ಬೆಂಗಳೂರು: ಕಿಲ್ಲರ್ ಕೊರೊನಾ ರಾಜಧಾನಿ ಬೆಂಗಳೂರನ್ನು ಬೆನ್ನು ಬಿಡದೆ ಕಾಡುತ್ತಿದೆ. ನಗರದಲ್ಲಿ ಸೋಂಕು ಕಂಟ್ರೋಲ್ಗೆ ಬರ್ತಿಲ್ಲ. ಕೊರೊನಾ ರಣಕೇಕೆಯ ಕಂಡು ತಜ್ಞರಲ್ಲೇ ಆತಂಕ ಹೆಚ್ಚಾಗಿದೆ. ತುಂಬಾ ಡೇಂಜರಸ್ ಆಗಿ ಬೆಳೀತಿದೆ ಕೊರೊನಾ ವೈರಸ್.
ಹೌದು ಯಾವುದೇ ವೈರಸ್ ಆದ್ರು 6 ತಿಂಗಳ ನಂತರ ಆರ್ಭಟ ಕಮ್ಮಿ ಮಾಡುತ್ತೆ. ಆದ್ರೆ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋದು ತಜ್ಞ ವೈದ್ಯರಲ್ಲೂ ಆತಂಕವನ್ನುಂಟುಮಾಡಿದೆ. ಊಹೆಗೆ ಸಿಗದೇ ಕೊರೊನಾ ಆರ್ಭಟ ಮುಂದುವರಿಸಿದೆ. ಕೊರೊನಾ ಬಗ್ಗೆ ನಿರ್ಲಕ್ಷ್ಯಮಾಡಿದ್ರೆ ಜೀವಕ್ಕೇ ಆಪತ್ತು ಗ್ಯಾರಂಟಿ. ಲಕ್ಷ ಲಕ್ಷ ಸೋಂಕಿತರು ರಾಜ್ಯದಲ್ಲಿ ಪತ್ತೆಯಾಗ್ತಿದ್ದಾರೆ. ಬೆಂಗಳೂರಿನಲ್ಲೂ ಇದರ ಆರ್ಭಟ ಜಾಸ್ತಿಯಾಗ್ತಾನೇ ಇದೆ.
ಬೆಂಗಳೂರಿನಲ್ಲಿ ಆಗಸ್ಟ್ ವೇಳೆಗೆ 1ಲಕ್ಷದ 32 ಸಾವಿರದ 92 ಕೇಸ್ ಇತ್ತು. ಸದ್ಯ ಸೆಪ್ಟೆಂಬರ್ 28ರ ವೇಳೆಗೆ 2 ಲಕ್ಷದ 23 ಸಾವಿರದ 569 ಕೇಸ್ಗಳಾಗಿವೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೊರೊನಾ ಆರ್ಭಟ ಕಡಿಮೆಯಾಗುತ್ತೆ ಅನ್ನೋ ನಿರೀಕ್ಷೆ ಇತ್ತು. ಆದ್ರೆ ಕೊರೊನಾದಿಂದ ಪ್ರತಿದಿನ ಸೋಂಕಿತರು ಹೆಚ್ಚಾಗ್ತಿದ್ದಾರೆ. ಹೀಗಾಗಿ ಈ ಮಹಾಮಾರಿಯಿಂದ ಎಚ್ಚರಿಕೆಯಿಂದ ಇರಿ ಅಂತ ತಜ್ಞ ವೈದ್ಯರು ಹೇಳ್ತಿದ್ದಾರೆ.