ರಸ್ತೆ ನಿರ್ಮಾಣ ವಿರೋಧಿಸಿದ ಮಹಿಳೆಯರ ಮೇಲೆ JCB ಯಿಂದ ಮಣ್ಣು ಸುರಿಯುವ ಯತ್ನ, ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Sep 23, 2020 | 5:50 PM

ಬೆಂಗಳೂರು: ಮಹಿಳೆಯರ ಮೇಲೆ ಜೆಸಿಬಿಯಿಂದ ಮಣ್ಣು ಸುರಿಯುವ ಯತ್ನ ನಡೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೆತ್ತನಗೆರೆ ಬಳಿಯ ಹಲಸಿಮರದಪಾಳ್ಯ ಗ್ರಾಮದಲ್ಲಿ ನಡೆದಿದೆ. ಹರ್ಷಿತಾ ಹಾಗೂ ಹನುಮಕ್ಕಾ ಎಂಬುವವರ ಮೇಲೆ ಮಣ್ಣು ಸುರಿಯುವ ಯತ್ನ ನಡೆಸಲಾಗಿದೆ. ಹರ್ಷಿತಾ ಮತ್ತು ಹನುಮಕ್ಕಾಗೆ ಸೇರಿದ ಜಮೀನಿನಲ್ಲಿ ಲೇಔಟ್‌ಗಾಗಿ ಅಕ್ರಮವಾಗಿ ರಸ್ತೆ ನಿರ್ಮಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಮೋಹನ್ ಕುಮಾರ್, ಶಿವಕುಮಾರ್, ರೇಣುಕಾ ಪ್ರಸಾದ್ ಹಾಗೂ ಅನಂತ್ ವಿರುದ್ಧ ಹರ್ಷಿತಾ ಮತ್ತು ಹನುಮಕ್ಕ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವ ಆರೋಪ ಮಾಡಿದ್ದಾರೆ. […]

ರಸ್ತೆ ನಿರ್ಮಾಣ ವಿರೋಧಿಸಿದ ಮಹಿಳೆಯರ ಮೇಲೆ JCB ಯಿಂದ ಮಣ್ಣು ಸುರಿಯುವ ಯತ್ನ, ಎಲ್ಲಿ?
Follow us on

ಬೆಂಗಳೂರು: ಮಹಿಳೆಯರ ಮೇಲೆ ಜೆಸಿಬಿಯಿಂದ ಮಣ್ಣು ಸುರಿಯುವ ಯತ್ನ ನಡೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೆತ್ತನಗೆರೆ ಬಳಿಯ ಹಲಸಿಮರದಪಾಳ್ಯ ಗ್ರಾಮದಲ್ಲಿ ನಡೆದಿದೆ. ಹರ್ಷಿತಾ ಹಾಗೂ ಹನುಮಕ್ಕಾ ಎಂಬುವವರ ಮೇಲೆ ಮಣ್ಣು ಸುರಿಯುವ ಯತ್ನ ನಡೆಸಲಾಗಿದೆ.
ಹರ್ಷಿತಾ ಮತ್ತು ಹನುಮಕ್ಕಾಗೆ ಸೇರಿದ ಜಮೀನಿನಲ್ಲಿ ಲೇಔಟ್‌ಗಾಗಿ ಅಕ್ರಮವಾಗಿ ರಸ್ತೆ ನಿರ್ಮಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಮೋಹನ್ ಕುಮಾರ್, ಶಿವಕುಮಾರ್, ರೇಣುಕಾ ಪ್ರಸಾದ್ ಹಾಗೂ ಅನಂತ್ ವಿರುದ್ಧ ಹರ್ಷಿತಾ ಮತ್ತು ಹನುಮಕ್ಕ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವ ಆರೋಪ ಮಾಡಿದ್ದಾರೆ.

ಹಾಗಾಗಿ, ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಿಸದಂತೆ ಮಹಿಳೆಯರಿಬ್ಬರು ವಿರೋಧಿಸಿದರು. ಈ ವೇಳೆ ಮಹಿಳೆಯರನ್ನು ಬೆದರಿಸಲು ಅವರ ಮೇಲೆ JCB ಮೂಲಕ ಮಣ್ಣು ಸುರಿಯುವ ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ಮಹಿಳೆಯರ ಮೇಲೆ ಮಣ್ಣು ಸುರಿಯುವ ದೃಶ್ಯ ಮೊಬೈಲ್​ನಲ್ಲಿ ರೆಕಾರ್ಡ್ ಆಗಿದ್ದು ಇದನ್ನೇ ಸಾಕ್ಷಿಯಾಗಿ ಬಳಸಿ ಸ್ತ್ರೀಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Published On - 4:46 pm, Wed, 23 September 20