Corona Alert ಬೆಂಗಳೂರಿಗರೇ ಎಚ್ಚರ! ಮನೆಯಿಂದ ಹೊರ ಕಾಲಿಡುವ ಮುನ್ನ ಈ ವರದಿ ಓದಿ

| Updated By:

Updated on: Jul 24, 2020 | 3:58 PM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರೋ ಜನರೇ ಎಚ್ಚರ.. ಎಚ್ಚರ..! ಮನೆಯಿಂದ ಹೊರಗೆ ಬರಬೇಕಾದ್ರೆ ಒಂದಲ್ಲಾ ಎರಡೆರಡು ಸಲ ಯೋಚಿಸಿ. ಫ್ರೀಡೌನ್ ಅಂತಾ ರಸ್ತೆಗೆ ಇಳಿಯೋ ಮುನ್ನ ಹುಷಾರ್!ಯಾಕಂದ್ರೆ ಬೆಂಗಳೂರಿನ 198 ವಾರ್ಡ್​ಗಳಲ್ಲಿ ಕೊರೊನಾ ತಾಂಡವವಾಡುತ್ತಿದೆ. 198 ವಾರ್ಡ್​ಗಳ ಪೈಕಿ 160 ವಾರ್ಡ್​ಗಳಲ್ಲಿ 50ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. 28ಕ್ಕೂ ಹೆಚ್ಚು ವಾರ್ಡ್​ಗಳಲ್ಲಿ 100ಕ್ಕೂ ಹೆಚ್ಚು ಕೇಸ್​ಗಳು ಪತ್ತೆಯಾಗಿವೆ. ಹಾಗೂ 30ಕ್ಕೂ ಹೆಚ್ಚು ವಾರ್ಡ್​ಗಳಲ್ಲಿ ಶೇ.80ಕ್ಕೂ ಹೆಚ್ಚು ಸೋಂಕು ತಗುಲಿರುವವರಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 11638 ಕಂಟೇನ್ಮೆಂಟ್ ಜೋನ್​ಗಳಿವೆ. ಇದರಲ್ಲಿ 9815 […]

Corona Alert ಬೆಂಗಳೂರಿಗರೇ ಎಚ್ಚರ! ಮನೆಯಿಂದ ಹೊರ ಕಾಲಿಡುವ ಮುನ್ನ ಈ ವರದಿ ಓದಿ
Follow us on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರೋ ಜನರೇ ಎಚ್ಚರ.. ಎಚ್ಚರ..! ಮನೆಯಿಂದ ಹೊರಗೆ ಬರಬೇಕಾದ್ರೆ ಒಂದಲ್ಲಾ ಎರಡೆರಡು ಸಲ ಯೋಚಿಸಿ. ಫ್ರೀಡೌನ್ ಅಂತಾ ರಸ್ತೆಗೆ ಇಳಿಯೋ ಮುನ್ನ ಹುಷಾರ್!ಯಾಕಂದ್ರೆ ಬೆಂಗಳೂರಿನ 198 ವಾರ್ಡ್​ಗಳಲ್ಲಿ ಕೊರೊನಾ ತಾಂಡವವಾಡುತ್ತಿದೆ.

198 ವಾರ್ಡ್​ಗಳ ಪೈಕಿ 160 ವಾರ್ಡ್​ಗಳಲ್ಲಿ 50ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. 28ಕ್ಕೂ ಹೆಚ್ಚು ವಾರ್ಡ್​ಗಳಲ್ಲಿ 100ಕ್ಕೂ ಹೆಚ್ಚು ಕೇಸ್​ಗಳು ಪತ್ತೆಯಾಗಿವೆ. ಹಾಗೂ 30ಕ್ಕೂ ಹೆಚ್ಚು ವಾರ್ಡ್​ಗಳಲ್ಲಿ ಶೇ.80ಕ್ಕೂ ಹೆಚ್ಚು ಸೋಂಕು ತಗುಲಿರುವವರಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 11638 ಕಂಟೇನ್ಮೆಂಟ್ ಜೋನ್​ಗಳಿವೆ. ಇದರಲ್ಲಿ 9815 ಸಕ್ರಿಯ ಕಂಟೇನ್ಮೆಂಟ್ ಜೋನ್​ಗಳಿವೆ. ಸುಮ್ಮಸುಮ್ಮನೆ ಬೀದಿಗಿಳಿದ್ರೆ ಕೊರೊನಾ ಬರೋದು ಕನ್ಫರ್ಮ್.

ಬೆಂಗಳೂರು ದಕ್ಷಿಣ ವಲಯವನ್ನು ಮೀರಿಸಲಿದೆಯಾ ಪಶ್ಚಿಮ ವಲಯ?
ಬೆಂಗಳೂರು ಸೌತ್​ಗೆ ಸ್ಪರ್ಧೆ ನೀಡುವಂತೆ ಬೆಂಗಳೂರು ಪಶ್ಚಿಮ ವಲಯದಲ್ಲಿ ಕೇಸ್​ಗಳು ಹೆಚ್ಚಾಗುತ್ತಿವೆ. ನಿನ್ನೆ ಒಂದೇ ದಿನ 420 ಪ್ರಕರಣಗಳು ಬೆಂಗಳೂರು ಪಶ್ಚಿಮ ವಲಯದಲ್ಲಿ ದಾಖಲಾಗಿವೆ. ಕಳೆದ ಹತ್ತು ದಿನಗಳಲ್ಲಿ ಬರೋಬ್ಬರಿ 3476 ಸೋಂಕಿತರು ವೆಸ್ಟ್ ಜೋನ್​ನಲ್ಲಿ ದೃಢವಾಗಿದ್ದಾರೆ.

ನಿನ್ನೆ ಎರಡನೇ ಅತಿ ಹೆಚ್ಚು ಸೋಂಕಿತರ ವಲಯವಾಗಿ ಪಶ್ಚಿಮ ವಲಯ ಕಾಣಿಸಿಕೊಂಡಿದೆ. ವಲಯ ಉಸ್ತುವಾರಿ ಡಿಸಿಎಂ ಡಾ.ಅಶ್ವಥ್ ನಾರಾಯಣ ಕ್ಷೇತ್ರದಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಬೆಂಗಳೂರಿನ ಶೆ.22 ರಷ್ಟು ಸೋಂಕಿತರು ಪಶ್ಚಿಮ ವಲಯದವರೇ ಆಗಿದ್ದಾರೆ. ಇಷ್ಟೆಲ್ಲಾ ಆದ್ರೂ ಅಧಿಕಾರಿಗಳು ಸೋಂಕು ತಡೆಯುವ ಕ್ರಮದ ಬಗ್ಗೆ ತೀವ್ರ ನಿರ್ಲಕ್ಷ್ಯವಹಿಸುತ್ತಿದ್ದಾರೆ.

Published On - 8:30 am, Thu, 23 July 20