ಆಸ್ಪತ್ರೆಯಲ್ಲಿ ಸೋಂಕಿತ ಕೊರೊನಾ ವಾರಿಯರ್ಸ್ ಮಸ್ತ್ ಮಸ್ತ್ ಡ್ಯಾನ್ಸ್.. ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Jul 24, 2020 | 10:50 AM

ಗದಗ: ಕೊರೊನಾ ಸೋಂಕಿತ ವಾರಿಯರ್ಸ್ ದೇಹಕ್ಕೆ ಅಂಟಿದ ವೈರಸ್ ವಿರುದ್ಧ ಹೋರಾಡಲು ಕುಣಿದು ಕುಪ್ಪಳಿಸಿ ಜೋಷ್ ತುಂಬಿಕೊಳ್ಳುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಮೇಲೆ ಬದುಕು ನಶ್ವರ ಎಂದು ಅಂದುಕೊಂಡವರೇ ಹೆಚ್ಚು. ಅದರಲ್ಲಿ ಕೆಲವರು ಮಾತ್ರ ಧೈರ್ಯದಿಂದ ಕೋವಿಡ್ ವಿರುದ್ಧ ಹೋರಾಡುತ್ತಿದ್ದಾರೆ. ಗದಗ ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿರುವ ಸೋಂಕಿತ ಕೊರೊನಾ ವಾರಿಯರ್ಸ್ ಎನರ್ಜಿ ಬೂಸ್ಟ್ ಮಾಡಿಕೊಳ್ಳುವುದಕ್ಕೆ ತಮ್ಮ ಚಿಂತೆ ಬಿಟ್ಟು ಸಖತ್ ಡ್ಯಾನ್ಸ್ ಮಾಡಿದ್ದಾರೆ. ಗದಗದ ಹೆರಿಗೆ ಆಸ್ಪತ್ರೆಯ ಮೂವರು ಸ್ಟಾಫ್ ನರ್ಸ್​ಗಳು ಕುಣಿದು ಕುಪ್ಪಳಿಸಿರುವ ವಿಡಿಯೋ ಫುಲ್ […]

ಆಸ್ಪತ್ರೆಯಲ್ಲಿ ಸೋಂಕಿತ ಕೊರೊನಾ ವಾರಿಯರ್ಸ್ ಮಸ್ತ್ ಮಸ್ತ್ ಡ್ಯಾನ್ಸ್.. ಎಲ್ಲಿ?
Follow us on

ಗದಗ: ಕೊರೊನಾ ಸೋಂಕಿತ ವಾರಿಯರ್ಸ್ ದೇಹಕ್ಕೆ ಅಂಟಿದ ವೈರಸ್ ವಿರುದ್ಧ ಹೋರಾಡಲು ಕುಣಿದು ಕುಪ್ಪಳಿಸಿ ಜೋಷ್ ತುಂಬಿಕೊಳ್ಳುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಮೇಲೆ ಬದುಕು ನಶ್ವರ ಎಂದು ಅಂದುಕೊಂಡವರೇ ಹೆಚ್ಚು. ಅದರಲ್ಲಿ ಕೆಲವರು ಮಾತ್ರ ಧೈರ್ಯದಿಂದ ಕೋವಿಡ್ ವಿರುದ್ಧ ಹೋರಾಡುತ್ತಿದ್ದಾರೆ. ಗದಗ ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿರುವ ಸೋಂಕಿತ ಕೊರೊನಾ ವಾರಿಯರ್ಸ್ ಎನರ್ಜಿ ಬೂಸ್ಟ್ ಮಾಡಿಕೊಳ್ಳುವುದಕ್ಕೆ ತಮ್ಮ ಚಿಂತೆ ಬಿಟ್ಟು ಸಖತ್ ಡ್ಯಾನ್ಸ್ ಮಾಡಿದ್ದಾರೆ.

ಗದಗದ ಹೆರಿಗೆ ಆಸ್ಪತ್ರೆಯ ಮೂವರು ಸ್ಟಾಫ್ ನರ್ಸ್​ಗಳು ಕುಣಿದು ಕುಪ್ಪಳಿಸಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಜೊತೆಗೆ ಅವರು ಕೊರೊನಾ ಬಗ್ಗೆ ಭಯ ಬೇಡ ಎಂದು ಸಂದೇಶ ಸಾರಿದ್ದಾರೆ. ಕೊರೊನಾ ಬಂದವರು ಯಾರು ಸಾಯೋದಿಲ್ಲ. ಈ ಸೋಂಕಿನಿಂದ ಗುಣಮುಖರಾಗಬಹುದು. ಕೊರೊನಾ ಬಂದ್ರೆ ಧೃತಿಗೆಡದೆ ಹೋರಾಡಲು ಮುಂದಾಗಬೇಕು ಎಂದು ಸಂದೇಶ ಸಾರಿದ್ದಾರೆ.

ಇವರಿಗೆ ಕಳೆದ 20 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು. ಸೋಂಕು ತಗುಲಿದ 15 ದಿನದ ಬಳಿಕ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಈಗ ಇವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.