ಜೈಶ್ರೀರಾಮ್ ಘೋಷಣೆ ಕೂಗಿದಕ್ಕೆ ಉಂಟಾಯ್ತು ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ, ಪೊಲೀಸರಿಂದ ಲಾಠಿ ಚಾರ್ಜ್

| Updated By: ಸಾಧು ಶ್ರೀನಾಥ್​

Updated on: Mar 01, 2021 | 10:42 AM

ಪಂದ್ಯದಲ್ಲಿ ಸೋತ ಬಳಿಕ ಧರ್ಮಪ್ರಸಾದ್‌ ಅವರ ತಂಡದ ಸದಸ್ಯರು ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಾರೆ. ಆಗ ಗೆದ್ದ ಉಮೇಶ್ ತಂಡದ ಕಾಂಗ್ರೆಸ್ ಬೆಂಬಲಿಗರು ಹಲ್ಲೆ ನಡೆಸಲು ಮುಂದಾಗುತ್ತಾರೆ. ಈ ರೀತಿ ಬಿಜೆಪಿ-ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರ ನಡುವೆ ಹೊಡೆದಾಟವಾಗಿದೆ.

ಜೈಶ್ರೀರಾಮ್ ಘೋಷಣೆ ಕೂಗಿದಕ್ಕೆ ಉಂಟಾಯ್ತು ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ, ಪೊಲೀಸರಿಂದ ಲಾಠಿ ಚಾರ್ಜ್
ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ
Follow us on

ಶಿವಮೊಗ್ಗ: ತಡ ರಾತ್ರಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟವಾಗಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಾಠಿ ಬೀಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕನಕ ಮಂಟಪ ಬಳಿ ನಡೆದಿದೆ.

ಕನಕ ಮಂಟಪ ಮೈದಾನದಲ್ಲಿ ನಿನ್ನೆ ರಾತ್ರಿ ಹೊನಲು ಬೆಳಕಿನ ಪಂದ್ಯಾವಳಿ ನಡೆಯುತ್ತಿತ್ತು. ಸ್ಟೀಲ್ ಟೈಂ ಮತ್ತು ಮಲ್ನಾಡ್ ವಾರಿಯರ್ಸ್ ನಡುವೆ ಕಬಡ್ಡಿ ಪಂದ್ಯಾವಳಿ ನಡೆಯುತ್ತಿತ್ತು. ಪಂದ್ಯದಲ್ಲಿ ಬಿಜೆಪಿಯ ಧರ್ಮಪ್ರಸಾದ್‌ರ ಸ್ಟೀಲ್ ಟೈಂ ತಂಡಕ್ಕೆ ಸೋಲಾಗುತ್ತೆ. ಹಾಗೂ ಉಮೇಶ್​ರ ಮಲ್ನಾಡ್ ವಾರಿಯರ್ಸ್ ತಂಡಕ್ಕೆ ಗೆಲುವಾಗುತ್ತೆ. ಈ ವೇಳೆ ಪಂದ್ಯದಲ್ಲಿ ಸೋತ ಬಳಿಕ ಧರ್ಮಪ್ರಸಾದ್‌ ಅವರ ತಂಡದ ಸದಸ್ಯರು ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಾರೆ. ಆಗ ಗೆದ್ದ ಉಮೇಶ್ ತಂಡದ ಕಾಂಗ್ರೆಸ್ ಬೆಂಬಲಿಗರು ಹಲ್ಲೆ ನಡೆಸಲು ಮುಂದಾಗುತ್ತಾರೆ.

ಈ ರೀತಿ ಬಿಜೆಪಿ-ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರ ನಡುವೆ ಹೊಡೆದಾಟವಾಗಿದೆ. ಗಲಾಟೆ ನಿಯಂತ್ರಿಸಲು ಪೊಲೀಸ್ ರಿಂದ ಲಘು ಲಾಠಿ ಪ್ರಹಾರವಾಗಿದೆ. ಈ ವೇಳೆ ಕೆಲವರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ

ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ರಂಪಾಟ ನೋಡುತ್ತ ನಿಂತ ಜನ

ಇದನ್ನೂ ಓದಿ: ಕಲಾಪದ ಮಧ್ಯೆ.. ಸಚಿವ-ಆಡಳಿತ ಪಕ್ಷದ ಶಾಸಕ ಹೊಡೆದಾಟ, ಕೈ ಶಾಸಕರು ತಡೆದರು!