ನಿರೀಕ್ಷೆಯಂತೆ ಅಮೆರಿಕಾದ ಮೇಲೆ ಗದಾಪ್ರಹಾರ ನಡೆಸಿದ ಚೀನಾ
ದೆಹಲಿ: ಚೀನಾದಲ್ಲೇ ಹುಟ್ಟಿ ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಅಮೆರಿಕವನ್ನು ಹೆಚ್ಚು ಕಾಡಿದೆ. ಹೀಗಾಗಿ ಮೊದಲಿಗಿಂತಲೂ ಈಗ ಅಮೆರಿಕಗೆ ಚೀನಾ ಕಂಡ್ರೆ ಆಗಲ್ಲ. ಚೀನಾ ಆ್ಯಪ್ಗಳನ್ನ ಬ್ಯಾನ್ ಮಾಡುವ ಬಗ್ಗೆ ಈಗಾಗಲೇ ಖಡಕ್ ನಿರ್ಧಾರ ತೆಗೆದುಕೊಂಡಿದೆ. ಜೊತೆಗೆ ಅಮೆರಿಕಾದ ಹೂಸ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿ ಮುಚ್ಚಲು ಅಮೆರಿಕ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಕ್ರಮಗಳಿಗೆ ಪ್ರತೀಕಾರವಾಗಿ ಚೀನಾ ಸಹ ಕ್ರಮ ಕೈಗೊಳ್ಳುವ ಸಾಧ್ಯತೆ ಇತ್ತು. ಅದರಂತೆ ಇಂದು ಚೀನಾದ ಸಿಂಚೂನ್ ಪ್ರಾಂತ್ಯದಲ್ಲಿರುವ ಚೆಂಗ್ಡುನಲ್ಲಿರುವ ಅಮೆರಿಕದ […]
ದೆಹಲಿ: ಚೀನಾದಲ್ಲೇ ಹುಟ್ಟಿ ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಅಮೆರಿಕವನ್ನು ಹೆಚ್ಚು ಕಾಡಿದೆ. ಹೀಗಾಗಿ ಮೊದಲಿಗಿಂತಲೂ ಈಗ ಅಮೆರಿಕಗೆ ಚೀನಾ ಕಂಡ್ರೆ ಆಗಲ್ಲ. ಚೀನಾ ಆ್ಯಪ್ಗಳನ್ನ ಬ್ಯಾನ್ ಮಾಡುವ ಬಗ್ಗೆ ಈಗಾಗಲೇ ಖಡಕ್ ನಿರ್ಧಾರ ತೆಗೆದುಕೊಂಡಿದೆ. ಜೊತೆಗೆ ಅಮೆರಿಕಾದ ಹೂಸ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿ ಮುಚ್ಚಲು ಅಮೆರಿಕ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಕ್ರಮಗಳಿಗೆ ಪ್ರತೀಕಾರವಾಗಿ ಚೀನಾ ಸಹ ಕ್ರಮ ಕೈಗೊಳ್ಳುವ ಸಾಧ್ಯತೆ ಇತ್ತು.
ಅದರಂತೆ ಇಂದು ಚೀನಾದ ಸಿಂಚೂನ್ ಪ್ರಾಂತ್ಯದಲ್ಲಿರುವ ಚೆಂಗ್ಡುನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮುಚ್ಚಲು ಚೀನಾ ಆದೇಶ ನೀಡಿದೆ. ಚೀನಾದಲ್ಲಿ ಆಮೆರಿಕಾದ ಐದು ಕಾನ್ಸುಲೇಟ್ ಕಚೇರಿಗಳಿವೆ. ಇವುಗಳ ಪೈಕಿ ಒಂದನ್ನು ಮುಚ್ಚಲು ಆದೇಶ ನೀಡಿದೆ.