ನಾಮಪತ್ರದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸದ ಮುನಿರತ್ನ: ಕೈ-ದಳ ನಾಯಕರು ಮಾಡಿದ್ದೇನು?
ಬೆಂಗಳೂರು: ನವೆಂಬರ್ 3ರಂದು ನಡೆಯಲಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯ ಅಭ್ಯರ್ಥಿ ಮುನಿರತ್ನರ ನಾಮಪತ್ರಕ್ಕೆ ತಕರಾರು ಎದ್ದಿದೆ. ಈ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ವತಿಯಿಂದ ಪ್ರತ್ಯೇಕ ದೂರು ಸಹ ಸಲ್ಲಿಕೆಯಾಗಿದೆ. ಮುನಿರತ್ನ ಪ್ರಮಾಣಪತ್ರ ಕ್ರಮಬದ್ಧವಾಗಿಲ್ಲವೆಂದು ಆರೋಪಿಸಿರುವ ಎರಡೂ ಪಕ್ಷಗಳು ತಮ್ಮ ಪ್ರಮಾಣಪತ್ರದಲ್ಲಿ ಮುನಿರತ್ನ ಕ್ರಿಮಿನಲ್ ಕೇಸ್ ಬಹಿರಂಗಪಡಿಸಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ, ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರವನ್ನು ತಿರಸ್ಕರಿಸುವಂತೆ ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದ ಚುನಾವಣಾಧಿಕಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ದೂರು ಸಹ ನೀಡಿದೆ.
Follow us on
ಬೆಂಗಳೂರು: ನವೆಂಬರ್ 3ರಂದು ನಡೆಯಲಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯ ಅಭ್ಯರ್ಥಿ ಮುನಿರತ್ನರ ನಾಮಪತ್ರಕ್ಕೆ ತಕರಾರು ಎದ್ದಿದೆ. ಈ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ವತಿಯಿಂದ ಪ್ರತ್ಯೇಕ ದೂರು ಸಹ ಸಲ್ಲಿಕೆಯಾಗಿದೆ.
ಮುನಿರತ್ನ ಪ್ರಮಾಣಪತ್ರ ಕ್ರಮಬದ್ಧವಾಗಿಲ್ಲವೆಂದು ಆರೋಪಿಸಿರುವ ಎರಡೂ ಪಕ್ಷಗಳು ತಮ್ಮ ಪ್ರಮಾಣಪತ್ರದಲ್ಲಿ ಮುನಿರತ್ನ ಕ್ರಿಮಿನಲ್ ಕೇಸ್ ಬಹಿರಂಗಪಡಿಸಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ, ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರವನ್ನು ತಿರಸ್ಕರಿಸುವಂತೆ ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದ ಚುನಾವಣಾಧಿಕಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ದೂರು ಸಹ ನೀಡಿದೆ.