5 ರೂ. ಚಿಲ್ಲರೆಗಾಗಿ ನಡುರಸ್ತೆಯಲ್ಲಿ ಬಡಿದಾಡಿಕೊಂಡ ಪ್ರಯಾಣಿಕ-ಕಂಡಕ್ಟರ್​; ವಿಡಿಯೋ ವೈರಲ್​ ಮಾಡಿದ ಸ್ಥಳೀಯರು

ಚಿಲ್ಲರೆಗಾಗಿ ನಡುರಸ್ತೆಯಲ್ಲಿ ಇವರಿಬ್ಬರೂ ಹೊಡೆದಾಟ ಮಾಡಿಕೊಂಡಿದ್ದನ್ನು ಸ್ಥಳೀಯ  ಮಂದಿ ನಿಂತು ನೋಡಿದ್ದಾರೆ. ಅಷ್ಟೇ ಏನು ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ನಂತರ ಅಲ್ಲಿದ್ದ ಬಸ್​ ಡ್ರೈವರ್​ ಮತ್ತಿತರರು ಬಂದು ಗಲಾಟೆಯನ್ನು ಬಿಡಿಸಿದ್ದಾರೆ.

5 ರೂ. ಚಿಲ್ಲರೆಗಾಗಿ ನಡುರಸ್ತೆಯಲ್ಲಿ ಬಡಿದಾಡಿಕೊಂಡ ಪ್ರಯಾಣಿಕ-ಕಂಡಕ್ಟರ್​; ವಿಡಿಯೋ ವೈರಲ್​ ಮಾಡಿದ ಸ್ಥಳೀಯರು
ಚಿಲ್ಲರೆಗಾಗಿ ಹೊಡೆದಾಡಿಕೊಳ್ಳುತ್ತಿರುವ ಕಂಡಕ್ಟ್​ ಮತ್ತು ಪ್ರಯಾಣಿಕ

Updated on: Nov 28, 2020 | 2:09 PM

ಕೋಲಾರ: ಚಿಲ್ಲರೆ ಹಣಕ್ಕಾಗಿ ಬಸ್​ನಲ್ಲಿ ಕಂಡಕ್ಟರ್​ ಜತೆ ಜಗಳ ಆಗುವುದು ತೀರ ಸಾಮಾನ್ಯ. ಆದರೆ ಇಲ್ಲಿ ನಿರ್ವಾಹಕ ಮತ್ತು ಪ್ರಯಾಣಿಕನ ನಡುವೆ ಮಾರಾಮಾರಿಯೇ ನಡೆದು ಹೋಗಿದೆ.. ಚಿಲ್ಲರೆಗಾಗಿ ಇವರಿಬ್ಬರೂ ಹೊಡೆದಾಟ ಮಾಡಿಕೊಂಡಿದ್ದನ್ನು ಸ್ಥಳೀಯ  ಮಂದಿ ನಿಂತು ನೋಡಿದ್ದಾರೆ.. ಅಷ್ಟೇ ಏನು ಮೊಬೈಲ್​ನಲ್ಲೂ ದೃಶ್ಯ ಸೆರೆಯಾಗಿ, ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಮುಳಬಾಗಿಲು ಪಟ್ಟಣದ ಹಳೇ ಕೋರ್ಟ್​ ಸರ್ಕಲ್​ ಬಳಿ ಘಟನೆ ನಡೆದಿದೆ. ಈ ಪ್ರಯಾಣಿಕನ ಟಿಕೆಟ್​ ಹಿಂದೆ 5 ರೂ. ಚಿಲ್ಲರೆ ಎಂದು ಕಂಡಕ್ಟರ್​ ಬರೆದುಕೊಟ್ಟಿದ್ದ. ಆದರೆ ನಂತರ ಕೇಳಿದಾಗ ಚಿಲ್ಲರೆ ಇಲ್ಲ ಎಂದು ಹೇಳಿದ್ದ. ಇದರಿಂದ ಸಿಟ್ಟಾದ ಪ್ರಯಾಣಿಕ ಸಹಜವಾಗಿಯೇ ಜಗಳ ತೆಗೆದ. ಆದರೆ ಇವರಿಬ್ಬರ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದೆ.

ಬಸ್​ನಿಂದ ಇಳಿದು, ನಡುರಸ್ತೆಯಲ್ಲಿ ಪರಸ್ಪರ ಬಡಿದಾಡಿದ್ದಾರೆ. ಸ್ಥಳದಲ್ಲಿದ್ದವರು ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಅಲ್ಲಿದ್ದ ಬಸ್​ ಡ್ರೈವರ್​ ಮತ್ತಿತರರು ಬಂದು ಗಲಾಟೆಯನ್ನು ಬಿಡಿಸಿದ್ದಾರೆ. ಆದರೂ ಕೆಲವು ಹೊತ್ತು ಇವರಿಬ್ಬರೂ ಪರಸ್ಪರ ಬೈದಾಡಿಕೊಂಡು ಅಲ್ಲಿಯೇ ನಿಂತಿದ್ದರು.

Published On - 2:04 pm, Sat, 28 November 20