಗಿ ಮರಳನ್ನು ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಈ ವೇಳೆ ಕಮಿಷನರ್ ಮತ್ತು ಡಿಸಿಪಿ ಅಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ಕರ್ನಾಟಕ-ಕೇರಳ ಗಡಿ ತಲಪಾಡಿ ಟೋಲ್ನಲ್ಲಿ ಲಾರಿಗೆ ತಡೆಯೊಡ್ಡಿದ್ದಾರೆ. ಇನ್ನು ಮರಳು ಲಾರಿಗೆ ಎಸ್ಕಾರ್ಟ್ ಮಾಡ್ತಿದ್ದ ಚಂದ್ರ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ತಲಪಾಡಿ ಟೋಲ್ಗೇಟ್ ಸಿಸಿ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿವೆ.
ಅಕ್ರಮ ಮರಳು ಸಾಗಾಟದ ಬಗ್ಗೆ ಟಿವಿ9 ನಲ್ಲಿ ವರದಿ ಪ್ರಸಾರವಾಗಿತ್ತು. ಕಳ್ಳ ಮಾರ್ಗದಲ್ಲಿ ಕೇರಳಕ್ಕೆ ಮರಳು ಸಾಗಿಸುವಾಗ ಮರಳು ತುಂಬಿದ ಲಾರಿ ಪಲ್ಟಿಯಾಗಿತ್ತು. ಈ ವರದಿ ಹಿನ್ನಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗಡಿಭಾಗದ ತಪಾಸಣೆಗೆ ದ್ವಿಚಕ್ರ ವಾಹನದಲ್ಲಿ ಆಗಮಿಸಿ ಮರಳು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮರಳು ಸಾಗಾಟ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಎರಡು ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ ಮರಳು ದಂಧೆಕೋರರ ಹಾವಳಿ ಹೆಚ್ಚಿದೆ. ನದಿ ತೀರದ ಹಲವು ಕಡೆ ಅಕ್ರಮ ಮರಳು ಸಂಗ್ರಹ ಮಾಡುವ ಕೆಲಸ ಭರ್ಜರಿಯಾಗಿ ನಡೆಯುತ್ತೆ. ಹಗಲು, ರಾತ್ರಿ ಎನ್ನದೇ ಆಳೆತ್ತೆರದ ನೀರಿನಲ್ಲಿರುವ ಮರಳನ್ನು ಲೂಟಿ ಮಾಡುತ್ತಾರೆ. ಗದಗ, ಬಾಗಲಕೋಟೆ, ರಾಯಚೂರು ಸೇರಿದಂತೆ ದುಷ್ಕರ್ಮಿಗಳು ಅಕ್ರಮವಾಗಿ ಮರಳನ್ನು ಕದ್ದು ಮಾರಾಟ ಮಾಡುತ್ತಾರೆ. ಈ ಮರಳು ದಂಧೆಯ ಹಿಂದೆ ಪ್ರಭಾವಿಗಳ ಕೈಯಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಮರಳು ದಂಧೆಗೆ ಕಡಿವಾಣ ಹಾಕಬೇಕಿದೆ.
ಇದನ್ನೂ ಓದಿ: Sand Mafia: ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ಸಾಗಾಟ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ