ಸಂಸದೆ ಸುಮಲತಾ, ಸಿಎಂ BSY ವಿರುದ್ಧ ಅಶ್ಲೀಲ ಪೋಸ್ಟ್: ಮಂಡ್ಯ ಠಾಣೆಯಲ್ಲಿ ದೂರು ದಾಖಲು

ಮಂಡ್ಯ: ಸೋಷಿಯಲ್ ಮೀಡಿಯಾದಲ್ಲಿ ಸಂಸದೆ ಸುಮಲತಾ ಹಾಗೂ ಸಿಎಂ BSY ವಿರುದ್ಧ ಅಪಪ್ರಚಾರ ಮಾಡಿರುವ ವಿಚಾರವಾಗಿ ಸಂಸದೆ ಸುಮಲತಾ ಬೆಂಬಲಿಗ ಬೇಲೂರು ಸೋಮಶೇಖರ್ ಇಂದು ಕಿಡಿಗೇಡಿಗಳ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. KRS ಜಲಾಶಯದಲ್ಲಿ ಬಾಗಿನ ಅರ್ಪಿಸುವ ವೇಳೆ ವಿಡಿಯೋ ಫೋಟೋ ಬಳಸಿ ಸಂಸದೆ ಸುಮಲತಾ ವಿರುದ್ಧ ಕಿಡಿಗೇಡಿಗಳು ಅಶ್ಲೀಲ ಪೋಸ್ಟ್ ಮಾಡಿದ್ದರು ಎಂದು ತಿಳಿದುಬಂದಿದೆ. ಜೊತೆಗೆ, ಸಿಎಂ ಯಡಿಯೂರಪ್ಪ ವಿರುದ್ಧ ಸಹ ಅಪಪ್ರಚಾರ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ, ಇದೀಗ ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಬೇಲೂರು […]

ಸಂಸದೆ ಸುಮಲತಾ, ಸಿಎಂ BSY ವಿರುದ್ಧ ಅಶ್ಲೀಲ ಪೋಸ್ಟ್: ಮಂಡ್ಯ ಠಾಣೆಯಲ್ಲಿ ದೂರು ದಾಖಲು

Updated on: Aug 22, 2020 | 4:24 PM

ಮಂಡ್ಯ: ಸೋಷಿಯಲ್ ಮೀಡಿಯಾದಲ್ಲಿ ಸಂಸದೆ ಸುಮಲತಾ ಹಾಗೂ ಸಿಎಂ BSY ವಿರುದ್ಧ ಅಪಪ್ರಚಾರ ಮಾಡಿರುವ ವಿಚಾರವಾಗಿ ಸಂಸದೆ ಸುಮಲತಾ ಬೆಂಬಲಿಗ ಬೇಲೂರು ಸೋಮಶೇಖರ್ ಇಂದು ಕಿಡಿಗೇಡಿಗಳ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

KRS ಜಲಾಶಯದಲ್ಲಿ ಬಾಗಿನ ಅರ್ಪಿಸುವ ವೇಳೆ ವಿಡಿಯೋ ಫೋಟೋ ಬಳಸಿ ಸಂಸದೆ ಸುಮಲತಾ ವಿರುದ್ಧ ಕಿಡಿಗೇಡಿಗಳು ಅಶ್ಲೀಲ ಪೋಸ್ಟ್ ಮಾಡಿದ್ದರು ಎಂದು ತಿಳಿದುಬಂದಿದೆ. ಜೊತೆಗೆ, ಸಿಎಂ ಯಡಿಯೂರಪ್ಪ ವಿರುದ್ಧ ಸಹ ಅಪಪ್ರಚಾರ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ, ಇದೀಗ ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಬೇಲೂರು ಸೋಮಶೇಖರ್ ದೂರು ನೀಡಿದ್ದಾರೆ.

ಮಂಡ್ಯದ ಪಶ್ಚಿಮ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು IPC 1860( U/s-504,505(1)(B) ಅಡಿಯಲ್ಲಿ ಹರೀಶ್ ಎಚ್.ಜಿ, ಸುರೇಂದ್ರ ಶ್ರೀನಿವಾಸ್ ‌ಗೌಡ@ ಮಂಡ್ಯ ಹುಡುಗ ಎಂಬ ಫೇಸ್‌ಬುಕ್‌ ಐಡಿಗಳ ಮಾಲೀಕರು ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ ಎಂಬ ಮಾಹಿತಿ ದೊರೆತಿದೆ.