ತಮ್ಮ ಹಾಗೂ ದೇವೇಗೌಡರ ಕುಟುಂಬಗಳ ನಡುವೆ ಚುನಾವಣಾ ಸಂಘರ್ಷ ವರ್ಷಗಳಿಂದ ನಡೆಯುತ್ತಾ ಬಂದಿದೆ: ಡಿಕೆ ಶಿವಕುಮಾರ್

|

Updated on: Feb 17, 2024 | 1:03 PM

ಸುರೇಶ್ ವಿರುದ್ಧ ಯಾರು ಸ್ಪರ್ಧಿಸಲಿದ್ದಾರೆ ಅಂತ ಕಾಂಗ್ರೆಸ್ ತಲೆಕೆಡಿಸಿಕೊಂಡಿಲ್ಲ, ಸುರೇಶ್ ಭಾರೀ ಜನಪ್ರಿಯ ಸಂಸದ, ಅವರು ದೆಹಲಿಯಲ್ಲಿ ಕೂತು ಕೆಲಸ ಮಾಡುವ ಸಂಸದನಲ್ಲ, ಹಳ್ಳಿಯಲ್ಲಿರುವ ಮತ್ತು ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಅವರ ಬೇಕು ಬೇಡಗಳ ಕಡೆ ಗಮನ ಹರಿಸುವ ನಾಯಕನಾಗಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಮಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿ ಯಾರು ಎಂಬ ಯೋಚನೆ ಕಾಂಗ್ರೆಸ್ ಪಕ್ಷಕ್ಕೆ ಖಂಡಿತ ಇಲ್ಲ. 2014ರಿಂದ ಲೋಕಸಭೆಗೆ ಆಯ್ಕೆಯಾಗುತ್ತಿರುವ ಡಿಕೆ ಶಿವಕುಮಾರ್ (DK Shivakumar) ಅವರ ಸಹೋದರ ಡಿಕೆ ಸುರೇಶ್ (DK Suresh) ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಅದರೆ ಚಿಂತೆ ಇರೋದು ಬಿಜೆಪಿ-ಜೆಡಿಎಸ್ ಮೈತ್ರಿಗೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮೈತ್ರಿ ಅಭ್ಯರ್ಥಿಯಾಗಿ, ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ (Dr CN Manjunath) (ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅಳಿಯ) ಅವರನ್ನು ನಿಲ್ಲಿಸುವ ಹವಣಿಕೆ ನಡೆದಿದೆ. ಅವರು ಸ್ಪರ್ಧಿಸಿದರೆ ಹೇಗೆ ಸಾರ್ ಅಂತ ಶಿವಕುಮಾರ್ ಅವರನ್ನ ಮಾಧ್ಯಮ ಪ್ರತಿನಿಧಿಗಳು ನಗರದಲ್ಲಿಂದು ಕೇಳಿದಾಗ, ಸುರೇಶ್ ವಿರುದ್ಧ ಯಾರು ಸ್ಪರ್ಧಿಸಲಿದ್ದಾರೆ ಅಂತ ಕಾಂಗ್ರೆಸ್ ತಲೆಕೆಡಿಸಿಕೊಂಡಿಲ್ಲ, ಸುರೇಶ್ ಭಾರೀ ಜನಪ್ರಿಯ ಸಂಸದ, ಅವರು ದೆಹಲಿಯಲ್ಲಿ ಕೂತು ಕೆಲಸ ಮಾಡುವ ಸಂಸದನಲ್ಲ, ಹಳ್ಳಿಯಲ್ಲಿರುವ ಮತ್ತು ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಅವರ ಬೇಕು ಬೇಡಗಳ ಕಡೆ ಗಮನ ಹರಿಸುವ ನಾಯಕನಾಗಿದ್ದಾರೆ ಎಂದು ಹೇಳಿದರು. ತಮ್ಮ ಹಾಗೂ ಸಹೋದರನ ವಿರುದ್ಧ ಹೆಚ್ ಡಿ ದೇವೇಗೌಡ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಲೇ ಬಂದಿದ್ದಾರೆ, ಸುರೇಶ್ ಗೆಲುವಿನ ಬಗ್ಗೆ ತಮಗೆ ಸಂಶಯವಿಲ್ಲ ಎಂದ ಶಿವಕುಮಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಕ್ರವರ್ತಿ ಅಶೋಕ ತನ್ನ ವಿರುದ್ಧ ಸ್ಪರ್ಧಿಸಿದ್ದನ್ನು ನೆನಪಿಸಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ