ನವದೆಹಲಿ: ಹಿರಿಯ ಕಾಂಗ್ರೆಸ್ ಧುರೀಣ, ರಾಜ್ಯಸಭಾ ಸದಸ್ಯ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ವಿವಾದಪ್ರಿಯರು. 74 ವರ್ಷ ವಯಸ್ಸಿನ ಸಿಂಗ್ ನಿಷ್ಠಾವಂತ ಕಾಂಗ್ರೆಸ್ಸಿಗ ಅನ್ನೋದು ಸತ್ಯವಾದರೂ ಸದಾ ವಿವಾದಲ್ಲಿರೋದು ಅವರ ಜಾಯಮಾನಗಳಲ್ಲೊಂದು. ಪಕ್ಷದ ಪರವಾಗಿ ಮಾತಾಡುವಾಗ ಹೈಕಮಾಂಡನ್ನು ಮೆಚ್ಚಿಸುವ ಭರದಲ್ಲಿ ಅವರು ವಿವಾದಕ್ಕೀಡಾಗುತ್ತಾರೆ. ಮೊನ್ನೆ ನಡದಿರುವ ಘಟನೆಯನ್ನೇ ಒಮ್ಮೆ ಗಮನಿಸಿ. ದೆಹಲಿಯ ಕ್ಲಬ್ಹೌಸ್ನಲ್ಲಿ ವರ್ಚ್ಯೂಯಲ್ ಪ್ಲಾಟ್ಫಾರ್ಮ್ ಮೂಲಕ ಆಯೋಜಿಸಲಾಗುವ ಸಂವಾದಗಳಲ್ಲಿ ಭಾಗಿಯಾಗಿದ್ದ ಸಿಂಗ್, ಪಾಕಿಸ್ತಾನ ಪತ್ರಕರ್ತನೊಬ್ಬನೊಂದಿಗೆ ಮಾತಾಡುವ ಸಂದರ್ಭದಲ್ಲಿ ಸಂವಿಧಾನದ 370ನೇ ವಿಧಿ ಬಗ್ಗೆ ವಿವಾದಾತ್ಮಕವಾಗಿ ಮಾತಾಡಿ ನಂತರ ಅದಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಮೊದಲಿಗೆ ಅವರು ಮಾತಾಡಿದ್ದೇನು ಅನ್ನುವುದನ್ನು ಗಮನಿಸೋಣ.
ಬಿಜೆಪಿ ನಾಯಕರು ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ಪಿಂಗ್ನಲ್ಲಿ ಸಿಂಗ್ ಅವರು, ‘ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನ ರದ್ದು ಮಾಡಿದ್ದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿತ್ತು. ಅಲ್ಲಿದ್ದವರನ್ನೆಲ್ಲ ಜೈಲಿಗೆ ಹಾಕಿದ ನಂತರ ಅಲ್ಲಿ ಮಾನವೀಯತೆಯೂ ನಶಿಸಿಹೋಯಿತು. ಕಾಶ್ಮೀರಿಯತ್ ಅನ್ನೋದು ಕೋಮು ಸೌಹಾರ್ದತೆಯ ತಳಹದಿಯಾಗಿದೆ. ನಾನು ಯಾಕೆ ಹಾಗೆ ಹೇಳುತ್ತಿರುವೆನೆಂದರೆ ಮುಸ್ಲಿಮರು ಬಹಸಂಖ್ಯಾತರಾಗಿದ್ದ ರಾಜ್ಯವನ್ನು ಒಬ್ಬ ಹಿಂದೂ ಅರಸ ಆಳುತ್ತಿದ್ದ ಮತ್ತು ಎರಡು ಕೋಮಗಳ ನಡುವೆ ಸೌಹಾರ್ದತೆಯಿತ್ತು. ಮತ್ತೊಂದು ಗಮನಾರ್ಹ ವಿಷಯೆವೆಂದರೆ, ಕಾಶ್ಮೀರದ ಸರ್ಕಾರಿ ಸೇವೆಗಳಲ್ಲಿ ಕಾಶ್ಮೀರಿ ಪಂಡಿತರಿಗೆ ಮಿಸಲಾತಿಯಿತ್ತು. ಈ ಹಿನ್ನೆಲೆಯಲ್ಲಿ 370ನೇ ವಿಧಿಯನ್ನು ರದ್ದು ಮಾಡಿದ್ದು ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ರಾಜ್ಯದ ಸ್ಥಾನಮಾನವನ್ನು ದೂರಮಾಡಿದ್ದು ಒಂದು ವಿಷಾದಕರ ಸಂಗತಿ. ಕಾಂಗ್ರೆಸ್ ಪವು ಅಧಿಕಾರಕ್ಕೆ ಬಂದರೆ ಈ ವಿಷಯವನ್ನು ಪುನರ್ಪರಶೀಲಿಸುವುದು,’ ಅಂತ ಹೇಳಿದ್ದಾರೆ.
ಕ್ಲಬ್ಹೌಸ್ನಲ್ಲಿ ಪಾಕಿಸ್ತಾನದ ಪತ್ರಕರ್ತನೊಂದಿಗೆ ದಿಗ್ವಿಜಯ ಸಿಂಗ್ ಅವರು ನಡೆಸಿರುವ ಸಂಭಾಷಣೆಯ ಆಡಿಯೊ ಕ್ಲಿಪ್ಪಿಂಗ್ ಅನ್ನು ಬಿಜೆಪಿ ಶನಿವಾರ ಲೀಕ್ ಮಾಡಿದ ನಂತರ, ಪಕ್ಷದ ಐಟಿ ಸೆಲ್ ಮುಖ್ಯಸ್ಥರಾಗಿರುವ ಅಮಿತ್ ಮಾಳವೀಯಾ ಅವರು, ‘ಇದು ನಿಜವಾ? ಪಾಕಿಸ್ತಾನಕ್ಕೆ ಇದೇ ಬೇಕಾಗಿದೆಯೇ,?’ ಎಂದು ಟ್ವೀಟ್ ಮಾಡಿ, ಕ್ಲಿಪ್ ಅನ್ನು ಶೇರ್ ಮಾಡಿದ್ದಾರೆ.
‘ಕ್ಲಬ್ ಹೌಸ್ನಲ್ಲಿ ನಡೆದ ಸಂಭಾಷಣೆಯಲ್ಲಿ ರಾಹುಲ್ ಗಾಂಧಿ ಆವರ ಪರಮಾಪ್ತ ದಿಗ್ವಿಜಯ ಸಿಂಗ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 370 ನೇ ವಿಧಿ ರದ್ದು ಮಾಡಿದ್ದನ್ನು ಮತ್ತೊಮ್ಮೆ ಪರಿಶೀಲಿಸಲಿದೆ ಎಂದು ಒಬ್ಬ ಪಾಕಿಸ್ತಾನೀ ಪತ್ರಕರ್ತನಿಗೆ ಹೇಳಿದ್ದಾರೆ,’ ಎಂದು ಮಾಳವೀಯ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.
In a Club House chat, Rahul Gandhi’s top aide Digvijaya Singh tells a Pakistani journalist that if Congress comes to power they will reconsider the decision of abrogating Article 370…
Really? यही तो पाकिस्तान चाहता है… pic.twitter.com/x08yDH8JqF
— Amit Malviya (@amitmalviya) June 12, 2021
ಪಾಕಿಸ್ತಾನಿ ಪತ್ರಕರ್ತನೊಂದಿಗೆ ತಾನು ಮಾತಾಡಿದ್ದು ವಿವಾದಕ್ಕೆ ತಿರುಗಿದೆ ಎನ್ನವುದನ್ನು ಮನಗಂಡ ಸಿಂಗ್ ಅವರು, ಬಿಜೆಪಿ ನಾಯಕರ ಮೇಲೆ ಗೂಬೆ ಕೂರಿಸಿ ಅದರಿಂದ ಕೊಸರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ‘ಶಾಲ್’ (shall) ಮತ್ತು ಕನ್ಸಿಡರ್ (consider) ಪದಗಳ ನಡುವು ವ್ಯತ್ಯಾಸ ಅನಕ್ಷರಸ್ತ ಜನಕ್ಕೆ ಗೊತ್ತಾಗಿಲ್ಲ ಅಂತ ಅವರು ಹೇಳಿದ್ದಾರೆ.
अनपढ़ लोगों की जमात को
Shall और Consider में फ़र्क़
शायद समझ में नहीं आता।— digvijaya singh (@digvijaya_28) June 12, 2021
ಆಡಿಯೊ ಲೀಕ್ ದೇಶದ ರಾಜಕೀಯ ವಲಯಗಳಲ್ಲಿ ಭಾರೀ ಚರ್ಚೆಗೀಡಾಗಿದ್ದು, ಬಿಜೆಪಿ ನಾಯಕರು ಟ್ವಿಟ್ಟರ್ನಲ್ಲಿ ಒಕ್ಕೊರಲಿನಿಂದ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ.
ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ,‘ಕೇವಲ ಒಂದು ಆಕಸ್ಮಿಕ,’ ಅಂತ ಬಣ್ಣಿಸಿದ್ದು ಇದೇ ದಿಗ್ವಿಜಯ್ ಸಿಂಗ್. 26/11 ಘಟನೆಯನ್ನು ಆರ್ಎಸ್ಎಸ್ ಪಿತೂರಿ ಎಂದು ಹೇಳಿ ಆಗ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ್ದು ಸಹ ಇದೇ ಸಿಂಗ್. ಇದೆಲ್ಲ ಟೂಲ್ಕಿಟ್ನ ಭಾಗವಾಗಿದೆ. ಮೋದಿ ಜೀ ಅವರು ಅವರು ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಪುನರ್ಸ್ಥಾಪಿಸಲಾಗುವುದೆಂದು ಸಿಂಗ್ ಹೇಳುತ್ತಿದ್ದಾರೆ,’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ಈ ಬಗೆಯ ಹೇಳಿಕೆಗಳು ಕಾಶ್ಮೀರ್ನಲ್ಲಿ ಮತ್ತೊಮ್ಮೆ ಭಯೋತ್ಪಾದಕ ಚಟುವಟಿಕೆಗಳಿಗೆ ಇಂಬು ನೀಡುತ್ತವೆ ಎಂದು ಹೇಳಿದ್ದಾರೆ. ‘ಆಧಿಕಾರಕ್ಕೆ ವಾಪಸ್ಸು ಬರಲು ಕಾಂಗ್ರೆಸ್ ಎಷ್ಟು ಹತಾಷ ಪ್ರಯತ್ನಗಳನ್ನು ನಡೆಸುತ್ತಿದೆ ಅನ್ನೋದು ಇದರಿಂದ ವೇದ್ಯವಾಗುತ್ತದೆ, ಅದಕ್ಕಾಗಿ ಭಾರತಾಂಬೆಯ ಸಮಗ್ರತೆಯನ್ನು ಪಣಕ್ಕಿಡಲು ಸಹ ಅದು ತಯಾರಿದೆ,’ ಎಂದು ಅವರು ಹೇಳಿದ್ದಾರೆ.
ಮತ್ತೊಬ್ಬ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಪ್ರಜಾಪ್ರಭುತ್ವವು ಯೋಗ್ಯರ ಕೈಗಳಲ್ಲಿ ಸುರಕ್ಷಿತವಾಗಿದೆ ಮತ್ತು, ‘ಹಿಂಸೆಯ ಪ್ರಚೋದಕರು ಓದಲು ತಮ್ಮ ಮಕ್ಕಳನ್ನು ವಿದೇಶಗಳಿಗೆ ಕಳಿಸಿ ಜನಸಾಮಾನ್ಯರ ಮಕ್ಕಳ ಕೈಗಳಿಗೆ ಕಲ್ಲುಗಳನ್ನು ಕೊಟ್ಟಾಗಲೇ,’ ಮಾನವೀಯತೆ ಸತ್ತುಹೋಯಿತು ಎಂದು ಹೇಳಿದ್ದಾರೆ. ಗಡಿಯಾಚೆಯ ಜನರನ್ನು ಸಂತೋಷಪಡಿಸಲು ಪ್ರಯತ್ನಗಳನ್ನು ಮಾಡುವ ಬದಲು ಕಾಂಗ್ರೆಸ್ 370ನೇ ವಿಧಿ ರದ್ದಾಗಿರುವ ವಾಸ್ತವಿಕತೆಯನ್ನು ಮನವರಿಕೆ ಮಾಡಿಕೊಳ್ಳಬೇಕು,’ ಎಂದು ಹರ್ದೀಪ್ಸಿಂಗ್ ಪುರಿ ಹೇಳಿದ್ದಾರೆ.
ಇದನ್ನೂ ಓದಿ: ನಿಮ್ಮ ನಿಜವಾದ ಬಣ್ಣ ತೋರಿಸಿದ್ದೀರಿ; ದಿಗ್ವಿಜಯ್ ಸಿಂಗ್ಗೆ ತಿರುಗೇಟು ನೀಡಿದ ಪ್ರಹ್ಲಾದ್ ಜೋಶಿ