ಜಮೀನು ನೋಂದಣಿಗಾಗಿ ಕಿಡ್ನ್ಯಾಪ್! ಅಪಹರಣಕಾರನ ಮೇಲೆ ಖಾಕಿ ಫೈರಿಂಗ್
ದೊಡ್ಡಬಳ್ಳಾಪುರ: ಅಪಹರಣಕಾರನ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಾನುಕುಂಟೆ ಠಾಣೆ ವ್ಯಾಪ್ತಿಯ ಮಾವಳ್ಳಿಪುರ ಬಳಿ ನಡೆದಿದೆ. ಅಂಜನ್ ಗೌಡ ಎಂಬುವವರನ್ನ ಕಿಡ್ನ್ಯಾಪ್ ಮಾಡಿದ್ದ ಆರೋಪಿ ಮನೋಜ್ ಮೇಲೆ ಖಾಕಿ ಪಡೆ ಫೈರಿಂಗ್ ನಡೆಸಿದ್ದಾರೆ. ಜಮೀನು ನೋಂದಣಿಗಾಗಿ ಅಂಜನ್ ಗೌಡರನ್ನು ಆರೋಪಿ ಮನೋಜ್ ದೊಡ್ಡಬಳ್ಳಾಪುರ ನಗರದಿಂದ ಕಿಡ್ನ್ಯಾಪ್ ಮಾಡಿದ್ದ. ಕಿಡ್ನ್ಯಾಪ್ ಪ್ರಕರಣದ ಹಿನ್ನೆಲೆಯಲ್ಲಿ ಮನೋಜ್ನನ್ನು ಬಂಧಿಸಲು ತೆರಳಿದ್ದ PSIಶಂಕರಪ್ಪ ಮೇಲೆ ಆರೋಪಿ ಹಲ್ಲೆಗೆ ಯತ್ನ ನಡೆಸಿದ್ದಾನೆ. ಈ ವೇಳೆ ದೊಡ್ಡಬಳ್ಳಾಪುರ ಮಹಿಳಾ ಠಾಣೆ […]
ದೊಡ್ಡಬಳ್ಳಾಪುರ: ಅಪಹರಣಕಾರನ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಾನುಕುಂಟೆ ಠಾಣೆ ವ್ಯಾಪ್ತಿಯ ಮಾವಳ್ಳಿಪುರ ಬಳಿ ನಡೆದಿದೆ. ಅಂಜನ್ ಗೌಡ ಎಂಬುವವರನ್ನ ಕಿಡ್ನ್ಯಾಪ್ ಮಾಡಿದ್ದ ಆರೋಪಿ ಮನೋಜ್ ಮೇಲೆ ಖಾಕಿ ಪಡೆ ಫೈರಿಂಗ್ ನಡೆಸಿದ್ದಾರೆ. ಜಮೀನು ನೋಂದಣಿಗಾಗಿ ಅಂಜನ್ ಗೌಡರನ್ನು ಆರೋಪಿ ಮನೋಜ್ ದೊಡ್ಡಬಳ್ಳಾಪುರ ನಗರದಿಂದ ಕಿಡ್ನ್ಯಾಪ್ ಮಾಡಿದ್ದ.
ಕಿಡ್ನ್ಯಾಪ್ ಪ್ರಕರಣದ ಹಿನ್ನೆಲೆಯಲ್ಲಿ ಮನೋಜ್ನನ್ನು ಬಂಧಿಸಲು ತೆರಳಿದ್ದ PSIಶಂಕರಪ್ಪ ಮೇಲೆ ಆರೋಪಿ ಹಲ್ಲೆಗೆ ಯತ್ನ ನಡೆಸಿದ್ದಾನೆ. ಈ ವೇಳೆ ದೊಡ್ಡಬಳ್ಳಾಪುರ ಮಹಿಳಾ ಠಾಣೆ PSI ಕುಮಾರ್ರಿಂದ ಫೈರಿಂಗ್ ನಡೆದಿದ್ದು ಆರೋಪಿ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಅಪಹರಣವಾಗಿದ್ದ ಅಂಜನ್ ಗೌಡರನ್ನು ಪೊಲೀಸರು ರಕ್ಷಿಸಿದ್ದಾರೆ.