ಇಸ್ರೇಲ್‌ ವಿಜ್ಞಾನಿಗಳು ಬಂದೇಬಿಟ್ರು.. 30 ಸೆಕೆಂಡ್​ನಲ್ಲಿ ಕೊರೊನಾ ಟೆಸ್ಟ್‌ ವರದಿ ಕೊಡ್ತಾರಂತೆ!

ಇಸ್ರೇಲ್‌ ವಿಜ್ಞಾನಿಗಳು ಬಂದೇಬಿಟ್ರು.. 30 ಸೆಕೆಂಡ್​ನಲ್ಲಿ ಕೊರೊನಾ ಟೆಸ್ಟ್‌ ವರದಿ ಕೊಡ್ತಾರಂತೆ!

ನವದೆಹಲಿ: ಭಾರತ ಮತ್ತು ಇಸ್ರೇಲ್‌ ನಡುವಿನ ಬಾಂಧವ್ಯದ ಬೆಸುಗೆ ಈಗ ಮತ್ತಷ್ಟು ಗಟ್ಟಿಯಾಗಿದೆ. ಇಡಿ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಉಭಯ ದೇಶಗಳು ಕೈಜೋಡಿಸಿದ್ದು, ಇದರನ್ವಯ ಎರಡೂ ದೇಶಗಳು ಸೇರಿ ಕೇವಲ 30 ಸೆಕೆಂಡ್ಸ್‌ನಲ್ಲಿ ಕೊರೊನಾ ಟೆಸ್ಟ್‌ ಮಾಡುವ ಟೆಸ್ಟಿಂಗ್‌ ಕಿಟ್‌ ಅಭಿವೃದ್ಧಿ ಮಾಡಲಿವೆ. ಈ ಸಂಬಂಧ ಭಾರತ ಮತ್ತು ಇಸ್ರೇಲ್‌ ವಿಜ್ಞಾನಿಗಳು ಜತೆಗೂಡಿ ಕಾರ್ಯನಿರ್ವಹಿಸುತ್ತಿದ್ದು, ಇಸ್ರೇಲ್‌ನ ಟೆಲ್‌ ಅವಿವ್‌ನಿಂದ ಇಸ್ರೇಲಿ ವಿಜ್ಞಾನಿಗಳ ತಂಡ ವಿಶೇಷ ವಿಮಾನದಲ್ಲಿ ಭಾರತಕ್ಕೆ ಬರಲಿದೆ. ಇದ್ರಲ್ಲಿ ಇಸ್ರೇಲ್‌ ವಿಜ್ಞಾನಿಗಳು […]

Guru

| Edited By:

Jul 25, 2020 | 5:39 PM

ನವದೆಹಲಿ: ಭಾರತ ಮತ್ತು ಇಸ್ರೇಲ್‌ ನಡುವಿನ ಬಾಂಧವ್ಯದ ಬೆಸುಗೆ ಈಗ ಮತ್ತಷ್ಟು ಗಟ್ಟಿಯಾಗಿದೆ. ಇಡಿ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಉಭಯ ದೇಶಗಳು ಕೈಜೋಡಿಸಿದ್ದು, ಇದರನ್ವಯ ಎರಡೂ ದೇಶಗಳು ಸೇರಿ ಕೇವಲ 30 ಸೆಕೆಂಡ್ಸ್‌ನಲ್ಲಿ ಕೊರೊನಾ ಟೆಸ್ಟ್‌ ಮಾಡುವ ಟೆಸ್ಟಿಂಗ್‌ ಕಿಟ್‌ ಅಭಿವೃದ್ಧಿ ಮಾಡಲಿವೆ.

ಈ ಸಂಬಂಧ ಭಾರತ ಮತ್ತು ಇಸ್ರೇಲ್‌ ವಿಜ್ಞಾನಿಗಳು ಜತೆಗೂಡಿ ಕಾರ್ಯನಿರ್ವಹಿಸುತ್ತಿದ್ದು, ಇಸ್ರೇಲ್‌ನ ಟೆಲ್‌ ಅವಿವ್‌ನಿಂದ ಇಸ್ರೇಲಿ ವಿಜ್ಞಾನಿಗಳ ತಂಡ ವಿಶೇಷ ವಿಮಾನದಲ್ಲಿ ಭಾರತಕ್ಕೆ ಬರಲಿದೆ. ಇದ್ರಲ್ಲಿ ಇಸ್ರೇಲ್‌ ವಿಜ್ಞಾನಿಗಳು ತಮ್ಮ ಜೊತೆಗೆ ಇಸ್ರೇಲಿ ತಂತ್ರಜ್ಞಾನವನ್ನ ತರಲಿದ್ದಾರೆ. ಇಷ್ಟೇ ಅಲ್ಲ ಅತ್ಯುತ್ತಮ ತಂತ್ರಜ್ಞಾನದ ವೆಂಟಿಲೇಟರ್‌ಗಳು ಕೂಡಾ ಭಾರತಕ್ಕೆ ಬರಲಿವೆ. ಇದಕ್ಕಾಗಿ ಇಸ್ರೇಲಿನ ವಿದೇಶಾಂಗ ಸಚಿವಾಲಯ ವಿಶೇಷ ಅನುಮತಿ ನೀಡಿದೆ.

ಈ ಸಂಬಂಧ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮೂರು ಬಾರಿ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ಮತ್ತು ಇಸ್ರೇಲ್‌ ನಡವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದ್ದು, ಉಭಯ ದೇಶಗಳ ಸಹಯೋಗದಲ್ಲಿ ಕೊರೊನಾ ವಿರುದ್ಧ ಜಂಟಿಯಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಿವೆ ಎಂದು ಭಾರತದಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ತಿಳಿಸಿದೆ.

Follow us on

Related Stories

Most Read Stories

Click on your DTH Provider to Add TV9 Kannada