ಪ್ರೀತಿಯಿಂದ ಸಾಕಿದ್ದ ಹಸುವನ್ನೇ ಮಾರಿ, ಮಕ್ಕಳಿಗೆ ಮೊಬೈಲ್ ತಂದುಕೊಟ್ಟ ಅಪ್ಪ! ಯಾಕೆ ಗೊತ್ತಾ?
ಹಿಮಾಚಲ ಪ್ರದೇಶ: ತಂದೆ ಕುಟುಂಬದ ಭದ್ರ ಬುನಾದಿ ಇದ್ದಂತೆ, ತನ್ನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತನ್ನನ್ನ ಅರ್ಪಿಸುವ ಗುಣ ತಂದೆಗೆ ಇರುತ್ತೆ ಎನ್ನುತ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ತನ್ನ ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ತನ್ನ ಕುಟುಂಬದ ಆದಾಯವಾಗಿದ್ದ ಹಸುವನ್ನೇ ಮಾರಿದ್ದಾರೆ. ಕೊರೊನಾ ಮಾರಿಯಿಂದ ಇನ್ನೂ ಏನೇನು ಕಷ್ಟನಷ್ಟ ಅನುಭವಿಸಬೇಕೋ.. ಹಿಮಾಚಲ ಪ್ರದೇಶದ ಕುಲದೀಪ್ ಕುಮಾರ್ ತನ್ನ ಇಬ್ಬರು ಮಕ್ಕಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಮೊಬೈಲ್ ಫೋನ್ ಖರೀದಿಸಲು ತನ್ನ ಏಕೈಕ ಆದಾಯದ ಮೂಲವಾದ ಹಸುವನ್ನು ಮಾರಿದ್ದಾರೆ. […]
ಹಿಮಾಚಲ ಪ್ರದೇಶ: ತಂದೆ ಕುಟುಂಬದ ಭದ್ರ ಬುನಾದಿ ಇದ್ದಂತೆ, ತನ್ನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತನ್ನನ್ನ ಅರ್ಪಿಸುವ ಗುಣ ತಂದೆಗೆ ಇರುತ್ತೆ ಎನ್ನುತ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ತನ್ನ ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ತನ್ನ ಕುಟುಂಬದ ಆದಾಯವಾಗಿದ್ದ ಹಸುವನ್ನೇ ಮಾರಿದ್ದಾರೆ.
ಕೊರೊನಾ ಮಾರಿಯಿಂದ ಇನ್ನೂ ಏನೇನು ಕಷ್ಟನಷ್ಟ ಅನುಭವಿಸಬೇಕೋ.. ಹಿಮಾಚಲ ಪ್ರದೇಶದ ಕುಲದೀಪ್ ಕುಮಾರ್ ತನ್ನ ಇಬ್ಬರು ಮಕ್ಕಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಮೊಬೈಲ್ ಫೋನ್ ಖರೀದಿಸಲು ತನ್ನ ಏಕೈಕ ಆದಾಯದ ಮೂಲವಾದ ಹಸುವನ್ನು ಮಾರಿದ್ದಾರೆ. ಕೊರೊನಾ ಕಂಟಕದಿಂದ ಮಾರ್ಚ್‌ನಲ್ಲಿ ಶಾಲೆಗಳು ಮುಚ್ಚಿದರಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿ 4 ನೇ ತರಗತಿ ಮತ್ತು 2 ನೇ ತರಗತಿಯಲ್ಲಿ ಓದುತ್ತಿರುವ ತನ್ನ ಮಕ್ಕಳು ತರಗತಿಗಳಿಗೆ ಹಾಜರಾಗಬೇಕೆಂದು ಹಸು ಮಾರಿ ಬಂದ ಹಣದಿಂದ ಸ್ಮಾರ್ಟ್‌ಫೋನ್ ಕೊಡಿಸಿದ್ದಾರೆ.
ಸ್ಮಾರ್ಟ್‌ಫೋನ್ ಇಲ್ಲದೆ ಮಕ್ಕಳಿಗೆ ವ್ಯಾಸಂಗ ಮುಂದುವರಿಸುವುದು ಕಷ್ಟಕರವಾಗಿತ್ತು. ಹಾಗೂ ನಮ್ಮ ಬಡತನ ನೋಡಿ ಯಾರೂ ಸಾಲ ಕೊಡಲು ಮುಂದೆ ಬರಲಿಲ್ಲ. ಹೀಗಾಗಿ ಹಸು ಮಾರುವುದು ಅನಿವಾರ್ಯವಾಗಿತ್ತು ಎಂದು ಕುಲದೀಪ್ ಕುಮಾರ್ ಹೇಳಿದ್ದಾರೆ.
ಕೊರೊನಾ ಸಂತ್ರಸ್ತರ ಆಪತ್ಬಾಂದವ Super Hero ಸೋನು ಸೂದ್ ಸ್ಪಂದನೆ ಈ ಮಧ್ಯೆ, ಕೊರೊನಾ ಸಂಕಷ್ಟ ಕಾಲದಲ್ಲಿ ಆಪತ್ಬಾಂದವನಾಗಿ ಕಂಡುಬಂದಿರುವ ನಟ ಸೋನು ಸೂದ್ ಅವರು ತಕ್ಷಣ ಹಿಮಾಚಲ ಪ್ರದೇಶದ ಕುಲದೀಪ್ ಕುಮಾರ್ ಸಂಕಷ್ಟಕ್ಕೆ ಮರುಗಿ, ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತಕ್ಷಣ ಆ ಬಡ ತಂದೆಯ ವಿವರ ನೀಡಿ, ಅವರ ಹಸುವನ್ನು ವಾಪಸ್ ಕೊಡಿಸೋಣ ಎಂದು ಹೇಳಿದ್ದಾರೆ.
https://twitter.com/SonuSood/status/1286233816185450496?s=20
Published On - 5:22 pm, Thu, 23 July 20